ಕೋವಿಡ್-19 ಸಾಂಕ್ರಾಮಿಕ ರೋಗದ 2ನೆ ಅಲೆಯು ರಾಜ್ಯದಲ್ಲಿ
ಹೆಚ್ಚಾಗಿ ಹರಡುತ್ತಿರುವುದರಿಂದ ಮತ್ತು ಸಾರ್ವಜನಿಕ
ಆರೋಗ್ಯದ ಹಿತದೃಷ್ಠಿಯಿಂದ ಏ. 17 ರಂದು ಏರ್ಪಡಿಸಲು
ಉದ್ದೇಶಿಸಲಾಗಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಗ್ರಾಮ
ವಾಸ್ತವ್ಯ ಕಾರ್ಯಕ್ರಮವನ್ನು ಸರ್ಕಾರದ ನಿರ್ದೇಶನದಂತೆ
ರದ್ದುಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು
ತಿಳಿಸಿದ್ದಾರೆ.
ಏ.17 ರಂದು ಹಮ್ಮಿಕೊಳ್ಳಲಾಗಿದ್ದ, ನ್ಯಾಮತಿ ತಾಲ್ಲೂಕಿನ
ಬೆಳಗುತ್ತಿ ಹೋಬಳಿಯ ಬೆಳಗುತ್ತಿ ಗ್ರಾಮ, ಹೊನ್ನಾಳಿ
ತಾಲ್ಲೂಕಿನ ಕಸಬಾ ಹೋಬಳಿಯ ಸೊರಟೂರು, ಜಗಳೂರು

ತಾಲ್ಲೂಕಿನ ಕಸಬಾ ಹೋಬಳಿಯ ಹಾಲೇಹಳ್ಳಿ, ದಾವಣಗೆರೆ ತಾಲ್ಲೂಕಿನ
ಕಸಬಾ ಹೋಬಳಿಯ ಪುಟಗನಾಳು, ಹರಿಹರ ತಾಲ್ಲೂಕಿನ
ಮಲೆಬೆನ್ನೂರು ಹೋಬಳಿಯ ಯಲವಟ್ಟಿ, ಹಾಗೂ ಚನ್ನಗಿರಿ
ತಾಲ್ಲೂಕಿನ ಬಸವಾಪಟ್ಟಣ-2 ಹೋಬಳಿಯ ನಲ್ಕುದುರೆ ಈ ಗ್ರಾಮಗಳ
ಗ್ರಾಮ ವಾಸ್ತವ್ಯವನ್ನು ರದ್ದುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ
ಮಹಾಂತೇಶ ಬೀಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *