ಹೊನ್ನಾಳಿ ಪಟ್ಟಣದಲ್ಲಿ ಇಂದು ತಾಲೂಕು ದಂಡಾಧಿಕಾರಿಗಳು ಮತ್ತು ಪೊಲೀಸ್ ಇಲಾಖೆ ಹಾಗೂ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳ ನೇತೃತ್ವದಲ್ಲಿ ಕೊರೋನಾ 2ನೇ ಅಲೆಯ ಅಂಗವಾಗಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಬೀದಿ ವ್ಯಾಪಾರಿಗಳಿಗೆ ಮತ್ತು ಅಂಗಡಿ ಹತ್ತಿರ ತೆರಳಿ ಪ್ರತಿಯೊಬ್ಬರೂ ಮಾಸ್ಕನ್ನು ಧರಿಸಬೇಕು ನಿಮ್ಮ ನಿಮ್ಮ ಗ್ರಾಹಕರುಗಳಿಗೆ ಮಾಸ್ಕ್ ಹಾಕಿಕೊಂಡು ಬಂದರೆ ಮಾತ್ರ ಸಾಮಾನುಗಳನ್ನು ಕೊಡುತ್ತೇವೆ ಎಂದು ಹೇಳಿ ಎಂದು ಪ್ರತಿಯೊಂದು ಅಂಗಡಿಗಳಿಗೆ ತೆರಳಿ ಜಾಗೃತಿಯನ್ನು ಮೂಡಿಸಿದರು.
ಇವರ ಉಪಸ್ಥಿತಿಯಲ್ಲಿ ಹೊನ್ನಾಳಿ ದಂಡಾಧಿಕಾರಿಗಳಾದ ಬಸವರಾಜ ಕೊಟೂರು,ರಕ್ಷಣಾ ಇಲಾಖೆ ಅಧಿಕಾರಿಗಳು ಸರ್ಕಲ್ ಇನ್ಸ್ಪೆಕ್ಟರ್ ರವರಾದ ಟಿವಿ ದೇವರಾಜ್ ,ಸಬ್ಇನ್ಸ್ಪೆಕ್ಟರ್ ಬಸವರಾಜ್ ಬೀರದಾರ್ ,ಪಟ್ಟಣ ಪಂಚಾಯತಿಯ ಮುಖ್ಯ ಅಧಿಕಾರಿಗಳಾದ ಸತೀಶ್ ಅವರು ಮತ್ತು ಅವರ ಸಿಬ್ಬಂದಿ ವರ್ಗದವರು ಸಹ ಭಾಗಿಯಾಗಿದ್ದರು.