ತೀವ್ರ ಗಂಡಾಂತರ ಕಾದಿದೆ ಎಚ್ಚೆತ್ತುಕೊಳ್ಳಿ : ಡಿಸಿ

ಜಿಲ್ಲೆಯಲ್ಲಿ ಕೊರೊನ 2ನೇ ಅಲೆ ತೀವ್ರವಾಗಿ ವ್ಯಾಪಿಸುತ್ತಿದ್ದು
ಸಾರ್ವಜನಿಕರು ಮುಂಜಾಗ್ರತೆ ವಹಿಸದಿದ್ದರೆ ಭಾರೀ
ಗಂಡಾಂತರಕ್ಕೆ ಸಿಲುಕಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ
ಮಹಾಂತೇಶ್ ಬೀಳಗಿ ಹೇಳಿದರು.
ನಗರದಲ್ಲಿ ಭಾನುವಾರ ಬೆಳಿಗ್ಗೆ ಜನನಿಬಿಡ ಪ್ರದೇಶಗಳಾದ
ತರಕಾರಿ ಮಾರುಕಟ್ಟೆ, ಎಪಿಎಂಸಿ, ಗಡಿಯಾರ ಕಂಬ ಸೇರಿದಂತೆ
ಹಲವೆಡೆ ಖುದ್ದಾಗಿ ಭೇಟಿ ನೀಡಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ,
ವರಿಷ್ಠಾಧಿಕಾರಿ ಹನುಮಂತರಾಯ ಕೊರೊನ ಸೋಂಕಿನ
ಕುರಿತು ಜಾಗೃತಿ ಮೂಡಿಸಿದರು. ನಿಯಮ ಉಲ್ಲಂಘಿಸಿದವರಿಗೆ
ಸ್ಥಳ ದಂಡ ವಿಧಿಸುವ ಎಚ್ಚರಿಕೆ ನೀಡಿದರು.
ಈ ವೇಳೆ ಮಾಸ್ಕ್ ಧರಿಸದ ಸಾರ್ವಜನಿಕರನ್ನು ಖುದ್ದಾಗಿ ಕ್ಲಾಸ್
ತೆಗೆದುಕೊಂಡು ಸ್ಥಳ ದಂಡ ಹಾಕಿದ ಜಿಲ್ಲಾಧಿಕಾರಿ ಹಾಗೂ ಎಸ್.ಪಿ,
ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸ್ಯಾನಿಟೈಸ್ ಮಾಡಿಕೊಂಡು ಸಾಮಾಜಿಕ
ಅಂತರವನ್ನು ಕಾಯ್ದುಕೊಳ್ಳಿ. ನಿಮ್ಮ ಬಗ್ಗೆ ನೀವು
ಜಾಗರೂಕರಾಗಿರಿ. ನಿಮಗಾಗಿ ರಜೆ ದಿನಗಳನ್ನು ನೋಡದೆ
ನಾವು ಕಾರ್ಯ ನಿರ್ವಹಿಸುತ್ತಿದ್ದೇವೆ. ನಮಗೂ ಮನೆ, ಹೆಂಡತಿ,
ಮಕ್ಕಳಿದ್ದಾರೆ. ಅರ್ಥಮಾಡಿಕೊಳ್ಳಿ. ಕೋವಿಡ್
ನಿಯಮಗಳನ್ನು ಪಾಲಿಸದವರಿಗೆ ದಂಡ ವಿಧಿಸಲಾಗುತ್ತದೆ
ಎಂದು ಎಚ್ಚರಿಸಿದರು.
ಈ ವೇಳೆ ಪತ್ರಕತ್ರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ
ಮಹಾಂತೇಶ್ ಬೀಳಗಿ, ಗ್ರೀನ್ ಜೋನ್ ಅಲ್ಲಿದ್ದ ದಾವಣಗೆರೆಯಲ್ಲಿ
ಒಂದೆರಡು ಕೇಸ್ ಬಂದಾಗ ಎಷ್ಟು ಜಾಗರೂಕತೆಯಿಂದ
ಸಹಕಾರ ನೀಡುತ್ತಿದ್ದರು. ಆದರೆ ಇಂದು ದಿನದಿಂದ ದಿನಕ್ಕೆ
ಸೋಂಕು ತೀವ್ರಗೊಳ್ಳುತ್ತಿದೆ. ಶನಿವಾರ 122 ಹಾಗೂ
ಭಾನುವಾರ 180 ಪ್ರಕರಣಗಳು ವರದಿಯಾಗಿದ್ದು ಈಗಾಗಲೇ
500 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿವೆ. ಆದರು ಸಹ

ಜನರು ಕೊರೊನ ಭಯವೇ ಇಲ್ಲದಂತೆ ಬೇಜವ್ಬಾರಿಯಿಂದ
ವರ್ತಿಸುತ್ತಿದ್ದಾರೆ ಎಂದರು.
ಇದು ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ನಾವು
ಕೂಡ ಸಹಿಸುವುದಿಲ್ಲ. ನಿಯಮ ಉಲ್ಲಂಘನೆ ಮಾಡುವವರಿಗೆ
ಕಾನೂನಾತ್ಮಕವಾದ ಕ್ರಮ ತೆಗೆದುಕೊಳ್ಳುತ್ತೇವೆ. ಈಗ
ಕೋವಿಡ್ ಕುರಿತು ಜನಸಾಮಾನ್ಯರು ಎಚ್ಚೆತ್ತುಕೊಳ್ಳದಿದ್ದಾರೆ
ಮುಂದಿನ ದಿನಗಳಲ್ಲಿ ಬಾರಿ ದಂಡ ತೆರಬೇಕಾಗುತ್ತದೆ ಎಂದು
ಎಚ್ಚರಿಸಿದರು.
ನಿನ್ನೆಯ ವಿಡಿಯೋ ಕಾನ್ಫರೆನ್ಸ್ ನಲ್ಲಿ ಮೂವರು ಸಚಿವರು
ಕಟ್ಟುನಿಟ್ಟಿನ ಸೂಚನೆ ನೀಡಿದ್ದು ಅವರ ಸೂಚನೆಗಳನ್ನು
ಕಾರ್ಯಗತಗೊಳಿಸಲಾಗುವುದು. ಈ ಹಿನ್ನೆಲೆಯಲ್ಲಿ ಇಂದು
ಹೆಚ್ಚು ಜನಸಂದಣಿ ಇರುವ ಸ್ಥಳಗಳಲ್ಲಿ ಕಾರ್ಯಾಚರಣೆ
ನಡೆಸಲಾಗುತ್ತಿದೆ. ಹಾಗೂ ವಿವಿಧ ಸಮಾರಂಭಗಳಲ್ಲಿ ಎಷ್ಟು
ಜನ ಸೇರಬೇಕು ಎಂಬ ಸೂಚನೆ ನೀಡಲಾಗಿದ್ದು ಎಲ್ಲರೂ
ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರೊಂದಿಗೆ
ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ತಿಳಿಸಿದರು.
ಕರ್ತವ್ಯ ನಿರತ ವೈದ್ಯರುಗಳಿಗೆ ಒಂದು ವೇಳೆ ಪಾಸಿಟಿವ್
ಬಂದರೆ ಅಂತಹವರನ್ನು ಸರ್ಕಾರಿ ಗೆಸ್ಟ್ ಹೌಸ್‍ಗಳಲ್ಲಿ
ಕ್ವಾರಂಟೈನ್ ಮಾಡಲು ಈಗಾಗಲೇ ಸರ್ಕಾರಿ ಗೆಸ್ಟ್ ಹೌಸ್‍ಗಳನ್ನು
ನಮ್ಮ ಸುಪರ್ದಿಗೆ ತೆಗೆದುಕೊಳ್ಳಲಾಗಿದೆ. ಹಾಗೂ
ಆಸ್ಪತ್ರೆಗಳಲ್ಲಿ ರೋಗಿಗಳನ್ನು ನೋಡಲು
ಬರುವವರನ್ನು ನಿಯಂತ್ರಿಸಲು ಬ್ಯಾರಿಕೇಡ್ ಹಾಕಲಾಗಿದೆ.
ಈಗಾಗಲೇ ಜಿಲ್ಲೆಯ ಆಸ್ಪತ್ರೆಗಳಲ್ಲಿ 1882 ಬೆಡ್‍ಗಳು
ಸಿದ್ದವಿದ್ದು 159 ಬೆಡ್‍ಗಳು ಭರ್ತಿಯಾಗಿವೆ. ಹಿಂದಿನ ವರ್ಷ 933
ಹಾಸಿಗೆಗಳು ಸಾಕಾಗಿದ್ದವು. ಹಾಗಾಗಿ ಎಂತಹ ಪರಿಸ್ಥಿತಿ ಬಂದರೂ
ನಿಭಾಯಿಸಲು ಜಿಲ್ಲಾಡಳಿತ ಸಿದ್ಧವಿದೆ ಎಂದರು.
ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮಾತನಾಡಿ,
ಕೊರೋನ ಸೋಂಕು ತೀವ್ರಗೊಳ್ಳುತ್ತಿದ್ದರು ಜನರು
ನಿರ್ಲಕ್ಷ್ಯವಹಿಸುತ್ತಿದ್ದಾರೆ. ಈಗಾಗಲೇ ಜಿಲ್ಲಾಧಿಕಾರಿಗಳೊಂದಿಗೆ
ಜನಸಂದಣಿ ಇರುವ ಸ್ಥಳಗಳಿಗೆ ತೆರಳಿ ಜಾಗೃತಿ ಮೂಡಿಸಿ
ನಿಯಮ ಉಲ್ಲಂಘನೆ ಮಾಡುವವರಿಗೆ ಸ್ಥಳ ದಂಡ
ವಿಧಿಸುತ್ತಿದ್ದೇವೆ. ಮದುವೆ ಸಮಾರಂಭ, ಕಲ್ಯಾಣಮಂಟಪ,
ರಾಜಕೀಯ ಆಚರಣೆಗಳು ಸೇರಿದಂತೆ ಸಭೆ
ಸಮಾರಂಭಗಳಲ್ಲಿ ಜನ ಸಂಖ್ಯೆ ಮಿತಿಗೊಳಿಸಿದ್ದೇವೆ. ಹಾಗೂ
ಧಾರ್ಮಿಕ ಆಚರಣೆಗಳನ್ನು ನಿಷೇಧಿಸಿದ್ದೇವೆ. ನಿಯಮ
ಉಲ್ಲಂಘನೆ ಮಾಡುವವರ ವಿರುದ್ಧ ಕಠಿಣ ಕ್ರಮ
ತೆಗೆದುಕೊಳ್ಳಲಾಗುವುದು. ಹಾಗೂ ರೆಮ್‍ಡೆಸಿವರ್
ಸೂಜಿಮದ್ದನ್ನು ಕಾಳಸಂತೆಯಲ್ಲಿ ಮಾರಟವಾಗುವುದು
ಕಂಡುಬಂದರೆ ಅಂತಹವರ ವಿರುದ್ಧ ಕಠಿಣ ಕ್ರಮ
ತೆಗದುಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಜಾಗೃತಿ ಅಬಿಯಾನದಲ್ಲಿ ಎಸಿ ಮಮತ ಹೊಸಗೌಡರ್, ಪಾಲಿಕೆ
ಆಯುಕ್ತ ವಿಶ್ವನಾಥ್ ಮುದಜ್ಜಿ, ತಹಶೀಲ್ದಾರ್ ಗಿರೀಶ್ ಇದ್ದರು.

Leave a Reply

Your email address will not be published. Required fields are marked *