2021-22ನೇ ಸಾಲಿನಲ್ಲಿ ಪರಿಶಿಷ್ಟ ವರ್ಗದ ಕಾನೂನು
ಪದವೀಧರರಿಗೆ ಆಡಳಿತ ನ್ಯಾಯಧೀಕರಣದಲ್ಲಿ ತರಬೇತಿ
ನೀಡಲು ಕಾನೂನು ಪದವಿ ಹೊಂದಿದ ಅರ್ಹ ಅಭ್ಯರ್ಥಿಗಳಿಂದ
ಅರ್ಜಿಗಳನ್ನು ಆಹ್ವಾನಿಸಲಾಗಿದೆ.
   ಜಿಲ್ಲೆಗೆ 08 ಭೌತಿಕ ಗುರಿಯನ್ನು ನಿಗದಿಪಡಿಸಲಾಗಿದ್ದು, ಪರಿಶಿಷ್ಟ
ಪಂಗಡದ ಕಾನೂನು ಪದವೀಧರರು ಆಡಳಿತ
ನ್ಯಾಯಧೀಕರಣದಲ್ಲಿ ತರಬೇತಿ ಪಡೆಯಲು ಅರ್ಜಿಗಳನ್ನು
ಆನ್‍ಲೈನ್ ಮೂಲಕ ಸಲ್ಲಿಸಬೇಕು.
ಅದರಂತೆ ಜಿಲ್ಲೆಯ ಪರಿಶಿಷ್ಟ ಪಂಗಡದ ಕಾನೂನು ಪದವಿ
ಹೊಂದಿರುವ ಅಭ್ಯರ್ಥಿಗಳು ಇಲಾಖೆಯ ವೆಬ್‍ಸೈಟ್/ವಿಳಾಸ:
ತಿತಿತಿ.ಣತಿ.ಞಚಿಡಿ.ಟಿiಛಿ.iಟಿ ನಲ್ಲಿ ಮೇ.01 ರಿಂದ ಜೂ.31 ರವರೆಗೆ ಆನ್‍ಲೈನ್
ಮೂಲಕ ಅರ್ಜಿ ಸಲ್ಲಿಸಿ, ಸೂಕ್ತ ದಾಖಲೆಗಳನ್ನು ಗೆಜೆಟೆಡ್
ಅಧಿಕಾರಿಗಳವರಿಂದ ದೃಢೀಕರಿಸಿ, ಆಯಾ ತಾಲ್ಲೂಕು ಪರಿಶಿಷ್ಟ
ವರ್ಗಗಳ ಕಲ್ಯಾಣಾಧಿಕಾರಿಗಳವರ ಕಚೆÉೀರಿಗೆ
ಸಲ್ಲಿಸಬೇಕು. ತದನಂತರ ಬರುವ ಅರ್ಜಿಗಳನ್ನು
ಪರಿಗಣಿಸಲಾಗುವುದಿಲ್ಲ. 
    ಅರ್ಜಿ ಸಲ್ಲಿಸಲು ಗೊತ್ತುಪಡಿಸಿದ ಕೊನೆಯ ದಿನಾಂಕಕ್ಕೆ
ಕಾನೂನು ಪದವಿಯನ್ನು ಪಡೆದು ಎರಡು ವರ್ಷ
ಮೀರಿರಬಾರದು.  ತರಬೇತಿಯನ್ನು ದಾವಣಗೆರೆ
ಜಿಲ್ಲೆಯಲ್ಲಿಯೇ ಪಡೆಯಬೇಕು. ಅರ್ಜಿ ಸಲ್ಲಿಸುವ ಕೊನೆಯ
ದಿನಾಂಕಕ್ಕೆ ಅಭ್ಯರ್ಥಿಯ ವಯಸ್ಸು 40 ವರ್ಷಮೀರಿರಬಾರದು.
ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿ ಅವಧಿಯು
ಸರ್ಕಾರದ ಪರಿಷ್ಕøತ ಆದೇಶದಂತೆ 02 ವರ್ಷದಾಗಿದ್ದು, ಮಾಸಿಕ
ರೂ.10,000/-ಗಳಂತೆ ಶಿಷ್ಯವೇತನವನ್ನು ನೀಡಲಾಗುವುದು.
ಪರಿಶಿಷ್ಟ ವರ್ಗದ ಕಾನೂನು ಪದವೀಧರರ ವಾರ್ಷಿಕ
ವರಮಾನ ಮಿತಿ ರೂ.2 ಲಕ್ಷಗಳ ಒಳಗಾಗಿ ಇರತಕ್ಕದ್ದು.
ಆಯ್ಕೆಯಾದ ಅಭ್ಯರ್ಥಿಗಳು ಜಿಲ್ಲಾ ಪ್ರಾಸಿಕ್ಯೂಟರ್ ಸರ್ಕಾರಿ
ವಕೀಲರು ಅಥವಾ 20 ವರ್ಷಗಳ ಕಾಲ ಕಡಿಮೆ  ಇಲ್ಲದ ವಕೀಲ
ವೃತ್ತಿಯಲ್ಲಿ ಸೇವೆ ಸಲ್ಲಿಸಿರುವ ನ್ಯಾಯವಾದಿಗಳ ಬಳಿ ತರಬೇತಿ
ಪಡೆಯಬೇಕು.        
    ತರಬೇತಿ ಅವಧಿ 2 ವರ್ಷವಿದ್ದು, ಆಯ್ಕೆಯಾದ
ಅಭ್ಯರ್ಥಿಗಳು ತರಬೇತಿಯನ್ನು ಮಧ್ಯದಲ್ಲಿ ಬಿಡುವ
ಹಾಗಿಲ್ಲ.   ಹಾಗೂ ಒಂದು ವೇಳೆ ಬಿಟ್ಟರೆ ತರಬೇತಿ ಅವಧಿಯಲ್ಲಿ
ಪಡೆದ ಶಿಷ್ಯವೇತನಕ್ಕೆ ಶೇ.10 ಬಡ್ಡಿಯೊಂದಿಗೆ  ಸರ್ಕಾರಕ್ಕೆ
ಹಿಂದಿರುಗಿಸುವುದಾಗಿ ಮುಚ್ಚಳಿಕೆ ಪತ್ರ ಬರೆದು

ಕೊಡಬೇಕು. ಆಯ್ಕೆಯಾದ ಅಭ್ಯರ್ಥಿಗಳು ಸುಳ್ಳು ಮಾಹಿತಿ
ಹಾಗೂ ಸುಳ್ಳು ದಾಖಲಾತಿಗಳನ್ನು ನೀಡಿ, ಆಯ್ಕೆಯಾಗಿ
ಶಿಷ್ಯವೇತನವನ್ನು ಪಡೆದರೆ ಅಂತಹ ಅಭ್ಯರ್ಥಿಗಳು
ತರಬೇತಿ ಅವಧಿಯಲ್ಲಿ ಪಡೆದ ಶಿಷ್ಯವೇತನವನ್ನು ಶೇ.10
ರಷ್ಟು ಬಡ್ಡಿಯೊಂದಿಗೆ ಕಾನೂನು ರೀತ್ಯಾ ವಸೂಲಿಗೆ ಕ್ರಮ
ವಹಿಸುವುದು ಅಥವಾ ಭೂ ಕಂದಾಯ ಬಾಕಿ  ವಸೂಲಿಯಂತೆ
ವಸೂಲು ಮಾಡಲಾಗುವುದು. 
ಆನ್‍ಲೈನ್‍ನಲ್ಲಿ ಅಪ್‍ಲೋಡ್ ಮಾಡಿರುವ ಎಲ್ಲಾ ದಾಖಲಾತಿಗಳ 02
ಸೆಟ್‍ಗಳನ್ನು ಗೆಜೆಟೆಡ್ ಅಧಿಕಾರಿಗಳಿಂದ ದೃಢೀಕರಿಸಿ ಜಿಲ್ಲಾ
ಕಚೇರಿಗೆ ಸಲ್ಲಿಸುವುದು. ತಪ್ಪಿದಲ್ಲಿ ಅಂತಹ ಅರ್ಜಿಗಳನ್ನು
ತಿರಸ್ಕರಿಸಲಾಗುವುದೆಂದು  ಜಿಲ್ಲಾ ಪರಿಶಿಷ್ಟ ವರ್ಗಗಳ
ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *