ಕೊರೊನಾ 19 ಸಾಂಕ್ರಾಮಿಕ ರೋಗ ಹೆಚ್ಚಾಗಿ
ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಮಾರ್ಗಸೂಚಿ
ಅನ್ವಯವಾಗಿ ಏ.22 ರಂದು ಕಫ್ರ್ಯೂ ಜಾರಿಯಲ್ಲಿರುವುದರಿಂದ
ಹಾಗೂ ಕೃಷಿ ಮಾರಾಟ ಇಲಾಖೆಯ ನಿರ್ದೇಶಕರ ಆದೇಶದಂತೆ
ಮೇ.04 ರವರೆಗೆ ಬರುವ ಪ್ರತಿ ಶನಿವಾರ ಮತ್ತು
ಭಾನುವಾರಗಳಂದು ಹರಿಹರ ಕೃಷಿ ಉತ್ಪನ್ನ
ಮಾರುಕಟ್ಟೆಯಲ್ಲಿ ಯಾವುದೇ ವ್ಯಾಪಾರ ವಹಿವಾಟುಗಳನ್ನು
ಸ್ಥಗಿತಗೊಳಿಸಿ ಮಾರುಕಟ್ಟೆಗೆ ರಜಾ ದಿನವೆಂದು
ಘೋಷಿಸಲಾಗಿದೆ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ
ಸಮಿತಿಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.