ಹೊನ್ನಾಳಿ ತಾಲೂಕು ಸಾಸ್ವೆಹಳ್ಳಿ ಕ್ಯಾಸಿನಕೇರಿಯಲ್ಲಿರುವ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಇಂದು ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಶೀಲಾ ಗದ್ದಿಗೇಶ್ ರವರು ಸುಮಾರು 20 ಜನ ಆಶಾಕಾರ್ಯಕರ್ತೆಯರು ನಿಸ್ಕಲ್ಮಷವಾಗಿ ಸೇವೆಯನ್ನು ಮಾಡುತ್ತಿರುವುದನ್ನು ಗುರುತಿಸಿ ಅವರುಗಳಿಗೆ ಸನ್ಮಾನಿಸಲಾಯಿತು.
ನಂತರ ಶಿಲಾ ಗದ್ದಿಗೇಶ್ ಅವರು ಮಾತನಾಡಿ ನಾವು ಈ ಒಂದು ವರ್ಷದ ಹಿಂದೆ ಮಾಜಿ ಶಾಸಕರಾದ ಡಿ ಜಿಶಾಂತನ ಗೌಡ್ರು, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರಾದ ಹೆಚ್.ಬಿ ಮಂಜಪ್ಪ , ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗದ್ದಿಗೇಶ್ ಅವರು ಪಕ್ಷದ ಮುಖಂಡರು ನೇತೃತ್ವದಲ್ಲಿ ಸಾಸ್ವೇಹಳ್ಳಿ ಆರೋಗ್ಯ ಕೇಂದ್ರದ ಪಕ್ಕದಲ್ಲಿ ಇರುವ ಈ ಭಾಗದ ರೆವಿನ್ಯೂ ಇಲಾಖೆ ಅಧಿಕಾರಿಗಳು ಮತ್ತು ನರ್ಸ್ ಗಳಿಗೆ ಕೊರೋನಾ ಇರುವ ಸಂದರ್ಭದಲ್ಲಿ ಅವರಿಗೆ ಸನ್ಮಾನಿಸಲಾಗಿತ್ತು.
ಆ ಸಮಯದಲ್ಲಿ ಆಶಾ ಕಾರ್ಯಕರ್ತೆಯರು ತುರ್ತು ಸೇವೆಯಲ್ಲಿ ಇದ್ದ ಕಾರಣ ಅವರುಗಳಿಗೆ ಸನ್ಮಾನ ಮಾಡಲಿಕ್ಕೆ ಆಗಿರಲಿಲ್ಲ ಆದಕಾರಣ ಇಂದು ಅವರಿಗೆ ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು ಎಂದು ಎಬಿಸಿನ್ಯೂಸ್ ಆನ್ಲೈನ್ ಚಾನಲ್ ರವರಿಗೆ ತಿಳಿಸುತ್ತಾ ಇನ್ನೂ ಸಾಸ್ವೇಹಳ್ಳಿ ಭಾಗದ ಆಶಾಕಾರ್ಯಕರ್ತರುಗಳಿಗು ಸಹ ಸನ್ಮಾನಿಸಲಾಗುವುದು ಎಂದು ಹೇಳಿದರು.
ಸರ್ಕಾರವು ಕೂಡಲೇ ರಾಜ್ಯದಲ್ಲಿ ಇರುವ ಆಶಾಕಾರ್ಯಕರ್ತರುಗಳಿಗು ಅವರ ಸೇವೆಯನ್ನು ಗುರುತಿಸಿ ಸಂಬಳವನ್ನು ಹೆಚ್ಚು ಮಾಡುವುದರ ಜೊತೆಗೆ ಇವರನ್ನು ಸರ್ಕಾರಿ ನೌಕರರನ್ನಾಗಿ ಮಾಡಿ ಕೊಡಲೇ ಆದೇಶ ಹೊರಡಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಇವರ ಉಪಸ್ಥಿತಿಯಲ್ಲಿ:-ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಶೀಲಾ ಗದ್ದಿಗೇಶ್ ರವರು,ಆರೋಗ್ಯ ಅಧಿಕಾರಿಯಾದ ಚಂದ್ರಪ್ಪನವರು, ಆಶಾಕಾರ್ಯಕರ್ತೆಯರು, ಮತ್ತು ಹುಣಸಗಟ್ಟ ಮತ್ತು ಕ್ಯಾಸಿನಕೇರಿ ಗ್ರಾಮದ ಗ್ರಾಮಸ್ಥರು ಸಹ ಭಾಗಿಯಾಗಿದರು.