ಮಹಾವೀರ ಜಯಂತಿ ಪ್ರಯುಕ್ತ
ಮಹಾನಗರಪಾಲಿಕೆಯ ವ್ಯಾಪ್ತಿಯಲ್ಲಿ ಪ್ರಾಣಿ ವಧೆ, ಪ್ರಾಣಿ
ಮಾಂಸ ಹಾಗೂ ಮೀನಿನ ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ.
ಆದ್ದರಿಂದ ಏ.25 ರಂದು ಮಾಂಸ ಮಾರಾಟ ಮಾಡಬಾರದು,
ತಪ್ಪಿದಲ್ಲಿ ಮಹಾನಗರಪಾಲಿಕೆ ಕಾಯ್ದೆಯ ಪ್ರಕಾರ
ಕಾನೂನು ಕ್ರಮ ಜರುಗಿಸಲಾಗುವುದು ಎಂದು
ಮಹಾನಗರಪಾಲಿಕೆಯ ಸಹಾಯಕ ನಿರ್ದೇಶಕರು
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.