ಕೋವಿಡ್-19 ಪರೀಕ್ಷೆ ನಡೆಸುವ ಸಂಬಂಧ ಐ.ಸಿ.ಎಂ.ಆರ್
ಹಾಗೂ ರಾಜ್ಯ ಸರ್ಕಾರವು ನಿಗದಿ ಪಡಿಸಿದಂತೆ ಎಲ್ಲಾ
ಷರತ್ತುಗಳು ಖಾಸಗಿ ಪ್ರಯೋಗ ಶಾಲೆಗೆ
ಅನ್ವಯಿಸುತ್ತದೆ. ಖಾಸಗಿ ಆಸ್ಪತ್ರೆಗಳಿಂದ ಸ್ವೀಕೃತವಾದ
ಮಾದರಿಗಳನ್ನು ಖಾಸಗಿ ಪ್ರಯೋಗಶಾಲೆಗಳಲ್ಲಿ
ಪರೀಕ್ಷಿಸಲು, ಸಾರಿಗೆ ಮತ್ತು ನಿರ್ವಹಣಾ ವೆಚ್ಚ ಸೇರಿದಂತೆ
ಸಾರ್ವಜನಿಕರಿಗೆ ಆರ್.ಟಿ-ಪಿ.ಸಿ.ಆರ್. ಪರೀಕ್ಷೆಗಾಗಿ ರೂ.80 ಗಳನ್ನು
ನಿಗದಿಪಡಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ
ಕಲ್ಯಾಣ ಅಧಿಕಾರಿಗಳು ಡಾ.ನಾಗರಾಜ್ ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.