ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ದಿನಾಂಕ 26; ಹೆಚ್ ಕಡದಕಟ್ಟೆ ಗ್ರಾಮ ಪಂಚಾಯಿತಿಯ ಪಿ.ಡಿ.ಓ, ಕೆ ಅರುಣ್ ಕುಮಾರ್ ಮತ್ತು ಸ್ವಚ್ಚಾತಗಾರ ಚನ್ನಪ್ಪ ಕಡದಕಟ್ಟೆ ಇವರ ಮೇಲೆ ಇಂದು ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳಾದ ಡಿ.ಓ.ಎಸ್.ಪಿ ಪ್ರವೀಣ್ ಇವರ ನೇತೃತ್ವದಲ್ಲಿ ದಾಳಿ ಮಾಡಲಾಯಿತು.
ನಂತರ ಡಿ.ಓ.ಎಸ್.ಪಿಯವರಾದ ಪ್ರವೀಣ್ ರವರು ಪತ್ರಿಕಾ ಗೋಷ್ಠಿನ್ನು ಉದ್ದೇಶಿಸಿ ಮಾತನಾಡಿ ಸುಮಾರು ದಿನಗಳ ಹಿಂದೆ 2ನೇ ಪಿರೆದುದಾರ ಆದ ಕಿರಣ್ ಕುಮಾರ್ ಎಸ್ ಹೊನ್ನಾಳಿ ದೂರಿನ ಅನ್ವಯ ಹಿರೇಮಠದ ಸರ್ವೇ ನಂಬರ್ 59/2ರ ಮಾಲಿಕರಾದ ದಿವಂಗತ ಶಿವಲಿಂಗಪ್ಪನವರು ಸೈಟ್ ಅಲಿಲೇಷನ್ ಮಾಡಿಸಿದ್ದರು, ನಂತರ ಅವರು ಮರಣ ಹೊಂದಿದನಂತರ. ತರುವಾಯ ಅವರ ಪುತ್ರರಾದ ಕಿರಣ್ ಕುಮಾರ್ ಎಸ್ ರವರು ತಮ್ಮ ತಾಯಿಯ ಹೆಸರಿಗೆ ಖಾತೆ ಬದಲಾವಣೆ ಮಾಡಿಸಿಕೊಳ್ಳಲು ಪಿ.ಡಿ.ಓರಾದ ಅರುಣ್ ಕುಮಾರ್ ರವರ ಹತ್ತಿರ ಹೊಗುತ್ತಾರೆ ,ಆ ಅಧಿಕಾರಿಯು ಖಾತೆ ಬದಲಾವಣೆಗೆ 11 ಸೈಟ್ ಗಳಿಗೆ ಬೇಡಿಕೆ ಇಟ್ಟಿರುತ್ತಾರೆ, ಆ ಬೇಡಿಕೆಗೆ ಕಿರಣ್ ಕುಮಾರ್ ಒಪ್ಪಿರುವುದಿಲ್ಲ, ನಾವುಗಳು 11 ಸೈಟ್ ಕೊಡಲಿಕ್ಕೆ ಸಾಧ್ಯವಿಲ್ಲ ಎಂದು ಹೇಳಿದಾಗ ಸೈಟ್ ಗೆ ಬದಲಾಗಿ 11 ಲಕ್ಷಕ್ಕೆ ಬೇಡಿಕೆ ಪಿ.ಡಿ.ಓ ಇಡುತ್ತಾರೆ, ಕಿರಣ್ ಕುಮಾರ್ ಅವರು ಇಷ್ಟೋಂದು ಹಣವನ್ನು ಕೊಡಲಿಕ್ಕೆ ಸಾಧ್ಯವಿಲ್ಲ ಎಂದು ಹೇಳಿದಾಗ 8 ಲಕ್ಷಕ್ಕೆ ಮಾತುಕತೆ ಮುಗಿಯುತ್ತದೆ, ಮುಗಿದ ನಂತರ 5/03/2021 ರಂದು 2 ಲಕ್ಷ ಕೊಟ್ಟಿರುತ್ತಾರೆ ಅವರಿಗೆ, ನಂತರ ಇಂದು ದಿನಾಂಕ 26/04/2021ರಂದು ಪುನಃ ಹಣ ಕೊಡಲಿಕ್ಕೆ ಬೇಡಿಕೆ ಇಟ್ಟಾಗ ಪಿ.ಡಿ.ಓ ಅರುಣ್ ಕುಮಾರ್ ಬೇಲೆಮಲ್ಲೂರು ನಲ್ಲಿ ಇರುತ್ತಾರೆ, ಇವರ ಶಿಷ್ಯರಾದ ಸ್ವಚತಾಗಾರ ಚನ್ನಪ್ಪ ಕಡದಕಟ್ಟೆ ಇವರ ಕೈಯಲ್ಲಿ 5ಲಕ್ಷ ಹಣವನ್ನು ಕೊಡು ಎಂದು ಕಿರಣ್ ಕುಮಾರ್ ಪೋನ್ ನಲ್ಲಿ ಮಾತನಾಡುವಾಗ ಹಿರೇಮಠದ ಗಂಗಾ ಸಾಮಿಲ್ ಬಳಿ ಪಿ.ಡಿ.ಓ ಅರುಣ್ ಕುಮಾರ್ ಸೂಚನೆ ಮೇರೆಗೆ ಚನ್ನಪ್ಪ ಅನ್ನುವ ವ್ಯಕ್ತಿಯು ಕೈಯಲ್ಲಿ 5 ಲಕ್ಷ ಹಣವನ್ನು ಕೊಡುವಾಗ ಎ.ಸಿ.ಬಿ ಅಧಿಕಾರಿಗಳಾದ ಡಿ.ಓ.ಎಸ್.ಪಿಯವರಾದ ಪ್ರವೀಣ್ ಮತ್ತು ಅವರ ತಂಡದವರು ಕಾರ್ಯಚರಣೆಯಲ್ಲಿ ರೆಡ್ ಹ್ಯಾಂಡ್ ಯಾಗಿ ಸಿಕ್ಕಿ ಬಿದ್ದ ಘಟನೆ ಇಂದು ಹೊನ್ನಾಳಿ ಯಲ್ಲಿ ನಡೆಯಿತು. ಭ್ರಷ್ಟಾಚಾರ ನಿಗ್ರಹ ದಳ ಕಾಯ್ದೆ 1988 ಅಡಿಯಲ್ಲಿ ಪ್ರಕರಣ ದಾಖಲೆಯಿಸಿ ದಾವಣಗೆರೆ ಜಿಲ್ಲಾ ನ್ಯಾಯಾಲಯ ಮತ್ತು ಸತ್ರ ನ್ಯಾಯಾಲಿಕ್ಕೆ ಹಾಜರು ಪಡೆಸುತ್ತೇವೆ ಎಂದು ಅಧಿಕಾರಿಗಳು ತಿಳಿಸಿದರು.
ಈ ಕಾರ್ಯಾಚರಣೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆ ದಾವಣಗೆರೆ ಅಧಿಕಾರಿಗಳಾದ ;-ಡಿ.ಓ.ಎಸ್.ಪಿ ಯವರಾದ ಪ್ರವೀಣ್ ಎಂ ರವರು, ಇಸ್ಪೆಕ್ಟರ್ ರಾದ ಮಧುಸೂದನ್ ಸಿ, ಎನ್ ಪಿ ಮೋಹನ್,ಕಲ್ಲೇಶ್,, ವಿರೇಶ್, ಅಂಜನೇಯ, ಬಸವರಾಜ್,ಇನ್ನೂ ಮುಂತಾದವರು ಸಹ ಬಾಗಿಯಾಗಿದ್ದರು.