2019-20ನೇ ಸಾಲಿನ ವಿಶೇಷ ಕೇಂದ್ರ್ರೀಯ ನೆರವಿನಡಿ ಪರಿಶಿಷ್ಟ
ಪಂಗಡ ವರ್ಗದವರಿಗೆ ಕೋಳಿ ಸಾಕಾಣಿಕೆ
ಕೇಂದ್ರಗಳನ್ನು ಸ್ಥಾಪಿಸಲು ಸಹಾಯಧನ ನೀಡಲು
ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಜಿಲ್ಲೆಗೆ 07 ಭೌತಿಕ ಗುರಿ ಇದ್ದು, ಕೋಳಿ ಸಾಕಾಣಿಕೆ
ಮಾಡಲು ಇಲಾಖೆಯಿಂದ ಶೇ.90 ಸಹಾಯಧನವನ್ನು
ನೀಡಲಾಗುವುದು. ಉಳಿದ ಶೇ.10 ರಷ್ಟು ಹಣವನ್ನು
ಫಲಾನುಭವಿಗಳು ಭರಿಸಬೇಕಾಗಿರುತ್ತದೆ. 
ಅರ್ಜಿದಾರರು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದು, 18
ರಿಂದ 60 ವರ್ಷದೊಳಗಿನವರಾಗಿರಬೇಕು. ಕೋಳಿ ಸಾಕಾಣಿಕೆ
ಮಾಡಲು ಅಗತ್ಯವಾದ ಜಮೀನು ಮತ್ತು ನೀರಿನ ಸೌಲಭ್ಯ
ಹೊಂದಿರಬೇಕು. ಆದಾಯ ರೂ.1.50 ಲಕ್ಷದ ಒಳಗೆ ಇದ್ದು,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ

ಪಶುಸಂಗೋಪನೆ ಇಲಾಖೆಯಿಂದ ಅನುಮತಿ ಪತ್ರ
ಪಡೆದಿರಬೇಕು. ತಮ್ಮ ಗ್ರಾಮ ಪಂಚಾಯಿತಿ ವತಿಯಿಂದ
ನೀರಕ್ಷೇಪಣಾ ಪ್ರಮಾಣ ಪತ್ರ ಪಡೆದು ಅರ್ಜಿಯೊಂದಿಗೆ
ಲಗತ್ತಿಸಬೇಕು. ಅರ್ಜಿದಾರರ ಅವಲಂಬಿತ ಕುಟುಂಬ ಸದಸ್ಯರು
ಸರ್ಕಾರಿ ನೌಕರಿಯಲ್ಲಿರಬಾರದು. ಅರ್ಜಿದಾರರಾಗಲೀ, ಕುಟುಂಬದ
ಸದಸ್ಯರಾಗಲೀ ನಿಗಮ ಅಥವಾ ಯಾವುದೇ ಯೋಜನೆಯಡಿ ಈ
ಹಿಂದೆ ಸೌಲಭ್ಯ ಪಡೆದಿರಬಾರದು. ಅರ್ಜಿದಾರರು ಬಿ.ಪಿ.ಎಲ್ ಕಾರ್ಡ್
ಮತ್ತು ಆಧಾರ್ ಕಾರ್ಡ್ ಹೊಂದಿರಬೇಕು.
  ನಿಗದಿತ ಅರ್ಜಿ ನಮೂನೆಯನ್ನು ಏ.28 ರಿಂದ ಮೇ 07 ರವರೆಗೆ
ಸಂಬಂಧಿಸಿದ ತಾಲ್ಲೂಕು ಪರಿಶಿಷ್ಟ ವರ್ಗಗಳ
ಕಲ್ಯಾಣಾಧಿಕಾರಿಗಳವರ ಕಚೇರಿ ದಾವಣಗೆರೆ, ಜಗಳೂರು
ಮತ್ತು ಚನ್ನಗಿರಿ ಮತ್ತು ಸಹಾಯಕ
ನಿರ್ದೇಶಕರು(ಗ್ರೇಡ್-2), ಸಮಾಜ ಕಲ್ಯಾಣ ಇಲಾಖೆ, ಹರಿಹರ
ಮತ್ತು ಹೊನ್ನಾಳಿ ಇಲ್ಲಿ ಕಚೇರಿ ವೇಳೆಯಲ್ಲಿ
ಪಡೆಯಬಹುದಾಗಿದೆ.
  ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಮೇ 15 ಕೊನೆಯ
ದಿನವಾಗಿದೆ. ಸಂಬಂಧಿಸಿದ ತಾಲ್ಲೂಕು ಪರಿಶಿಷ್ಟ ವರ್ಗಗಳ
ಕಲ್ಯಾಣಾಧಿಕಾರಿಗಳವರ ಕಚೇರಿ ದಾವಣಗೆರೆ, ಜಗಳೂರು
ಮತ್ತು ಚನ್ನಗಿರಿ ಹಾಗೂ ಸಹಾಯಕ ನಿರ್ದೇಶಕರು(ಗ್ರೇಡ್-
2), ಸಮಾಜ ಕಲ್ಯಾಣ ಇಲಾಖೆ, ಹರಿಹರ ಮತ್ತು ಹೊನ್ನಾಳಿ ಇಲ್ಲಿಗೆ
ಸಲ್ಲಿಸಬೇಕು ಎಂದು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *