ಕೋವಿಡ್-19 ರ ಎರಡನೆಯ ಅಲೆಯ ಪರಿಣಾಮದ
ಲಾಕ್‍ಡೌನ್‍ನಿಂದಾಗಿ ಜಿಲ್ಲೆಯಲ್ಲಿ ರೈತರು ಬೆಳೆದ ಹಾಗೂ ಕಟಾವಿಗೆ
ಬಂದಿರುವ ತರಕಾರಿ, ಹೂ ಮತ್ತು ಹಣ್ಣುಗಳ ಮಾರಾಟಕ್ಕೆ/
ಸಾಗಾಣೆಗೆ ಸೂಕ್ತ ವ್ಯವಸ್ಥೆ ಹಾಗೂ ಸೂಕ್ತ ಮಾರುಕಟ್ಟೆ
ಕಲ್ಪಿಸುವ ಸಲುವಾಗಿ ಯಾವುದೇ ತೊಂದರೆಗಳು ಆಗದಂತೆ
ರೈತರಿಗೆ ಮಾರ್ಗದರ್ಶನಕ್ಕಾಗಿ ಹಾಗೂ ರೈತರÀ ತೋಟಗಾರಿಕೆ 
ಉತ್ಪನ್ನಗಳ ವಿಲೇವಾರಿಗೆ ಸಂಬಂಧಿಸಿದಂತೆ ಯಾವುದೇ
ಸಮಸ್ಯೆಗಳನ್ನು ಪರಿಹರಿಸಲು ಇಲಾಖೆಯಿಂದ ಜಿಲ್ಲೆಯ ಎಲ್ಲಾ
ತಾಲ್ಲೂಕುಗಳ ಕಚೇರಿಗಳಲ್ಲಿ ಹೆಲ್ಪ್‍ಲೈನ್ ಸ್ಥಾಪಿಸಲಾಗಿದೆ.
ಜಿಲ್ಲೆಯ ರೈತರು ಆಯಾ ತಾಲ್ಲೂಕಿನ ಹಿರಿಯ ಸಹಾಯಕ
ತೋಟಗಾರಿಕೆ ನಿರ್ದೇಶಕರು (ಜಿಪಂ), ಕಚೇರಿಗಳ ದೂರವಾಣಿ
ಸಂಖ್ಯೆಗೆ ಕರೆ ಮಾಡಿ ಮಾರ್ಗದರ್ಶನ ಪಡೆಯಬಹುದಾಗಿದೆ.
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು(ಜಿಪಂ),
ದಾವಣಗೆರೆ ಸಂಖ್ಯೆ 08192-292091 ಮೊ.ನಂ 9980421756,
ಹಿ.ಸ.ತೋ.ನಿ.(ಜಿಪಂ), ಚನ್ನಗಿರಿ 08189-228170 ಮೊ.ನಂ.8310662972,
ಹಿ.ಸ.ತೋ.ನಿ.(ಜಿಪಂ), ಹೊನ್ನಾಳಿ 08189-252990 ಮೊ.ನಂ 9535998829,
ಹಿ.ಸ.ತೋ.ನಿ.(ಜಿಪಂ), ಹರಿಹರ 08192-242803, ಮೊ.ನಂ 9900526059
ಹಿ.ಸ.ತೋ.ನಿ.(ಜಿಪಂ), ಜಗಳೂರು 08196-227389, ಮೊ.ನಂ
7022058656 ಸಂಪರ್ಕಿಸಬಹುದು ಎಂದು   ತೋಟಗಾರಿಕೆ
ಉಪನಿರ್ದೇಶಕರು ಲಕ್ಷ್ಮೀಕಾಂತ ಬೊಮ್ಮನ್ನಾರ್

ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *