ಹೊನ್ನಾಳಿ : ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನಲ್ಲಿ
ಕೊರೊನಾ ಪ್ರಕರಣ ಹೆಚ್ಚುತ್ತಿದ್ದು ಅದನ್ನು
ನಿಬಾಯಿಸಲು ನಮ್ಮ ಆರೋಗ್ಯ ಇಲಾಖೆ ಸಜ್ಜಾಗಿದೆ ಎಂದು
ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ
ಹೇಳಿದರು.
ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ಸಿದ್ದತೆಗಳ ಬಗ್ಗೆ
ಪರೀಶೀಲನೆ ನಡೆಸಿ, ವೈದ್ಯರೊಂದಿಗೆ ಮಾಹಿತಿ ಪಡೆದು
ಸುದ್ದಿಗಾರರೊಂದಿಗೆ ಮಾತನಾಡಿದರು.
ತಾಲೂಕು ಆಸ್ಪತ್ರೆಯಲ್ಲಿ 50 ಬೆಡ್‍ಗಳನ್ನು ಈಗಾಗಲೇ
ಮೀಸಲಿಟ್ಟು ಅವುಗಳಿಗೆ ವೆಂಟಿಲೆಟರ್ ವ್ಯವಸ್ಥೆ ಮಾಡಲಾಗಿದೆ
ಅಲ್ಲದೇ ಎರಡು ಪ್ರತೇಕ ಕೊಠಡಿಗಳಲ್ಲಿ 6
ಬೆಡ್‍ಗಳನ್ನು ಐಸಿಯು ವ್ಯವಸ್ಥೆ ಮಾಡಲಾಗಿದೆ ಎಂದರು.
ಕೋರೊನಾ ಸೋಂಕು ಪೀಡಿತರು ಬಂದರೆ ಅವರಿಗೆ ಇಲ್ಲಿ
ಚಿಕಿತ್ಸೆ ನೀಡಿ ಅತಿ ತುರ್ತು ಇದ್ದರೇ ಮಾತ್ರ ಬೇರೆ
ಆಸ್ಪತ್ರೆಗಳಿಗೆ ಕಳಿಸುವಂತೆ ಸೂಚನೆ ನೀಡಿದ್ದೇನೆ ಎಂದ
ಶಾಸಕರು, ಅವಳಿ ತಾಲೂಕಿನ ವೈದ್ಯರು ಕೊರೊನಾಕ್ಕೆ
ಸಂಬಂದಿಸದಂತೆ ಏನೇ ಕೇಳಿದರೂ ಸರ್ಕಾರದಿಂದ ಅನ್ನು
ಕೊಡಿಸಲು ನಾನು ಬದ್ದನಿದ್ದೇನೆ ಎಂದರು.
ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನ ಆಸ್ಪತ್ರೆಯಲ್ಲಿ
ಸಿಬ್ಬಂದಿಗಳ ಕೊರತೆ ಇದ್ದು ಈ ಬಗ್ಗೆ ಆರೋಗ್ಯ ಸಚಿವರ
ಗಮನಕ್ಕೆ ತಂದು ಆದಷ್ಟು ಬೇಗ ಸಿಬ್ಬಂದಿಗಳನ್ನು
ನೇಮಕ ಮಾಡುವಂತೆ ಮನವಿ ಮಾಡುವುದಾತಿ ಮನವಿ
ಮಾಡುವುದಾಗಿ ತಿಳಿಸಿದರು.
ಇನ್ನು ನಾಳೆ ಮುಖ್ಯಮಂತ್ರಿ
ಬಿ.ಎಸ್.ಯಡಿಯೂರಪ್ಪನವರನ್ನು ಭೇಟಿ ಮಾಡಿ ಹೊನ್ನಾಳಿ
ನ್ಯಾಮತಿ ಅವಳಿ ತಾಲೂಕಿಗೆ ಬೇಕಾದ ಲಸಿಕೆಯನ್ನು
ಆದಷ್ಟು ಬೇಗ ಪೂರೈಕೆ ಮಾಡುವಂತೆ ಮನವಿ
ಮಾಡುವುದಾಗಿ ತಿಳಿಸದರು.
ಪಿಪಿ ಕಿಟ್ ಹಾಕಿದ ರೇಣುಕಾಚಾರ್ಯ :
ಹೊನ್ನಾಳಿ ತಾಲೂಕು ಆಸ್ಪತ್ರೆಯ ಕೋವಿಡ್ ಕೇರ್
ಸೆಂಟರ್‍ಗೆ ಭೇಟಿ ನೀಡಿದ ರೇಣುಕಾಚಾರ್ಯ ಪಿಪಿ ಕಿಟ್ ಧರಿಸಿ
ಆಸ್ಪತ್ರೆಯ ರೌಡ್ಸ್ ಹಾಕಿದರು. ಅರ್ಧಘಂಟೆಗಳ ಕಾಲ ಪಿಪಿ
ಕಿಟ್ ಹಾಕಿ ಕೊರೊನಾ ಸೋಂಕಿತರ ಆರೋಗ್ಯ ವಿಚಾರಿಸಿದ
ರೇಣುಕಾಚಾರ್ಯ ನಂತರ ಕಿಟ್ ತೆಗೆಯುತ್ತಿದ್ದಂತೆ
ಸಂಪೂರ್ಣ ಬೆವತು ಹೋಗಿದ್ದರು. ವೈದ್ಯರು ಹಾಗೂ

ಸಿಬ್ಬಂದಿ ಆರು ಘಂಟೆ ಪಿಪಿ ಕಿಟ್ ಹಾಕಿಕೊಂಡು ಕೆಲಸ
ಮಾಡುತ್ತಾರೆ ನಿಜವಾಗಲೂ ಅವರು ದೇವರ ಅವರಿಗೆ
ನನ್ನದೊಂದು ಸಲಾಂ ಎಂದರು.
ಈ ಸಂದರ್ಭ ತಾಲೂಕು ಆರೋಗ್ಯಾಧೀಕಾರಿ ಕೆಂಚಪ್ಪ,
ಆಸ್ಪತ್ರೆ ಆಡಳಿತಾಧಿಕಾರಿ ಚಂದ್ರಪ್ಪ, ತಹಶೀಲ್ದಾರ್
ಬಸವರಾಜ್ ಕೋಟೂರಾ,ಇಓ ಗಂಗಾಧರಪ್ಪ ಸೇರಿದಂತೆ
ವಿವಿಧ ಇಲಾಖೆ ಅಧಿಕಾರಿಗಳಿದ್ದರು..

Leave a Reply

Your email address will not be published. Required fields are marked *