ಶಿಕಾರಿಪುರ
ರಾಜ್ಯದೆಲ್ಲೆಡೆ ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಯ ಕಂಡುಬರುತ್ತಿದ್ದು ಜನಸಾಮಾನ್ಯರಿಗೆ ಅದರಲ್ಲೂ ಕೂ ರೋ ನಾ ಸೊಂಕಿತರಿಗೆ ಅನುಕೂಲ ಆಗುವಂತೆ ಶಿಕಾರಿಪುರ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಈಗಾಗಲೇ ಕೆಲಸ ಪೂರೈಸಿ ಕೆಲವೇ ದಿನಗಳಲ್ಲಿ ಸಾರ್ವಜನಿಕರ ಸೇವೆಗೆ ಸಿದ್ದ ವಾಗಲಿದೆ ಹಾಗೂ ಇದು ರಾಜ್ಯದಲ್ಲೇ ಮೊದಲ ಆಮ್ಲಜನಕ ಉತ್ಪಾದನಾ ಘಟಕ ಎಂದು. ಆರಂಭವಾಗ ಲಿರುವ ಮಾಹಿತಿ ನೀಡಿದರು
[ ಅವರು ನಗರದ ಪ್ರವಾಸಿ ಮಂದಿರದಲ್ಲಿ ಎಲ್ಲಾ ಇಲಾಖೆ ಗಳ ತಾಲೂಕ್ ಮಟ್ಟದ ಸಭೆಯಲ್ಲಿ ಬಾಗವಹಿಸಿ ಮಾತನಾಡಿದರು. ಕಾಸಾಗಿ ಆಸ್ಪತ್ರೆಗಳ ಮಾಹಿತಿ ಪಡೆದು ಅವುಗಳನ್ನು ಈ ಸಂದರ್ಬದಲ್ಲಿ ಬಳಸಿಕೊಳ್ಳುವಂತೆ ಸೂಚಿಸಿದರು. ಜನರಿಗೆ ಅರಿವು ಮೂಡಿಸುವ ಜೊತೆಗೆ ಜಾಗೃತಿ ಹಾಗೂ ಆತ್ಮ ಸ್ಥೈರ್ಯ ತುಂಬುವ ಕೆಲಸ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಗಳು ಮಾಡುವುದು ಉತ್ತಮ.ಸರ್ಕಾರಿ ಆಸ್ಪತ್ರೆ ಸೊಂಕಿತರಿ ಗೆ ಕೊಡುವ ತಿಂಡಿ ಹಾಗೂ ಊಟ ಕಳಪೆ ಗುಣಮಟ್ಟ ಎಂದು ಸಾರ್ವಜನಿಕರಿಂದ ದೂರುಗಳು ಕೇಳಿ ಬರುತ್ತಿದೆ .ಹಿಂದೆ ಸಹ ಈ ರೀತಿ ಕೇಳಿ ಬಂದಿದ್ದು ಆತನನ್ನು ಕರೆಸಿ ಗುಣ್ಮಟ್ಟದ ಆಹಾರ ಕೊಡಲು ಆಗದಿದ್ದರೆ ಬೇರೆಯವರಿಗೆ ಅವಕಾಶ ನೀಡುವಂತೆ ಸರ್ಕಾರಿ ಅಪ್ವತ್ರೆಯ ಅಡ್ಮಿನ್ ವೈದ್ಯ ಶ್ರೀನಿವಾಸ್ ಅವರಿಗೆ ಆದೇಶಿಸಿದರು ಕಾರ್ಯಕ್ರಮದಲ್ಲಿ ಹಾಜ ರಿದ್ದ ಮಲೆನಾಡು ಅಭಿವೃದ್ದಿ ಮಂಡಳಿಯ ಅಧ್ಯಕ್ಷ ಗುರು ಮೂರ್ತಿಯವರು ಮುಖ್ಯಮಂತ್ರಿಗಳು ಸೋಂಕಿತ ರಿಗೆ ಒಳ್ಳೆಯ ಆಹಾರ ನೀಡಲೆಂದು ಉತ್ತಮ ರೇಟು ಅಂದರೆ ತಲಾ ಒಬ್ಬರಿಗೆ 250/ ದರ ನಿಗದಿ ಪಡಿಸಿದೆ .ಇನ್ನೂ ಮುಂದೆ ದೂರು ಕೇಳಿ ಬಂದರೆ ಕ್ರಮ ಕೈಗೊಳ್ಳಲು ಅವಕಾಶ ಮಾಡಿ ಕೊಡಬೇಡಿ ಸಾದ್ಯವಾದರೆ ಬೇರೆ ಯವರಿಗೆ ಅವಕಾಶ ನೀಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.ಹಾಗೂ ಅಂಗವಿಕಲರ ಸರ್ಟಿಫಿಕೇಟ್ ನೀಡಲು ಐದು ಸಾವಿರದ ವರೆಗೆ ಲಂಚ ಕೇಳುವ ಆರೋಪಗಳು ಕೇಶವ ಹಾಗೂ ವೈದ್ಯ ತಿಪ್ಪೇಶ್ ಹೆಸರುಗಳು ಕೇಳಿ ಬರುತ್ತಿದೆ ಅದರ ಬಗ್ಗೆ ಕ್ರಮ ಜರುಗಿ ಎಂದು ವೈದ್ಯಾಧಿಕಾರಿಗಳಿಗೆ ತಾಕೀತು ಮಾಡಲಾಯಿತು. ಡಾಕ್ಟರ್ ಗೀತಾ ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಬರುತ್ತಿಲ್ಲ ಎನ್ನುವುದರ ಬಗ್ಗೆ ಸಾರ್ವಜನಿಕರಿಂದ ಹಾಗೂ ಕೆಲ ಅಧಿಕಾರಿ. ಗಳಿಂದಲೂ ಬಹಳ ದಿನಗಳಿಂದ ಕೇಳಿ ಬರುತ್ತಿದ್ದು ಸೂಕ್ತ ಕ್ರಮ ಕೈಗೊಳ್ಳಲು ಹಾಗೂ ಬೇರೆ ವೈದ್ಯರನ್ನು ಕರೆಸಿ ಅವರನ್ನು ಕೈ ಬಿಡುವಂತೆ ಹಿರಿಯ ಅಧಿಕಾರಿಗಳಿಗೆ ಸಂಸದರು ತಿಳಿಸಿದರು.ಹಾಗೂ ಆಸ್ಪತ್ರೆಯಲ್ಲಿನ ಬೆಡ್ ಮತ್ತು ಅಂಬ್ಲ ಜನಕದ ಬೆಡ್ ಗಳ ಮಾಹಿತಿ ಕೇಳಿದರು ಎಲ್ಲಾ ಇಲಾಖೆಯವರು ಕೈಜೋಡಿಸಿ ಈ ಪುಣ್ಯದ ಕೆಲಸ ಮಾಡಿ ರೋಗಿಗಳ ಜೀವ ರಕ್ಷಿಸಿ ಎಂದರು ಪುರಸಭೆ ಮುಖ್ಯಾಧಿಕಾರಿ ಸುರೇಶ್.ದಂಡಾಧಿಕಾರಿ ಕವಿರಾಜ್ ಹಾಗೂ ಪೊಲೀಸ್ ಅಧಿಕಾರಿಗಳು ಸಲಹೆ ನೀಡಿದರು ಹಾಗೂ ಅದರಬಗ್ಗೆ ಚರ್ಚಿಸಲಾಯಿತು.ಈ ಸಂದರ್ಬದಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿ ರಾಜೇಶ್ ಸುರ್ಗಿಹಳ್ಳಿ .ತಾಲೂಕ್ ಆರೋಗ್ಯ ಅಧಿಕಾರಿ ಚಂದ್ರಪ್ಪ .ಪುರಸಭೆ ಅಧಿಕಾರಿಗಳು.ಆರೋಗ್ಯ ಇಲಾಖೆ ಅಧಿಕಾರಿಗಳು.ಬಿಸಿಎಂ ಇಲಾಖೆ ಅಧಿಕಾರಿ ಶೋಬ ಡಿಸಿಸಿ ಬ್ಯಾಂಕ್ ಅದುಕ್ಷ ರಾದ ಚನ್ನ ವೀರಪ್ಪ ಇತರರು ಉಪಸ್ಥಿತರಿದ್ದರು.