ಕೋವಿಡ್ – 19 ಸಾಂಕ್ರಾಮಿಕ ರೋಗ ಹೆಚ್ಚಾಗಿ
ಹರಡುತ್ತಿರುವುದರಿಂದ ರಾಜ್ಯ ಸರ್ಕಾರದ ಆದೇಶ ಹಾಗೂ
ಮಾರ್ಗಸೂಚಿಗಳನ್ವಯ ಏ.28 ರಿಂದ ಮೇ 12 ರವರೆಗೆ
ಲಾಕ್ಡೌನ್ ಜಾರಿಯಲ್ಲಿರುವುದರಿಂದ ದಾವಣಗೆರೆ ಕೃಷಿ ಉತ್ಪನ್ನ
ಮಾರುಕಟ್ಟೆ ಸಮಿತಿ ವಿವಿಧ ಮಾರುಕಟ್ಟೆ ಪ್ರಾಂಗಣಗಳಲ್ಲಿ
ನಡೆಯುವ ಕೃಷಿ ಹುಟ್ಟುವಳಿ ವ್ಯಾಪಾರ ವಹಿವಾಟಿನ
ಸಮಯವನ್ನು ಮಾರ್ಗಸೂಚಿನ್ವಯ ಬೆಳಿಗ್ಗೆ 6 ರಿಂದ 10
ರವರೆಗೆ ನಿಗದಿಪಡಿಸಿದ್ದು ಈ ಸಮಯದಲ್ಲೇ ಎಲ್ಲಾ ವ್ಯಾಪಾರ
ವಹಿವಾಟಿನ ಚಟುವಟಿಕೆಗಳನ್ನು ಸಂಪೂರ್ಣವಾಗಿ ಮುಗಿಸಿ
ಅಂಗಡಿಗಳನ್ನು ಬಂದ್ ಮಾಡಿ ಸಹಕರಿಸಬೇಕೆಂದು ಎಪಿಎಂಸಿ
ಕಾರ್ಯದರ್ಶಿಗಳು ರೈತಬಾಂಧವರು, ಪೇಟೆ
ಕಾರ್ಯಕರ್ತರು, ಶ್ರಮಿಕರು ಮತ್ತು ಸಾರ್ವಜನಿಕರಲ್ಲಿ
ಮನವಿ ಮಾಡಿದ್ದಾರೆ.