ತಹಶೀಲ್ದಾರ್

 ಉಚ್ಚ ನ್ಯಾಯಾಲಯದಲ್ಲಿ ದಾಖಲಾಗಿರುವ ರಿಟ್
ಅರ್ಜಿಯನ್ವಯ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ
ನಿರ್ಮಿಸಿರುವ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸಿದ
ಬಗ್ಗೆ ವರದಿಯನ್ನು ಸರ್ಕಾರದ ಮೂಲಕ ನ್ಯಾಯಾಲಯಕ್ಕೆ
ಸಲ್ಲಿಸಬೇಕಿದ್ದು, ಸಾರ್ವಜನಿಕರು ಅನಧಿಕೃತ ಧಾರ್ಮಿಕ
ಕಟ್ಟಡಗಳ ತೆರವು ಕಾರ್ಯಾಚರಣೆಗೆ ಯಾವುದೇ
ಕಾರಣಕ್ಕೂ ಪ್ರತಿರೋಧ ವ್ಯಕ್ತಪಡಿಸಬಾರದಾಗಿ ಹಾಗೂ
ಪ್ರತಿರೋಧ ವ್ಯಕ್ತಪಡಿಸುವ ವ್ಯಕ್ತಿಗಳಿಗೆ ಸಹಕಾರ
ನೀಡಬಾರದು ಎಂದು ತಹಶೀಲ್ದಾರ್ ಬಿ.ಎನ್. ಗಿರೀಶ ತಿಳಿಸಿದ್ದಾರೆ.
 ಸರ್ಕಾರದ ಆದೇಶದನ್ವಯ ಸಾರ್ವಜನಿಕ ಸ್ಥಳಗಳಲ್ಲಿ
2009 ರ ಸೆ. 29 ಕ್ಕೂ ಮುಂಚಿತವಾಗಿ ಅನಧಿಕೃತವಾಗಿ ನಿರ್ಮಿಸಿರುವ
ಧಾರ್ಮಿಕ ಕಟ್ಟಡಗಳನ್ನು ಆ ಪ್ರದೇಶದ ಪ್ರಶಾಂತತೆಗೆ
ಭಂಗವುಂಟು ಮಾಡುವುದಿಲ್ಲವೆಂದು ಖಚಿತ ಪಟ್ಟಲ್ಲಿ, ಅಂತಹ
ಕಟ್ಟಡಗಳನ್ನು ಕೆಟಿಸಿಪಿ ಕಾಯ್ದೆ, ಮುನಿಸಿಪಾಲಿಟಿ ಕಾಯ್ದೆ,
ಪುರಸಭೆ ಕಾಯ್ದೆ ಮತ್ತು ಇತರೆ ಸ್ಥಳೀಯ ಕಾನೂನು
ಕಾಯ್ದೆಗಳಿಗೆ ವ್ಯತಿರಿಕ್ತವಾಗಿಲ್ಲದಿದ್ದಲ್ಲಿ, ಅವುಗಳನ್ನು
ಉಳಿಸಿಕೊಂಡು ಕಾನೂನು ಕಾಯ್ದೆಗೊಳಪಟ್ಟಂತೆ
ಅಧಿಕೃತಗೊಳಿಸಬಹುದಾಗಿರುತ್ತದೆ.
 ಈ ಹಿನ್ನಲೆಯಲ್ಲಿ ದಾವಣಗೆರೆ ತಾಲ್ಲೂಕಿನ ಸಮಸ್ತ
ನಾಗರೀಕರಲ್ಲಿ ನಿಮ್ಮ ನಿಮ್ಮ ಗ್ರಾಮ/ಓಣಿ/ಮೊಹಲ್ಲಾ/ಕೇರಿ ಹಾಗೂ
ಇತರೆ ಸಾರ್ವಜನಿಕ ಪ್ರದೇಶಗಳಲ್ಲಿನಿರ್ಮಾಣವಾಗಿರುವ
ಅನಧಿಕೃತ ಧಾರ್ಮಿಕ ಕಟ್ಟಡಗಳನ್ನಿ ನೀವುಗಳೇ
ಸ್ವಪ್ರರೇಣೆಯಿಂದ ತೆರವುಗೊಳಿಸುವುದು ಮತ್ತು
ನಿರ್ಮಾಣವಾಗದಂತೆ ಎಚ್ಚರವಹಿಸುವುದು ಒಂದು ವೇಳೆ
ತೆರವುಗೊಳಿಸದೇ ಇದ್ದಲ್ಲಿ ಇಮತಹ ಅನಧಿಕೃತ ಧಾರ್ಮಿಕ
ಕಟ್ಟಡಗಳನ್ನು ತಾಲ್ಲೂಕು ಆಡಳಿತ ಹಾಗೂ ಸ್ಥಳೀಯ
ಸಂಸ್ಥೆಗಳು ತೆರವುಗೊಳಿಸಲಿದ್ದು, ಈ ತೆರವು
ಕಾರ್ಯಾಚರಣೆಗೆ ಅಗತ್ಯ ಸಹಕಾರವನ್ನು ನೀಡಲು ತಿಳಿಸಿದೆ.
ಸಾರ್ವಜನಿಕ ರಸ್ತೆಗಳಲ್ಲಿ, ಸಾರ್ವಜನಿಕ ಉದ್ಯಾನವನಗಳಲ್ಲಿ
ಹಾಗೂ ಸ್ಥಳಗಳಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿರುವ
ಧಾರ್ಮಿಕ ಕಟ್ಟಡಗಳು ನಿರ್ಮಿಸಿರುವುದು ಮತ್ತು ನಿರ್ಮಾಣ

ಮಾಡುತ್ತಿರುವುದು ಕಂಡುಬಂದಲ್ಲಿ ಸಾರ್ವಜನಿಕರು ಈ
ಕುರಿತು ಜಿಲ್ಲಾಧಿಕಾರಿಗಳಿಗೆ, ತಾಲ್ಲೂಕು ತಹಶೀಲ್ದಾರುಗಳಿಗೆ
ಮತ್ತು ಸ್ಥಳೀಯ ಸಂಸ್ಥೆಯ ಮುಖ್ಯಸ್ಥರಿಗೆ
ಮಾಹಿತಿಯನ್ನು ಒದಗಿಸಬಹುದು. ಹಾಗೂ ಮಾಹಿತಿಯನ್ನು
ಒದಗಿಸುವ ಸಾರ್ವಜನಿಕರ ಹೆಸರನ್ನು ಬಹಿರಂಗ ಪಡಿಸದೇ
ರಹಸ್ಯವಾಗಿಡಲಾಗುವುದು.
ಸಾರ್ವಜನಿಕ ರಸ್ತೆಗಳಲ್ಲಿ, ಉದ್ಯಾನವನಗಳಲ್ಲಿ,
ಸ್ಥಳಗಳಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿರುವ ಧಾರ್ಮಿಕ
ಕಟ್ಟಡಗಳ ತೆರವು ಕಾರ್ಯಾಚರಣೆಗೆ ಯಾರಾದರೂ
ಅಡ್ಡಿಪಡಿಸಲು ಅಥವಾ ತಡೆಯೊಡ್ಡಲು ಮುಂದಾದಲ್ಲಿ ಅಂತಹ
ವ್ಯಕ್ತಿಗಳ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ದಾಖಲು
ಮಾಡಲಾಗುವುದು. ಸಾರ್ವಜನಿಕರು ಅನಧಿಕೃತ ಧಾರ್ಮಿಕ
ಕಟ್ಟಡಗಳ ತೆರವು ಕಾರ್ಯಾಚರಣೆಗೆ ಯಾವುದೇ
ಕಾರಣಕ್ಕೂ ಪ್ರತಿರೋಧ ವ್ಯಕ್ತಪಡಿಸಬಾರದಾಗಿ ಹಾಗೂ
ಪ್ರತಿರೋಧ ವ್ಯಕ್ತಪಡಿಸುವ ವ್ಯಕ್ತಿಗಳಿಗೆ ಸಹಕಾರ
ನೀಡಬಾರದು ಎಂದು ತಹಶೀಲ್ದಾರ್ ಬಿ.ಎನ್ ಗಿರೀಶ ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.

Leave a Reply

Your email address will not be published. Required fields are marked *