ಜಿಲ್ಲೆಯಲ್ಲಿ ಏಪ್ರಿಲ್ 29 ರಂದು ಸರಾಸರಿ 7.09 ಮಿ.ಮೀ
ಮಳೆಯಾಗಿದ್ದು, ಒಟ್ಟಾರೆ 52.3 ಲಕ್ಷ ಅಂದಾಜು ನಷ್ಟ
ಸಂಭವಿಸಿದೆ.
ಚನ್ನಗಿರಿ ತಾಲ್ಲೂಕಿನಲ್ಲಿ 13.02 ಮಿ.ಮೀ ವಾಸ್ತವ
ಮಳೆಯಾಗಿದೆ. ದಾವಣಗೆರೆಯಲ್ಲಿ 3.7 ಮಿ.ಮೀ, ಹರಿಹರದಲ್ಲಿ 7.2
ಮಿ.ಮೀ, ಹೊನ್ನಾಳಿಯಲ್ಲಿ 9.0 ಮಿ.ಮೀ ಹಾಗೂ ಜಗಳೂರಿನಲ್ಲಿ 2.54
ಮಿ.ಮೀ ವಾಸ್ತವ ಮಳೆಯಾಗಿದ್ದು, ಜಿಲ್ಲೆಯಲ್ಲಿ ಸರಾಸರಿ 7.09
ಮಿ.ಮೀ ಮಳೆಯಾಗಿದೆ.
ಮಳೆಯಿಂದಾಗಿ ಹರಿಹರ ತಾಲ್ಲೂಕು ವ್ಯಾಪ್ತಿಯಲ್ಲಿ 824 ಎಕರೆ
ಭತ್ತದ ಬೆಳೆ ಹಾನಿಯಾಗಿದ್ದು, ಅಂದಾಜು ರೂ. 48 ಲಕ್ಷ ನಷ್ಟ
ಸಂಭವಿಸಿದೆ. ಹಾಗೂ ಚನ್ನಗಿರಿ ತಾಲ್ಲೂಕು ವ್ಯಾಪ್ತಿಯಲ್ಲಿ 2
ತೀವ್ರ/ಪೂರ್ಣ ಹಾಗೂ 02 ಭಾಗಶಃ ಪಕ್ಕಾ ಮನೆ
ಹಾನಿಯಾಗಿದ್ದು, ಅಂದಾಜು ರೂ.2 ಲಕ್ಷ ನಷ್ಟ ಸಂಭವಿಸಿದೆ. 5.08
ಎಕರೆ ಬಾಳೆ ಬೆಳೆ ಹಾನಿಯಾಗಿದ್ದು, ಅಂದಾಜು 2.30 ಲಕ್ಷ ನಷ್ಟ
ಸಂಭವಿಸಿದ್ದು, ತಾಲ್ಲೂಕಿನಲ್ಲಿ ಒಟ್ಟಾರೆ ರೂ.4.30 ಲಕ್ಷ ನಷ್ಟ
ಸಂಭವಿಸಿರುತ್ತದೆ.
ಜಿಲ್ಲೆಯಲ್ಲಿ ಒಟ್ಟಾರೆ ರೂ.52.3 ಲಕ್ಷ ಅಂದಾಜು ನಷ್ಟ
ಸಂಭವಿಸಿದ್ದು, ಸರ್ಕಾರದ ಮಾರ್ಗಸೂಚಿಯನ್ವಯ
ಸಂತ್ರಸ್ತರಿಗೆ ಪರಿಹಾರ ವಿತರಿಸಲು ಕ್ರಮ ವಹಿಸಲಾಗುವುದು
ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.