ಖರೀದಿಗೆ ನೋಂದಣಿ
2021-22 ನೇ ಸಾಲಿನ ರಾಬಿ ಋತುವಿನ ಭತ್ತವನ್ನು 2020-21 ನೇ
ಸಾಲಿನ ಮುಂಗಾರು ಋತುವಿನಲ್ಲಿ ಖರೀದಿ ಮಾಡುವ ಸಂಬಂಧ
ಸರ್ಕಾರವು 2020-21 ನೇ ಸಾಲಿಗೆ ರೈತರಿಂದ ಕನಿಷ್ಟ ಬೆಂಬಲ ಬೆಲೆ
ಯೋಜನೆಯಡಿ ಭತಕ್ಕೆ ದರ ನಿಗದಿಪಡಿಸಿದ್ದು, ಖರೀದಿ
ಪ್ರಕ್ರಿಯೆಗೆ ರೈತರ ನೋಂದಣಿ ಆರಂಭವಾಗಿದೆ.
ಭತ್ತ ಸಾಮಾನ್ಯ ಪ್ರತಿ ಕ್ವಿಂಟಾಲ್‍ಗೆ ರೂ.1868 ಮತ್ತು
ಭತ್ತ ಗ್ರೇಡ್ ‘ಎ’ ಗೆ ರೂ.1888 ದರವನ್ನು ಸರ್ಕಾರ
ನಿಗದಿಪಡಿಸಿದ್ದು, ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಕೇಂದ್ರ
ಸರ್ಕಾರವು 2021-22ನೇ ಸಾಲಿನ ರಾಬಿ ಋತುವಿನ 12 ಸಾವಿರ ಮೆಟ್ರಿಕ್
ಟನ್ ಭತ್ತವನ್ನು 2020-21 ನೇ ಸಾಲಿನ ಮುಂಗಾರು ಋತುವಿನಲ್ಲಿ
ಖರೀದಿಸಲು ಅನುಮತಿಯನ್ನು ನೀಡಿದೆ.
ಅದರಂತೆ ಭತ್ತ ಖರೀದಿಗೆ ಸಂಬಂಧಿಸಿದಂತೆ ರೈತರು
ನೋಂದಣಿ ಮಾಡಿಸಲು ಮೇ 5 ಅಂತಿಮ ದಿನವಾಗಿರುತ್ತದೆ. ಪ್ರತಿ
ರೈತರಿಂದ ಪ್ರತಿ ಎಕರೆಗೆ 16 ಕ್ವಿಂಟಾಲ್‍ನಂತೆ ಗರಿಷ್ಟ 40
ಕ್ವಿಂಟಾಲ್ ಭತ್ತವನ್ನು ತಕ್ಷಣದಿಂದ ಜಾರಿಗೆ ಬರುವಂತೆ ದಿ: 30-06-
2021 ರವರೆಗೆ ಖರೀದಿಸಲು ಆದೇಶಿಸಲಾಗಿದೆ. ಆದ್ದರಿಂದ ರೈತ
ಬಾಂಧವರು ಭತ್ತ ಖರೀದಿ ಮಾಡುವ
ಮಾರ್ಗಸೂಚಿಗಳನ್ವಯ ಇದರ ಸದುಪಯೋಗ
ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿಕಾರಿ ಮಹಾಂತೇಶ ಬೀಳಗಿ
ಕೋರಿದ್ದಾರೆ.