ಹೊನ್ನಾಳಿ ಪಟ್ಟಣದಲ್ಲಿ ಇಂದು ಕೊರೋನಾ ಎರಡನೇ ಅಲೆ ಬಂದಿರುವ ಕಾರಣ ಸರ್ಕಾರ ಜನತಾ ಕರ್ಫ್ಯೂ ಏರಿರುವ ಹಿನ್ನಲೆಯಲ್ಲಿ. ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಜನರಿಗೆ ಅವಶ್ಯಕತೆ ವಸ್ತುಗಳನ್ನು ಖರೀದಿ ಮಾಡಲಿಕ್ಕೆ ಸಮಯ ನಿಗದಿಯಾಗಿತ್ತು. ಈ ಸಮಯವನ್ನು ಮೀರಿ ಮಧ್ಯಾಹ್ನ 12.00 ಗಂಟೆಯವರೆಗೆ ಬೈಕು,ಆಟೋ,ಕಾರ್ ನಲ್ಲಿ ಬೇಕಾಬಿಟ್ಟಿ ಓಡಾಡುವರಿಗೆ ಹೊನ್ನಾಳಿ ಪೊಲೀಸ್ ಠಾಣೆ ಸರ್ಕಲ್ ಇನ್ಸ್ಪೆಕ್ಟರ್ ಟಿ ವಿ ದೇವರಾಜ್ ಅವರ ಸಿಬ್ಬಂದಿ ವರ್ಗದವರು ಅವರುಗಳಿಗೆ ಕೇಸ್ ಹಾಕುವುದರ ಜೊತೆಗೆ ಸರ್ಕಲ್ ಇನ್ಸ್ಪೆಕ್ಟರ್ ಸಂಗೊಳ್ಳಿರಾಯಣ್ಣ ವೃತ್ತದಲ್ಲಿ 25ರಿಂದ 30 ಜನರಿಗೆ ಲೈನಲ್ಲಿ ನಿಲ್ಲಿಸಿ ಅವರುಗಳಿಗೆ ಜನತಾ ಕರ್ಫ್ಯೂ ಬಗ್ಗೆ ಮತ್ತು ಕರೋನಾ ಎರಡನೇ ಅಲೆಯಿಂದ ಏನು ತೊಂದರೆಯಾಗುತ್ತದೆ ,ನಿಮ್ಮ ಕುಟುಂಬಗಳು ಹೇಗೆ ನಿರ್ಲಕ್ಷದಿಂದ ರೋಗಕ್ಕೆ ತುತ್ತಾಗುತ್ತಾರೆ ಎಂದು ಅವರುಗಳಿಗೆ ಜಾಗೃತಿ ಮೂಡಿಸಿ ಆನಂತರ ಅವರುಗಳಿಗೆ ಬಿಟ್ಟು ಕಳುಹಿಸಿದ ಘಟನೆ ಇಂದು ನಡೆಯಿತು . ಪುನಃ ಇದೇ ರೀತಿ ನೀವುಗಳು ಕಾನೂನು ಉಲ್ಲಂಘಿಸಿದರೆ ಮುಂದಿನ ದಿನಮಾನಗಳಲ್ಲಿ ಕೇಸು ದಾಖಲಿಸಲಾಗುವುದು ಎಂದು ಅವರಿಗೆ ಎಚ್ಚರಿಕೆಯನ್ನು ಕೊಟ್ಟರು.