ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ದಿ 30 ರಾಜ್ಯದಲ್ಲಿ ಕೋರೋನಾ 2ನೇ ಅಲೆಯು ತಿವ್ರತರವಾಗಿರುವ ಕಾರಣ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನ ಪ್ರತಿಯೊಬ್ಬ ಮಕ್ಕಳಿಂದ ಹಿಡಿದು ಯಜಮಾನರಾದಿಯಾಗಿ ಪ್ರತಿಯೊಬ್ಬರು ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ, ಅಂತರವನ್ನು ಕಾಯ್ದುಕೊಂಡು ಅವಶ್ಯಕತೆ ಇದ್ದರೆ ಮಾತ್ರ ಮನೆಯಿಂದ ಹೊರಗೆ ಬನ್ನಿ ಅನವಶ್ಯಕವಾಗಿ ತಿರುಗಾಡ ಬೇಡಿ. ನಮ್ಮ ನಮ್ಮ ಜೀವ ನಮ್ಮ ಕೈಯಲ್ಲಿರುವ ಕಾರಣ ಪ್ರತಿಯೊಬ್ಬರು ಎಚ್ಚರಿಕೆಯಿಂದ ಬದುಕಿದಾಗ ಕೊರೋನಾ ಎರಡನೇ ಅಲೆ ರೋಗದಿಂದ ಮುಕ್ತರಾಗಬಹುದು ಎಂದು ಹೊನ್ನಾಳಿ ತಾಲೂಕಿನ ಮಾಜಿ ಶಾಸಕರಾದ ಡಿ.ಜಿ ಶಾಂತನಗೌಡ್ರು ರವರು ಅವಳಿ ತಾಲೂಕುಗಳ ಜನತೆಗೆ ಮನವಿ ಮಾಡಿಕೊಂಡರು.