ಹೊನ್ನಾಳಿ ತಾಲೂಕು ಆಫೀಸಿಗೆ ಸಭಾಂಗಣದಲ್ಲಿ ಇಂದು ಕೊರೋನಾ 2ನೇಯ ಅಲೆಯ ಅಂಗವಾಗಿ 2 ತಾಲೂಕುಗಳ ಅಧಿಕಾರಿಗಳಿಂದ ಮತ್ತು ಟಾಸ್ಕ್ ಪೊಸ್ ಸಭೆಯು ಎಂಪಿ ರೇಣುಕಾಚಾರ್ಯರು ನೇತ್ರೃತ್ವದಲ್ಲಿ ನಡೆಯಿತು. ಈ ಸಭೆಯ ಉದ್ದೇಶ ಎರಡು ತಾಲೂಕು ಆಡಳಿತದಿಂದ ಎರಡು ತಾಲೂಕುಗಳಲ್ಲಿ ಜನರು ಅನವಶ್ಯಕವಾಗಿ ಜನರು ಭಯವಿಲ್ಲದೆ ಓಡಾಡುತಿದ್ದಾರೆ ಸರ್ಕಾರದ ನಿಯಮವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವ ದೃಷ್ಟಿಯಿಂದ ಬೆಳಗ್ಗೆ 6 ರಿಂದ 11 ಗಂಟೆವರೆಗೆ ಸರಕು-ಸಾಮಗ್ರಿಗಳನ್ನು ಮತ್ತು ಕೃಷಿಗೆ ಸಂಬಂಧಪಟ್ಟ ಪರಿಕರಗಳನ್ನು ಪ್ರತಿಯೊಬ್ಬರು ಬೆಳಗ್ಗೆ 11:00 ಗಂಟೆ ಒಳಗೆ ಕರೆದಿ ಮಾಡ ಬೇಕು ನಂತರ ಕಿರಾಣಿ ಅಂಗಡಿಯವರು 11 ಗಂಟೆ ನಂತರ ಬಾಗಿಲು ತೆರದರೆ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ತಹಶೀಲ್ದಾರ್ ರಾದ ಬಸವನಗೌಡ ಕೊಟೂರು ರವರೂ ಎರಡು ತಾಲೂಕಿನ ಜನರಿಗೆ ಸೂಚನೆಯನ್ನು ಕೊಟ್ಟರು.
ನಂತರ ಮಾತನಾಡಿದ ಬಸವನಗೌಡ ಕೊಟೂರುರವರು ಕೊರೋನಾ 2ನೇ ಅಲೆಯು ತೀವ್ರತರವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ
ಶಾಸಕರ ಆದೇಶದ ಮೆರೆಗೆ ಪ್ರತಿಯೊಬ್ಬರೂ ಎರಡು ತಾಲೂಕು ಅಧಿಕಾರಿಗಳು ಜಿಲ್ಲೆಯಿಂದ ತಾಲೂಕುಗೆ ಬರುವ ಅಧಿಕಾರಿಗಳು ಕೊರೋನಾ ಅಲೆಯು ಮುಗಿಯುವ ವರೆಗೆ ಹೊನ್ನಾಳಿ ಯಲ್ಲಿ ರೂಂ ಮಾಡಿಕೊಂಡು ಇರಬೇಕೆಂದು
ಖಡಕ್ಕಾಗಿ ಸೂಚನೆಯನ್ನು ಕೊಟ್ಟರು.
ಉಪಸ್ಥಿತಿಯಲ್ಲಿ ಶಾಸಕರಾದ ಎಂಪಿ ರೇಣುಕಾಚಾರ್ಯ ,ತಾಲೂಕು ದಂಡಾಧಿಕಾರಿಗಳಾದ ಬಸನಗೌಡ ಕೋಟೂರ್, ನ್ಯಾಮತಿ ತಹಶೀಲ್ದಾರ್ ರಾದ ತನುಜಾ ಟಿ ಸವದತ್ತಿ ,ಕೆ.ವಿ ಶ್ರೀಧರ್, ಸರ್ಕಲ್ ಇನ್ಸ್ಪೆಕ್ಟರ್ ಟಿ.ವಿ ದೇವರಾಜ್ ಎರಡು ತಾಲೂಕಿನ ಎಲ್ಲಾ ಅಧಿಕಾರಿ ವರ್ಗದವರು ಸಹ ಭಾಗಿಯಾಗಿದ್ದರು.
