ಹೊನ್ನಾಳಿ ತಾಲೂಕಿನ ಸವಳಂಗ ವಲಯದ ಆರುಂಡಿ ಕಾರ್ಯಕ್ಷೇತ್ರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಪರಿಸರ ಕಾರ್ಯಕ್ರಮ ಆಯೊಜಿಸಿ 100 ಸಸಿಗಳನ್ನು ನಾಟಿ ಮಾಡಿಸಲಾಯಿತು ಈ ಸಂಧರ್ಭ ರಾಷ್ಟ್ರ ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕರಾದ ಶ್ರೀ ಹಾಲಪ್ಪ ಸರ್ ರವರು ಕಾರ್ಯಕ್ರಮ ಉದ್ಘಾಟಿಸಿ ಪರಿಸರ ಕಾರ್ಯಕ್ರಮ ಮಾಡಿ ಗಿಡ ನಾಟಿ ಮಾಡುವುದರಿಂದ ನೆಲಜಲ ಸಂರಕ್ಷಣೆ ಆಗುತ್ತದೆ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ, ಇದನ್ನು ಮಾಡುತ್ತಿರುವ ಧರ್ಮಸ್ಥಳ ಯೋಜನೆಗೆ ನಾನು ಕೃತಜ್ಞತೆ ಸಲ್ಲಿಸುತ್ತೆನೆ ಎಂದರು. ಯೋಜನಾಧಿಕಾರಿ ಶ್ರೀ ಬಸವರಾಜ್ ಮಾತನಾಡಿ ಯಜನೆಯ ಕಾರ್ಯಕ್ರಮಗಳ ಬಗ್ಗೆ, ಸಾಮಾಜಿಕ ಅರಣ್ಯಿಕರಣ , ಕೃಷಿ ಅರಣ್ಯಿಕರಣದ ಲಾಭಗಳ ಬಗ್ಗೆ , ಅರಣ್ಯಿಲಾಖೆಯಿಂದ ಇರುವ ಕೃಷಿಅರಣ್ಯಿಕರಣದ ಪ್ರೋತ್ಸಾಹ ಧನ ಯೋಜನೆ ಬಗ್ಗೆ ಮಾಹಿತಿ ನಿಡಿದರು. sdmc ಅಧ್ಯಕ್ಷರಾದ ಶ್ರೀ ಶೆಕರಪ್ಪರವರು, ಗ್ರಾಮ ಪಂಚಾಯತಿ ಸದಸದಯರಾದ ಶ್ರೀ ಮತಿ ಕಾವೇರಿ, ಒಕ್ಕೂಟದ ಅಧ್ಯಕ್ಷರಾದ ಶ್ರೀ ಮತಿ ಇಂದ್ರಮ್ಮ ರವರು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಪರಮೆಶ್ವರಪ್ಪ ಕೆ, ಕೃಷಿ ಮೆಲ್ವಿಚಾರಕ ಶ್ರೀ ಪ್ರದೀಪ್, ಉಪಸ್ಥಿತಿ ಇದ್ದರು. ಮೆಲ್ವಿಚಾರಕ ಮಧೂಸೂದನ ಸ್ವಾಗತಿಸಿದರು, ಶಿಕ್ಷಕಿ ಶ್ರೀ ಮತಿ ರೇಣುಕಾ ಸಿ ಎಸ್ ರವರು ಕಾರ್ಯಕ್ರಮ ನಿರ್ವಹಿಸಿದರು. ಸೇವಾಪ್ರತಿನಿಧಿಗಳು, ಸ್ವಸಹಾಯ ಸಂಘದ ಸದಸ್ಯರು, ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.