ಲೆಕ್ಕಪರಿಶೋಧಕರಿಗೆ ಉಚಿತ ಲಸಿಕಾ ಶಿಬಿರ

ದಾವಣಗೆರೆ: ಶಾಸಕ ಡಾ|| ಶಾಮನೂರು
ಶಿವಶಂಕರಪ್ಪನವರು ಮತ್ತು ಎಸ್.ಎಸ್. ಮಲ್ಲಿಕಾರ್ಜುನ್
ಅವರು ಏರ್ಪಡಿಸಿರುವ ಉಚಿತ ಲಸಿಕಾ ಶಿಬಿರ ಇಂದು ದಾವಣಗೆರೆ
ಜಿಲ್ಲೆಯ ಲೆಕ್ಕಪರಿಶೋಧಕರಿಗಾಗಿ ನಗರದ ರೋಟರಿ
ಬಾಲಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.


ಲಸಿಕಾ ಕೇಂದ್ರಕ್ಕೆ ದಾವಣಗೆರೆ ದಕ್ಷಿಣ ವಿಧಾನಸಭಾ
ಕ್ಷೇತ್ರದ ಶಾಸಕರಾದ ಡಾ|| ಶಾಮನೂರು
ಶಿವಶಂಕರಪ್ಪನವರು ಭೇಟಿ ನೀಡಿ ಲಸಿಕೆ ಪಡೆದ
ಲೆಕ್ಕಪರಿಶೋಧಕರು ಮತ್ತವರ ಕುಟುಂಬದ
ಆರೋಗ್ಯ ವಿಚಾರಿಸಿದರು.
ಈ ಸಂದರ್ಭದಲ್ಲಿ ಹಿರಿಯ ಲೆಕ್ಕಪರಿಶೋಧಕರಾದ
ಉದ್ಯಮಿ ಅಥಣಿ ವೀರಣ್ಣ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ
ದಿನೇಶ್ ಕೆ. ಶೆಟ್ಟಿ, ಲೆಕ್ಕಪರಿಶೋಧಕರ ಸಂಘದ
ಅಧ್ಯಕ್ಷರಾದ ಉಮೇಶ್ ಶೆಟ್ಟಿ ಹಾಗೂ ಪದಾಧಿಕಾರಿಗಳು
ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *