ಕೊರೊನಾ ನಡುವೆಯೂ ವಿದ್ಯಾರ್ಥಿಗಳನ್ನು ಕಲಿಕೆಯಲ್ಲಿ ತೊಡಗಿಸಿಕೊಳ್ಳಿ
ಹೊನ್ನಾಳಿ: ಎರಡು ವರ್ಷದಿಂದ ವಿದ್ಯಾರ್ಥಿಗಳು ಕಲಿಕೆಯಲ್ಲಿ ತೊಡಗಿಕೊಂಡಿಲ್ಲ. ಆದ್ದರಿಂದ ಶಾಲೆಯು ಪ್ರಾರಂಭದ ದಿನದಿಂದಲೇ ವಿದ್ಯಾರ್ಥಿಗಳನ್ನು ದೂರವಾಣಿ, ಇನ್ನಿತರೆ ಮೂಲಗಳಿಂದ ಸಂಪರ್ಕಿಸಿ ಅಭ್ಯಾಸದಲ್ಲಿ ತೊಡಗಿಕೊಳ್ಳುವಂತೆ ಮಾಡಬೇಕು. ಸರ್ಕಾರ ಜಾರಿಗೊಳಿಸಿರುವ ವಿದ್ಯಾಗಮವನ್ನು ಕಟ್ಟುನಿಟ್ಟಿನಲ್ಲಿ ಪಾಲಿಸುವ ಮೂಲಕ ನಾಳಿನ ನಾಗರೀಕರ ನಿರ್ಮಾಣ ಮಾಡಬೇಕು ಎಂದು ಭಾರತೀಯ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಡಾ.ಎಚ್.ಪಿ ರಾಜ್‌ಕುಮಾರ್ ಹೇಳಿದರು.
ಪಟ್ಟಣದ ಭಾರತೀಯ ವಿದ್ಯಾ ಸಂಸ್ಥೆಯಲ್ಲಿ ಶಾಲಾ ಪ್ರಾರಂಭೋತ್ಸವದಲ್ಲಿ ಅವರು ಮಾತನಾಡಿದರು.
ಕಸಬಾ ಸಿಆರ್‌ಪಿ ಪರಶುರಾಮ್ ಮಾತನಾಡಿ, ಈ ಶೈಕ್ಷಣಿಕ ವರ್ಷದಲ್ಲಿ ಭೌತಿಕವಾಗಿ ಶಾಲೆಯು ಪ್ರಾರಂಭವಾಗುವ ಸಾಧ್ಯತೆಯು ಹೆಚ್ಚಾಗಿದೆ. ವಿದ್ಯಾರ್ಥಿಗಳು ಶಿಕ್ಷಕರ ನಡುವೆ ಬಾಂಧವ್ಯ ವೃದ್ಧಿಸುವಂತೆ ಆಗಬೇಕು. ದಾಖಲಾತಿ ಆಂದೋಲನದ ಮೂಲಕ ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ಶಾಲೆಗೆ ದಾಖಲಾಗುವಂತೆ ನೋಡಿಕೊಳ್ಳಬೇಕು. ಶಾಲೆಯಿಂದ ಯಾವ ವಿದ್ಯಾರ್ಥಿಯು ಹೊರಗುಳಿಯದಂತೆ ಎಚ್ಚರ ವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ತಿಮ್ಮೇಶ್ ಆರ್, ಶಿಕ್ಷಕರಾದ ಗಿರೀಶ್ ನಾಡಿಗ್, ಶಿವಲಿಂಗಪ್ಪ, ರವಿಕುರಮಾರ್, ಅಶೋಕ್, ಶಶಿಕಲಾ, ನಾಗಮ್ಮ, ರುಕ್ಮಿಣಿ, ಮಂಜಪ್ಪ, ಸತೀಶ್ ಬಂಗೇರ ಇದ್ದರು.
ಹೊನ್ನಾಳಿ ಪಟ್ಟಣದ ಭಾರತೀಯ ವಿದ್ಯಾ ಸಂಸ್ಥೆಯಲ್ಲಿ ನಡೆದ ಶಾಲಾ ಪ್ರಾರಂಭದಲ್ಲಿ ಪೋಷಕರೊಂದಿಗೆ ಆಗಮಿಸಿದ್ದ ವಿದ್ಯಾರ್ಥಿಗಳಿಗೆ ಪುಸ್ತಕ ಹಿಂಪಡೆದು ಮುಂದಿನ ತರಗತಿಯ ಪುಸ್ತಕಗಳನ್ನು ವಿತರಿಸಲಾಯಿತು.