ಈ ದಿನ ವಿಶೇಷ ವೃತ್ತಿಗಳ ದಿನಾಚರಣೆ ಇದ್ದು, ಸಮಾಜದ ಉನ್ನತಿಗಾಗಿ, ಸಮಾಜದ ಸ್ವಸ್ಥೆತೆಗಾಗಿ, ಹಗಲಿರುಳು ಶ್ರಮಿಸುವ ವರ್ಗವನ್ನ ಗೌರವಿಸುವ ಸುದಿನ. ಎಲ್ಲರೂ ತಮ್ಮ ತಮ್ಮ ವೃತ್ತಿಗೆ ನ್ಯಾಯ ಸಲ್ಲಿಸುವ ಅವಕಾಶಗಳು, ಸೇವಾ ಮನೋಭಾವ ಹೊಂದಿ, ಜನರನ್ನ ಸರಿದಾರಿಗೆ ತಂದು, ಸಮಾಜ ಸುದಾರಣೆಗೆ ಶ್ರಮಿಸಲಿ. ಈ ದಿನ ವೈದ್ಯರ, ಪತ್ರಕರ್ತರ, ಲೆಕ್ಕಪರಿಶೋಧಕರ, ಅಂಚೆ ಕಾರ್ಮಿಕರ ದಿನವಾಗಿದ್ದು, ಎಲ್ಲರಿಗೂ ನಾವೆಲ್ಲಾ ಶುಭ ಹಾರೈಸೋಣ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ. ಎಚ್. ಕೆ. ಎಸ್. ಸ್ವಾಮಿ ತಿಳಿಸಿದರು.
ಅವರು ನಗರದ ತರಳಬಾಳು ನಗರದ ಒಂದನೇ ಮುಖ್ಯರಸ್ತೆಯಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮತ್ತು ಮಲ್ಲನಕಟ್ಟೆ ಗ್ರಾಮದ ಸಹಯೋಗದೊಂದಿಗೆ ಆಯೋಜಿಸಿದ್ದ “ವಿಶೇಷ ವೃತ್ತಿಗಳ ದಿನಾಚರಣೆ” ಕಾರ್ಯಕ್ರಮದಲ್ಲಿ ಮಾತನಾಡಿದರು.

ಜನರ ನೋವನ್ನು ನಿವಾರಿಸಿ, ಅವರನ್ನು ರೋಗದಿಂದ ಗುಣಮುಖರನ್ನಾಗಿಸುವುದೇ ವೈದ್ಯರ ವೃತ್ತಿ ಧರ್ಮ. ಅವರನ್ನ ಸಮಾಜ ಅತ್ಯುತ್ತಮವಾಗಿ ಗೌರವಿಸುತ್ತದೆ. ಅ ಗೌರವವನ್ನು ಉಳಿಸಿಕೊಳ್ಳಲು ಬಹಳಷ್ಟು ವೈದ್ಯರು ಶ್ರಮಪಟ್ಟಿದ್ದಾರೆ. ತ್ಯಾಗಿಗಳಾಗಿ ಸಮಯ ಸಂದರ್ಭದ ಲೆಕ್ಕ ಹಾಕದೆ, ಎಮರ್ಜೆನ್ಸಿಗಳಲ್ಲಿ, ತಮ್ಮ ಸಂಸಾರದ ಸುಖವನ್ನು ತ್ಯಜಿಸಿ, ಸಮಾಜಸೇವೆ ಮಾಡುತ್ತಿದ್ದಾರೆ. ಅಂಚೆ ಕಾರ್ಮಿಕರು ಸಹ ದೂರ ದೂರದ ಹಳ್ಳಿಗಳಿಗೆ, ತಾಂಡಗಳಿಗೆ, ಅಂಚೆಗಳÀನ್ನು ತಲುಪಿಸಿ, ಹಣ, ಸಂದೇಶವನ್ನು ತಲುಪಿಸಿ, ಸಮಾಜ ಸೇವೆಯಲ್ಲಿ ನಿರತರಾಗಿದ್ದಾರೆ. ಸಮಾಜಕ್ಕಾಗಿ ಶ್ರಮಿಸಿ, ತಮ್ಮೆಲ್ಲಾ ಜ್ಞಾನವನ್ನ ಜನರಿಗೆ ತಲುಪಿಸುವ ವೈದ್ಯರನ್ನ ನಾವು ಗುರುತಿಸಬೇಕಾಗಿದೆ ಎಂದರು.
ಪತ್ರಕರ್ತರು ಸಮಾಜದ ಕುಂದು ಕೊರತೆಗಳನ್ನು ನೀಗಿಸುವಲ್ಲಿ, ಅಂಕುಡೊಂಕುಗಳನ್ನು ತಿದ್ದುವಲ್ಲಿ, ಶ್ರಮವಹಿಸುತ್ತಿದ್ದಾರೆ. ಪ್ರತಿ ನಿತ್ಯ ಜ್ಞಾನದ ಅರಿವನ್ನ ಹೆಚ್ಚಿಸುವಲ್ಲಿ ನೆರವಾಗುತ್ತಿದ್ದಾರೆ. ಇವರೆಲ್ಲರ ಸೇವೆಯಿಂದ ಸಮಾಜ ಸುಸ್ಥಿತಿಯಲ್ಲಿರುತ್ತದೆ. ಇವರೆಲ್ಲರ ಸೇವೆಯನ್ನ ನಾವು ಗುರುತಿಸಬೇಕಾಗಿದೆ ಹಾಗೂ ಅವರಿಗೆ ನಾವು ಸಹಕಾರ ನೀಡಬೇಕಾಗಿದೆ. ಇಂತಹ ಉದ್ಯೋಗಿಗಳಿಗೆ, ಸೇವಾ ಮನೋಭಾವನೆ, ಸರಳವಾಗಿರುವ ವಿದ್ಯಾರ್ಥಿಗಳನ್ನು ತಯಾರು ಮಾಡಬೇಕಾಗುತ್ತದೆ. ಶಿಕ್ಷಣದಲ್ಲಿ ಮಕ್ಕಳಿಗೆ ಇವುಗಳ ಬಗ್ಗೆ ಅರಿವನ್ನು ಮೂಡಿಸಬೇಕಾಗಿದೆ. ವೃತ್ತಿಪರ ವಿಶೇಷತೆಗಳನ್ನ ಆಚರಿಸಿ, ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದರು.
ಮಕ್ಕಳು ವಿವಿಧ ವೃತ್ತಿಗಳ ವೇಷಭೂಷಣಗಳನ್ನು ಧರಿಸಿ, ವಿಶೇಷ ವೃತ್ತಿಗೆ ಗೌರವ ತರುವಂತಹ ಭಿತ್ತಿ ಚಿತ್ರಗಳನ್ನು ಪ್ರದರ್ಶಿಸಿ ಜನಜಾಗೃತಿ ಮೂಡಿಸಿದರು.
ಕಾರ್ಯಕ್ರಮದಲ್ಲಿ ಪಾರ್ಮಸಿಸ್ಟ್ ರಮೇಶ್, ವಿದ್ಯಾರ್ಥಿಗಳಾದ ಶ್ರೀನಿವಾಸ, ಹೆಚ್.ಎಸ್.ರಚನ, ಹೆಚ್.ಎಸ್. ಪ್ರೇರಣ, ಅಂಶುಲ್, ವೇನಿಲಾ ಹಾಜರಿದ್ದರು.

Leave a Reply

Your email address will not be published. Required fields are marked *