ಹೊನ್ನಾಳಿ ತಾಲೂಕಿನ ಹನುಮನಹಳ್ಳಿ ವಲಯದ ತರಗನಹಳ್ಳಿ ಕಾರ್ಯಕ್ಷೇತ್ರದ ಕಿತ್ತೂರಾಣಿ ಚನ್ನಮ್ಮ ಶಾಲೆಯ ಆವರಣದಲ್ಲಿ ಪರಿಸರ ಕಾರ್ಯಕ್ರಮ ಆಯೊಜಿಸಿ 100 ಸಸಿಗಳನ್ನು ನಾಟಿ ಮಾಡಿಸಲಾಯಿತು ಈ ಸಂಧರ್ಭ ಶಾಲಾ ಪ್ರಾಂಶುಪಾಲರಾದ ಶ್ರೀಮತಿ ಸುಭದ್ರಮ್ಮ ರವರು ಕಾರ್ಯಕ್ರಮ ಉದ್ಘಾಟಿಸಿ ಪರಿಸರ ಕಾರ್ಯಕ್ರಮ ಮಾಡಿ ಗಿಡ ನಾಟಿ ಮಾಡುವುದರಿಂದ ನೆಲಜಲ ಸಂರಕ್ಷಣೆ ಆಗುತ್ತದೆ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ, ಇದನ್ನು ಮಾಡುತ್ತಿರುವ ಧರ್ಮಸ್ಥಳ ಯೋಜನೆಗೆ ನಾನು ಕೃತಜ್ಞತೆ ಸಲ್ಲಿಸುತ್ತೆನೆ ಎಂದರು.
ಯೋಜನಾಧಿಕಾರಿ ಶ್ರೀ ಬಸವರಾಜ್ ಮಾತನಾಡಿ ಯಜನೆಯ ಕಾರ್ಯಕ್ರಮಗಳ ಬಗ್ಗೆ, ಪೂಜ್ಯ ಡಾ. ವೀರೇಂದ್ರ ಹೆಗ್ಗಡೆಯವರು ಸಾಮಾಜಿಕ ಅರಣ್ಯಿಕರಣ ಬಗ್ಗೆ ಕಾಳಜಿವಹಿಸಿ ಪರಿಸರ ಜಾಗ್ರತಿ ಕಾರ್ಯಕ್ರಮದ ಮೂಲಕ ಗಿಡ ನಾಡಿ ಅರಣ್ಯ ಅಭಿವೃದ್ಧಿ ಮಾಡಬೆಕೆಂಬ ಆಸಯದೊಂದಿಗೆ ಇ ವರ್ಷದಲ್ಲಿ ಮುಖ್ಯ ಕಾರ್ಯಕ್ರಮ ಅಳವಡಿಸಿದ್ದಾರೆ, ಕೃಷಿ ಅರಣ್ಯಿಕರಣದ ಲಾಭಗಳ ಬಗ್ಗೆ , ಅರಣ್ಯಿಲಾಖೆಯಿಂದ ಇರುವ ಕೃಷಿಅರಣ್ಯಿಕರಣದ ಪ್ರೋತ್ಸಾಹ ಧನ ಯೋಜನೆ ಬಗ್ಗೆ ಮಾಹಿತಿ ನಿಡಿದರು, ಉಪಸ್ಥಿತಿ ಇದ್ದರು.ಗ್ರಾಮ ಪಂಚಾಯತ ಸದಸ್ಯರಾದ ಶ್ರೀ ರಮೇಶ ರವರು ಮಾತನಾಡಿ ಧರ್ಮಸ್ಥಳ ಯೋಜನೆಯು ಸ್ವಯಂಪ್ರೆರಿತವಾಗಿ ಅರಣ್ಯ ಸಂರಕ್ಷಣೆಗೆ ಕಾರ್ಯಕ್ರಮ ಮಾಡುತ್ತಿರುವದು ಹೆಮ್ಮೆಯ ವಿಚಾರವಾಗಿದೆ ಎಂದರು, ಗ್ರಾಮಸ್ಥರಾದ ಅಣ್ಣಪ್ಪ, ಒಕ್ಕೂಟದ ಅಧ್ಯಕ್ಷರು ಉಪಸ್ಥಿತಿ ಇದ್ದರು. ಮೆಲ್ವಿಚಾರಕ ಮಂಜುನಾಥ ರವರು ಕಾರ್ಯಕ್ರಮ ನಿರ್ವಹಿಸಿದರು ಸ್ವಾಗತಿಸಿದರು. ಸೇವಾಪ್ರತಿನಿಧಿಗಳು, ಸ್ವಸಹಾಯ ಸಂಘದ ಸದಸ್ಯರು, ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶ್ರೀಮತಿ ಆಯೆಷಾ ವಂದಿಸಿದರು.