ಕರ್ನಾಟಕ ರಾಜ್ಯ ಚುನಾವಣಾ ಆಯೋಗವು ಇತ್ತೀಚೆಗೆ ಕರ್ನಾಟಕ ರಾಜ್ಯ ರಾಜಕೀಯದ ಮಹತ್ವದ ತಿರುವು ಕಾಣುವಂತಹ ಹಾಗೂ ಬಹು ನಿರೀಕ್ಷಿತ ಜಿಲ್ಲಾ ಪಂಚಾಯ್ತಿ ಚುನಾವಣೆಗೆ ಸಂಭಂಧಿಸಿದಂತೆ ಮೀಸಲಾತಿಯ ಕರಡು ಅಧಿಸೂಚನೆ ಹೊರಡಿಸಿದ್ದು ಇದರಲ್ಲಿ ದಾವಣಗೆರೆ ಜಿಲ್ಲಾ ಪಂಚಾಯ್ತಿ ಮೀಸಲಾತಿಯಲ್ಲಿ ಅನೇಕ ಕ್ಷೇತ್ರಗಳಲ್ಲಿ ಅನೇಕ ರೀತಿಯ ಗೊಂದಲವುಂಟಾಗಿದ್ದು ಈ ಕೂಡಲೇ ಮತ್ತೊಮ್ಮೆ ಈ ಆದೇಶವನ್ನು ಪರಿಶೀಲಿಸಬೇಕೆಂದು ಕರ್ನಾಟಕ ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಒತ್ತಾಯಿಸಿದ್ದಾರೆ.
ರಾಜ್ಯ ಚುನಾವಣಾ ಆಯೋಗವು ಯಾವ ಆಧಾರದ ಮೇಲೆ ಈ ಮೀಸಲಾತಿ ಮಾಡಿದ್ದಾರೆ ಎಂಬುದು ಇನ್ನೊಂದು ಕುತೂಹಲಕ್ಕೆ ಕಾರಣವಾಗಿದೆ ಹಲವು ಕ್ಷೇತ್ರಗಳ ಮಹಿಳಾ ಮೀಸಲಾತಿಯನ್ನು ಈ ಬಾರಿ ಕಡಿತಗೊಳಿಸಿದ್ದು ಮಹಿಳಾ ಆಕಾಂಕ್ಷಿ ಅಭ್ಯರ್ಥಿಗಳಿಗೆ ಆಘಾತವನ್ನುಂಟು ಮಾಡಿದೆ.
ಇನ್ನು ಹಲವು ಕ್ಷೇತ್ರಗಳಲ್ಲಿ ಹಿಂದುಳಿದ ವರ್ಗಕ್ಕೆ ಸೇರಿದ ಜನ ಹೆಚ್ಚಿರುವ ಕ್ಷೇತ್ರಗಳಲ್ಲಿ ಇತರರಿಗೆ ಅವಕಾಶ ನೀಡುವಂತೆ ಮಾಡಿರುವುದು ಇಲ್ಲಿ ರಾಜಕೀಯ ಕುತಂತ್ರದ ವಾಸನೆ ಬರುವಂತೆ ಮಾಡುತ್ತದೆ. ಹಲವಾರು ಹಿಂದುಳಿದ ಅಭ್ಯರ್ಥಿಗಳು ಈಗಾಗಲೇ ತಮ್ಮ ಸ್ಪರ್ಧೆಗೆ ಅಣಿಯಾಗಿದ್ದು ಈ ಮೀಸಲಾತಿ ಪಟ್ಟಿಯಿಂದ ಹಿಂದುಳಿದ ವರ್ಗದವರನ್ನು ಅಧಿಕಾರದಿಂದ ದೂರವಿರಿಸುವ ತಂತ್ರವನ್ನು ಹೆಣೆಯಲಾಗಿದೆ ಎಂಬ ಅನುಮಾನ ಮೂಡುತ್ತಿದೆ.
ಇಲ್ಲಿ ಆಕ್ಷೇಪಣೆ ಸಲ್ಲಿಕೆಗೂ ಸಹ ಹೆಚ್ಚು ಅವಕಾಶವನ್ನು ನೀಡಲಾಗಿಲ್ಲ ಕೇವಲ 7 ದಿನಗಳ ಕಾಲಾವಕಾಶ ನೀಡಲಾಗಿದ್ದು ಅದರಲ್ಲಿ ಶನಿವಾರ ಮತ್ತು ಭಾನುವಾರ ಹೊರತುಪಡಿಸಿದರೆ ಉಳಿಯುವುದು ಕೇವಲ 5 ದಿನ ಮಾತ್ರ. ಈ ಮೀಸಲಾತಿ ಪಟ್ಟಿಯಿಂದ ಹಲವಾರು ಅಭ್ಯರ್ಥಿಗಳಿಗೆ ನಿರಾಸೆ ಉಂಟುಮಾಡಿದ್ದು ಇದರಿಂದ ಸರ್ಕಾರ ಕೂಡಲೇ ಈ ಪಟ್ಟಿಗೆ ತಾತ್ಕಾಲಿಕ ತಡೆಯಾಜ್ಞೆ ನೀಡಿ ಮತ್ತೊಮ್ಮೆ ಪರಿಶೀಲಿಸಬೇಕೆಂದು ಮನವಿ ಮಾಡಿಕೊಂಡಿದ್ದಾ