ಗದಗ: ಸ್ವಸ್ಥ ಸಮಾಜ ನಿಮರ್ಾಣದಲ್ಲಿ ವೈದ್ಯರ ಪಾತ್ರ ಬಹುಮುಖ್ಯವಾಗಿದೆ. ಕೋವಿಡ್ನಂತಹ ಸಂಕಷ್ಟದಲ್ಲಿದ್ದಾಗ ವೈದ್ಯರ ಸೇವೆಯ ಮಹತ್ವ ಏನೆಂಬುದು ಜಗಜ್ಜಾಹೀರಾಗಿದೆ ಎಂದು ಕಾಂಗ್ರೆಸ್ ನ ಹಿರಿಯ ಮುಖಂಡ ಹಾಗೂ ಶಾಸಕ ಎಚ್.ಕೆ. ಪಾಟೀಲ ಹೇಳಿದರು.
ವೈದ್ಯರ ದಿನಾಚರಣೆ ನಿಮಿತ್ತ ಇಲ್ಲಿನ ಖಾನತೋಟದ ಶಾಬಾದಿಮಠರವರ ಲೇಔಟ್ನಲ್ಲಿ ಹಾಳದಿಬ್ಬ ವಿವಿಧೊದ್ದೇಶಗಳ ಸೇವಾ ಸಮಿತಿ ಹಮ್ಮಿಕೊಂಡಿದ್ದ 101 ಸಸಿ ನೆಡುವ ಹಾಗೂ ವೈದ್ಯರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಂದಿನ ದಿನಗಳಲ್ಲಿ ಬೇಕಾದವರು ಬೇಕಾದಂತೆ ಮುಖ್ಯಮಂತ್ರಿ ಆಗುವುದು ಸರಳ. ಆದರೆ, ಅಶಾಂತ ವಾತಾವರಣದಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾದವರು ಬಿ.ಸಿ. ರಾಯ್ ಅವರು. ಅಷ್ಟೇ ಅಲ್ಲ, ಉನ್ನತ ಶಿಕ್ಷಣ ಪಡೆದ, ವೈದ್ಯರಾಗಿದ್ದ ಅವರು ಇಂತಹ ಹುದ್ದೆ ಅಲಂಕಸಿದ್ದು ವಿಶೇಷವಾಗಿತ್ತು. ಅವರು ತಮ್ಮ ಅಧಿಕಾರಾವಧಿಯಲ್ಲಿ ವೈದ್ಯಕೀಯ ಕ್ಷೇತ್ರದೊಂದಿಗೆ ಐದು ದೊಡ್ಡ ಪಟ್ಟಣಗಳನ್ನು ಕಟ್ಟಿದರು. ಹೀಗಾಗಿ ಅವರು ತಮ್ಮ ದಿನಾಚರಣೆಯನ್ನು ವೈದ್ಯರಿಗೆ ಮೀಸಲಿಟ್ಟು, ಸಮಪರ್ಿಸಿದ್ದ ಪರಿಣಾಮ ಇಂದು ದೇಶದೆಲ್ಲೆಡೆ ವೈದ್ಯರ ದಿನಾಚರಣೆ ನಡೆಯುತ್ತಿದೆ. ರಾಷ್ಟ್ರ ಕಟ್ಟುವಲ್ಲಿ ಅವರ ಬಹುದೊಡ್ಡ ಕೊಡುಗೆ ಇದೆ ಎಂದರು.
ಕೋವಿಡ್ ಕಾಲದಲ್ಲಿ ಸೋಂಕಿತರಾದಾಗ ಸೇವೆ ದೂರ ಇರಲಿ, ಮುಖ ನೋಡಲು ಮುಂದೆ ಬರದ ಸ್ಥಿಯಿಯಲ್ಲಿ ವೈದ್ಯರು ತಮ್ಮ ಜೀವದ ಹಂಗು ತೊರೆದು ಕೆಲಸ ಮಾಡಿದ್ದಾರೆ. ಅದರ ಭೀಕರತೆ ಜನಸಶಾಮಾನ್ಯರಿಗಿಂತ ವೈದ್ಯರಿಗೆ ಹೆಚ್ಚು ಗೊತ್ತಿದ್ದರೂ ಸೋಂಕಿತರ ಸೇವೆಯಲ್ಲಿ ತೊಡಗಿದ್ದು ಪ್ರಶಂಸಾರ್ಹ ಎಂದು ವೈದ್ಯರಿಗೆ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ವೈದ್ಯರುಗಳಾದ ಡಾ. ಎಸ್. ಆರ್. ನಾಗನೂರ, ಡಾ. ಸತೀಶ ಬಸರಿಗಿಡದ, ಡಾ. ಆರ್. ಎನ್. ಮ್ಯಾಗೇರಿ, ಡಾ. ಜಿ.ಎಸ್. ಪಲ್ಲೇದ, ಡಾ.ಯೋಗೇಶ ಕುಂದಗೋಳ, ಡಾ. ಧನೇಶ ದೇಸಾಯಿ, ಡಾ. ಎಸ್. ಎಸ್. ನೀಲಗುಂದ, ಡಾ. ಸಂಗಮೇಶ ಅಸೂಟಿ, ಡಾ. ಜಗದೀಶ ಗಡ್ಡೆಪ್ಪನವರ, ಡಾ. ವಿಜಯ ಅಂಗಡಿ, ಡಾ. ಜಿತೇಂದ್ರ ಮುಗಳಿ, ಡಾ. ಪ್ರೇಮಾ ಬಾಬಣ್ಣವರ, ಡಾ. ನರೇನ ಎಮ್. ಗೌಡ, ಡಾ. ಬಿ. ಜಿ. ಸ್ವಾಮಿ, ಡಾ. ವಿ. ಎಸ್. ಕಂಠಿ, ಡಾ.ಸಿ. ಎಸ್. ಹನಮಂತಗೌಡ, ಡಾ.ವಾಸುದೇವ ಹುಯಿಲಗೋಳ, ಡಾ.ದಯಾನಂದ ಕಬಾಡಿ, ಡಾ. ಮಲ್ಲಿಕಾಜರ್ುನ ತಿಮ್ಮಾಪೂರ, ಡಾ. ಸುನಿತಾ ಮುಳಗುಂದ, ಡಾ. ಗೋಪಾಲಕೃಷ್ಣ ಹುಯಿಲಗೋಳ, ಡಾ.ಸುನೀಲ ಮುಳಗುಂದ, ಡಾ.ಹನಮಂತಗೌಡ ಪಾಟೀಲ, ಡಾ.ಜಯಪ್ರಕಾಶ ಎಚ್ ಅವರಿಗೆ ಸನ್ಮಾನಿಸಲಾಯಿತು.
ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹಾಗೂ ಓಣಿಯ ಹಿರಿಯರಾದ ಎಚ್. ವಾಯ್. ದೇಸಾಯಿಗೌಡರ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ದತ್ತಪ್ರಸನ್ನ ಪಾಟೀಲ ನಿರೂಪಿಸಿದರು. ರಾಜು ಖಾನಾಪೂರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಹಾಳದಿಬ್ಬ ವಿವಿಧೊದ್ದೇಶಗಳ ಸೇವಾ ಸಮಿತಿ ಅಧ್ಯಕ್ಷ ಬಸಂತಕುಮಾರ ಮಂದಾಲಿ, ಉಪಾಧ್ಯಕ್ಷ ದೀಪಕ ನಾಕೋಡ, ಕಾರ್ಯದಶರ್ಿ ಗೋಪಾಲ ನಾಕೋಡ್, ಸಹ ಕಾರ್ಯದಶರ್ಿ ಅಶೋಕ ಮಂದಾಲಿ, ಖಜಾಂಚಿ ಪರಶುರಾಮ ಆಲೂರ, ಓಣಿಯ ಹಿರಿಯರಾದ ಈರಣ್ಣ ಖಾನಾಪೂರ, ಈಶ್ವರಸಾ ಮೇರವಾಡೆ, ಬಸಪ್ಪ ಕಲಬಂಡಿ, ರಮೇಶ ಮಂದಾಲಿ, ಸುರೇಶ ಗಾಳಪ್ಪನವರ, ಶಂಕ್ರಣ್ಣ ಗಡಾದ, ರುದ್ರಪ್ಪ ಕಲಬಂಡಿ, ಸುನೀಲ ಸಂಕಣ್ಣವರ, ಆನಂದ ಸಿದ್ಲಿಂಗ, ಯಲ್ಲನಗೌಡ ದೇಸಾಯಿ, ಶ್ರೀನಿವಾಸ ಹುಯಿಲಗೋಳ, ವೀರೇಶ ಮೆಣಸಗಿ, ಉಪೇಂದ್ರ ಹುಯಿಲಗೋಳ, ಸುನೀಲ ಸಂಕಣ್ಣವರ, ಪ್ರಕಾಶ ಅರಸಿದ್ದಿ, ಸಾಗರ ಹುಯಿಲಗೋಳ, ಮಹೇಶ ನರೇಗಲ್ಲ, ವಿನಾಯಕ ಕಲಬಂಡಿ, ಸಂತೋಷ ಹುಯಿಲಗೋಳ, ವಿನಾಯಕ ಅರಸಿದ್ದಿ, ಮನೋಜ ಪಾಟೀಲ, ರಾಕೇಶ ನವಲಗುಂದ, ರಕ್ಷಿತ ನವಲಗುಂದ, ರಾಜು ಗಾಣಿಗೇರ, ಈಶ್ವರ ಕಾಟವಾ, ಮುತ್ತಣ್ಣ ಭರಡಿ, ಮಹೇಶ ಶಾಬಾದಿಮಠ, ಬಸವರಾಜ ಶಾಬಾದಿಮಠ, ಪಾರ್ವತಿ ಶಾಬಾದಿಮಠ, ಮಂಗಳಾ ಶಾಬಾದಿಮಠ, ನಗರಸಭೆ ಮಾಜಿ ಅಧ್ಯಕ್ಷೆ ರುದ್ರಮ್ಮ ಕೆರಕಲಮಟ್ಟಿ, ಪ್ರಶಾಂತ ಮುಂಡರಗಿ, ಪರಪ್ಪ ಕಮತರ, ದಾವಲಸಾಬ ಈಟಿ, ಸುರೇಶ ಕಲಬುಗರ್ಿ, ಅಬ್ದುಲ್ರೆಹಮಾನ ಹುಯಿಲಗೋಳ, ಅಬ್ದುಲ್ಮುನಾಫ ಮುಲ್ಲಾ, ಚಾಂದಸಾಬ ಕೊಟ್ಟೂರ ಸೇರಿ ಓಣಿಯ ಹಿರಿಯರು, ಯುವಕರು ಪಾಲ್ಗೊಂಡಿದ್ದರು.