ಹೊನ್ನಾಳಿ : ಅವಳಿ ತಾಲೂಕಿನ ಪ್ರತಿಯೊಬ್ಬರಿಗೂ ಲಸಿಕೆ ಸಿಗಲಿದ್ದು, ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಂಡು ಆರೋಗ್ಯದಿಂದ ಇರುವಂತೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು.
ತಾಲೂಕಿನ ಅರಬಗಟ್ಟೆ,ಸೊರಟೂರು,ದಾನಿಹಳ್ಳಿ,ಮಾದನಬಾವಿ,ಅರೇಹಳ್ಳಿ,ದಿಡಗೂರು ಎಕೆ ಕಾಲೋನಿ, ಗೋವಿನಕೋವಿ,ಕುಂದೂರು,ಕುಂಬಳೂರು,ಚಿಕ್ಕಹಾಲಿವಾಣ, ಚಿಕ್ಕಹಾಲಿವಾಣ ಬಡಾವಣೆ,ತಿಮ್ಲಾಪುರ ಗ್ರಾಮಗಳು ಸೇರಿದಂತೆ ಅಂಬೇಡ್ಕರ್ ಭವನದಲ್ಲಿನ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ ಲಸಿಕೆ ಬಗ್ಗೆ ಮಾಹಿತಿ ಪಡೆದು, ಲಸಿಕೆ ಬಗ್ಗೆ ಜಾಗೃತಿ ಮೂಡಿಸಿ ಮಾತನಾಡಿದರು.
ಅವಳಿ ತಾಲೂಕಿನಾಧ್ಯಂತ ಲಸಿಕೋತ್ಸವ ಹಮ್ಮಿಕೊಂಡಿದ್ದು, ಪ್ರತಿಯೊಬ್ಬರೂ ಲಸಿಕೆ ಕರೆ ನೀಡಿದ ಶಾಸಕರು, ಲಸಿಕೆ ಹಾಕಿಕೊಳ್ಳುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗಲಿದ್ದು, ಲಸಿಕೆ ಬಗ್ಗೆ ಯಾರೂ ಕೂಡ ಆಲಸ್ಯ ಮಾಡದೇ ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳುವಂತೆ ಸಲಹೆ ನೀಡಿದ ಶಾಸಕರು, ಅವಳಿ ತಾಲೂಕಿ ಪ್ರತಿಯೊಬ್ಬರಿಗೂ ಲಸಿಕೆ ಸಿಗಲಿದ್ದು, ಎಲ್ಲರೂ ಕೊರೊನಾ ಪರೀಕ್ಷೆ ಮಾಡಿಸಿಕೊಂಡು ಲಸಿಕೆ ಹಾಕಿಸಿಕೊಳ್ಳುವಂತೆ ಕಿವಿ ಮಾತು ಹೇಳಿದರು.
ಕೊರೊನಾ ಪರೀಕ್ಷೆ ಮಾಡಿಸಿಕೊಂಡು ತಮಗೆ ಎಲ್ಲಿ ಪಾಸಿಟಿವ್ ಬರುತ್ತದೋ ಎಂದು ಹೆದರಿ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಲು ಗ್ರಾಮೀಣ ಭಾಗದಲ್ಲಿ ಜನರು ಮುಂದೆ ಬರುತ್ತಿಲ್ಲಾ ಎಂದ ಶಾಸಕರು ಭಯ ಬಿಟ್ಟು ಎಲ್ಲರೂ ಕೊರೊನಾ ಪರೀಕ್ಷೆ ಮಾಡಿಸಿಕೊಂಡು ಲಸಿಕೆ ಹಾಕಿಸಿಕೊಳ್ಳಿ ಎಂದು ಸಲಹೆ ನೀಡಿದರು.
ನಾಳೆಯಿಂದ ಮುಖ್ಯಮಂತ್ರಿಗಳು ಅನ್‍ಲಾಕ್ ಘೋಷಣೆ ಮಾಡಿದ್ದು ಜನರು ಅನ್‍ಲಾಕ್ ಆಯಿತೆಂದು ಮೈ ಮರೆಯದೇ ಎಚ್ಚರಿಕೆಯಿಂದ ಇರುವಂತೆ ತಿಳಿಸಿದ ಶಾಸಕರು, ಸಾಮಾಜಿಕ ಅಂತರ ಕಾಪಾಡಿಕೊಂಡು, ಮಾಸ್ಕ್‍ಯನ್ನು ಪ್ರತಿಯೊಬ್ಬರೂ ಹಾಕಿಕೊಳ್ಳುವ ಮೂಲಕ ಕೊರೊನಾದಿಂದ ದೂರ ಉಳಿಯುವಂತೆ ಸಲಹೆ ನೀಡಿದರು.
ಕೊರೊನಾ ಎರಡನೇ ಅಲೆ ಸಾಕಷ್ಟು ಸಾವು ನೋವು ಉಂಟು ಮಾಡಿತ್ತಲ್ಲದೇ, ಅವಳಿ ತಾಲೂಕಿನಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿತ್ತು. ಹಗಲು ರಾತ್ರಿ ಎನ್ನದೇ ನಾನು ಹಾಗೂ ಅಧಿಕಾರಿಗಳ ತಂಡ ಕೆಲಸ ಮಾಡಿದ ಪರಿಣಾಮ ಇದೀಗ ಇದೀಗ ಅವಳಿ ತಾಲೂಕಿನಲ್ಲಿ ಸೋಂಕಿನ ಪ್ರಮಾಣ ಕಡಿಮೆಯಾಗಿದೆ ಎಂದರು.
ಇದೀಗ ಮೂರನೇ ಅಲೆ ಬರುತ್ತದೆಂದು ಅಧಿಕಾರಿಗಳು ಹೇಳುತ್ತಿದ್ದು ಈಗಾಗಲೇ ಮೂರನೇ ಅಲೆಗೆ ಸಖಲ ರೀತಿಯಲ್ಲಿ ಸಿದ್ದತೆ ಮಾಡಿಕೊಂಡಿದ್ದರೂ ಕೂಡ ಮೂರನೇ ಅಲೆ ಬರಬಾರದೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆಂದರು.
ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನ 20 ಕ್ಕೂ ಹೆಚ್ಚು ಹಳ್ಳಿಗಳಿಗೆ 2,800 ಲಸಿಕೆಗಳನ್ನು ವಿತರಿಸಲಾಗಿದ್ದು 45 ವರ್ಷ ಮೇಲ್ಪಟ್ಟವರಿಗೆ ಎರಡನೇ ಡೋಸ್ ಲಸಿಕೆ ಹಾಕುತ್ತಿದ್ದು, ಲಸಿಕೆ ಉಳಿದರೆ ಮೊದಲನೇ ಡೋಸ್ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಲು ಪಣ ತೊಟ್ಟಿದ್ದು ಅದಕ್ಕಾಗಿ ಹಗಲಿರುಗಳು ಕೆಲಸ ಮಾಡುತ್ತಿದ್ದಾರೆ. ಅವರ ನೇತೃತ್ವದಲ್ಲಿ ನಾನೂ ಕೂಡ ಕೆಲಸ ಮಾಡುತ್ತಿದ್ದು ಅವಳಿ ತಾಲೂಕಿನ ಹಂತ ಹಂತವಾಗಿ ಲಸಿಕೆ ತರಿಸುತ್ತಿದ್ದು ಪ್ರತಿಯೊಬ್ಬರಿಗೂ ಲಸಿಕೆ ಕೊಡಿಸುವ ಕೆಲಸ ಮಾಡುತ್ತಿದ್ದೇನೆ ಎಂದರು.
ನನಗೆ ಅವಳಿ ತಾಲೂಕಿನ ಜನರ ಆರೋಗ್ಯ ಮುಖ್ಯ ಅದಕ್ಕಾಗಿ ನಾನು ಅವಳಿ ತಾಲೂಕಿನಾಧ್ಯಂತ ಓಡಾಡಿ ಜನರಿಗೆ ಕೊರೊನಾ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದು ಪ್ರತಿಯೊಬ್ಬರೂ ಕೂಡ ನಮ್ಮೊಂದಿಗೆ ಕೈ ಜೋಡಿಸುವ ಮೂಲಕ ಮೂರನೇ ಅಲೆ ಬಾರದಂತೆ ನೋಡಿಕೊಳ್ಳ ಬೇಕೆಂದರು.
ಈ ಸಂದರ್ಭ ಸೊರಟೂರು ಗ್ರಾಮ ಪಂಚಾಯಿತಿ ಸದಸ್ಯರು, ಆಶಾ ಕಾರ್ಯಕರ್ತೆಯರು, ದಾದಿಯರಿದ್ದರು.