ದೇಶದಲ್ಲಿ ಪೆಟ್ರೋಲ,ಡೀಸೆಲ್,ಅಡುಗೆ ಎಣ್ಣೆಯ ಬೆಲೆಯ ಏರಿಕೆಯಿಂದ ಜನಜೀವನ ಸಂಕಷ್ಟಕ್ಕೆ ಸಿಲುಕಿರುವ ಬೆನ್ನಲ್ಲೇ ಅಡುಗೆಯ ಸಿಲಿಂಡರಿನ ಬೇಲೆ ಹೆಚ್ಚಿಸಿರುವ ಕೇಂದ್ರ ಸರ್ಕಾರದ ಜನವಿರೋಧಿ ಕ್ರಮ ನಿಜವಾಗಿಯೂ ಖಂಡನೀಯವಾದದ್ದು.ಇದನ್ನು ಹೆಚ್.ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯು ತೀವ್ರವಾಗಿ ಖಂಡಿಸುತ್ತದೆ. ದೇಶದ ಜನತೆ ಕೊರೋಣಾ ಮಹಾಮಾರಿಯಿಂದ ಉದ್ಯೋಗವಿಲ್ಲದೆ ಕೈಯಲ್ಲಿ ನೈಯಾಪೈಸೆಯೂ ಇಲ್ಲದೆ ಜನರು ಸಂಕಷ್ಟಕ್ಕೆ ಸಿಲುಕಿ ವಿಲವಿಲ ಒದ್ದಾಡುತ್ತಿದ್ದರೂ ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಆಡಳಿತಾರೂಢ ಪಕ್ಷದ ಜನಪ್ರತಿನಿಧಿಗಳು ಕೈಕಟ್ಟಿ ಕುಳಿತುಕೊಂಡಿರುವುದು ಬಡ ಜನತೆಯಲ್ಲಿ ಆಕ್ರೋಶಉಂಟುಮಾಡಿದೆ.ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಬಡಜನರು ಬದುಕು ಸಾಗಿಸುವುದು ದುಸ್ತರವಾಗಿದೆ ಇಂತಹ ಸಮಯದಲ್ಲಿ ಬೆಲೆ ಏರಿಕೆ ಬೇಕೆ ಎಂದು ಕರವೇ ಬಾಗಲಕೋಟೆ ಜಿಲ್ಲಾಘಟಕ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತದೆ.ಸಧ್ಯ ರಾಜ್ಯದಲ್ಲಿರುವ ಆಡಳಿತಾರೂಢ ಪಕ್ಷ ಈ ಹಿಂದೆ ಕೇಂದ್ರದಲ್ಲಿ ವಿರೋಧ ಪಕ್ಷ ಅಧಿಕಾರದಲ್ಲಿದ್ದಾಗ ಬೆಲೆ ಏರಿಕೆ ವಿರೋಧಿಸಿ ಬೀದಿಗಿಳಿದು ಹೋರಾಟ ಮಾಡುತ್ತಿದ್ದವರು ಈಗ ತೈಲ ಬೆಲೆ ನೂರರ ಗಡಿದಾಟಿ ಗಗನಕ್ಕೆರಿದರೂ ಮೂಖ ಪ್ರೇಕ್ಷಕರಾಗಿದ್ದಾರೆ.ಬಡ ಜನತೆಯ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದೆ ತಮ್ಮ ಐಷಾರಾಮಿ ಜೀವನದಲ್ಲಿಯೇ ಮಗ್ನರಾಗಿದ್ದಾರೆ.ಪಕ್ಕದ ದೇಶ ನೇಪಾಳದಲ್ಲಿ ತೈಲ ಬೆಲೆ ಕಡಿಮೆ ಇದ್ದ ಕಾರಣ ಭಾರತೀಯರು ತೈಲ ತುಂಬಿಸಿಕೊಳ್ಳಲು ಟ್ಯಾಂಕರ್ ಮೂಲಕ ನೇಪಾಳದ ಕಡೆ ಹೋಗುತ್ತಿದ್ದಾರೆ.ದಿನನಿತ್ಯ ಬಳಸುವ ಅಡುಗೆಯ ಸಿಲಿಂಡರಿನ ಸಬ್ಸಿಡಿ ಕಡಿತಗೊಳಿಸಿರುವ ಕ್ರಮ ಸ್ವಾಗತಾರ್ಹವಲ್ಲ, ಸರ್ಕಾರ ಈ ಹಿಂದೆ ನೀಡುತ್ತಿರುವ ಸಿಲಿಂಡರಿನ ಸಬ್ಸಿಡಿ ಹಣವನ್ನು ಮರಳಿ ನೀಡಬೇಕು. ಕೂಡಲೇ ಎಲ್ಲಾ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕೂಡಿಕೊಂಡು ದೇಶದ ಬಡವರ ಹಿತದೃಷ್ಟಿಯಿಂದ ತೈಲಬೆಲೆ ಸೇರಿದಂತೆ ಇನ್ನಿತರ ದಿನನಿತ್ಯದ ಗೃಹ ಬಳಕೆಯ ಅಗತ್ಯ ವಸ್ತುಗಳ ಬೆಲೆ ಕಡಿಮೆ ಮಾಡಬೇಕೆಂದು ಹೆಚ್.ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಬಾಗಲಕೋಟೆ ಜಿಲ್ಲಾಘಟಕದಿಂದ ಸರ್ಕಾರವನ್ನು ಒತ್ತಾಯ ಪಡಿಸುತ್ತದೆ.
ಗೌರವಾದರಗಳೊಂದಿಗೆ
ಬಿ.ಎಮ್.ಪಾಟೀಲ ಜಿಲ್ಲಾಧ್ಯಕ್ಷರು ಕರವೇ ಬಾಗಲಕೋಟೆ ಜಿಲ್ಲಾಘಟಕ