ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಇಂದು ನಗರದ ಶ್ರೀ ಪಂಚಾಕ್ಷರ ಗವಾಯಿಗಳ ಸಂಗೀತ ಕೇಂದ್ರದ ಸಮುದಾಯ ಭವನದಲ್ಲಿ ರಾಜ್ಯ ಯುವ ಕಾಂಗ್ರೆಸ್ ನ ನಾಯಕರು, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ರವರ ನೇತೃತ್ವದಲ್ಲಿ 200 ಹೆಚ್ಚು ಜನ ದಮನಿತ ಮಹಿಳೆಯರಿಗೆ,(ಶೋಷಿತ ಮಹಿಳೆಯರು) ರೇಷನ್ ಕಿಟ್ ವಿತರಿಸಲಾಯಿತು

ನಂತರ ಮಾತನಾಡಿದ ಮಿಥುನ್ ರೈ ರವರು ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ನ ಸನ್ಮಿತ್ರರು ನಮ್ಮ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ನಾಯಕರ ಕರೆಯಂತೆ ಪಕ್ಷದ ಸೇನಾನಿಗಳಾಗಿ ಇಂತಹ ವಿಪತ್ತು ಸಂಕಷ್ಟ ಸಂದರ್ಭದಲ್ಲಿ ತಮ್ಮ ಜೀವದ ಹಂಗು ತೊರೆದು ಲಾಕ್ ಡೌನ್ ಘೋಷಣೆಯಾದ ದಿನದಿಂದ ಸಂಪೂರ್ಣವಾಗಿ ಮುಗಿಯುವ ದಿನದವರೆಗೂ ಹಸಿದವರಿಗೆ ಅನ್ನ ,ಹಾಗೂ ಸಂಕಷ್ಟದಲ್ಲಿರುವ ಎಲ್ಲಾ ಸ್ತರದ ವರ್ಗದ ಶ್ರೀಸಾಮಾನ್ಯನಿಗೆ ನೆರವಾಗುವ ಕೆಲಸವನ್ನು ಮಾಡಿದ್ದು ಅದರ ಜೊತೆಗೆ ಎಚ್ಐವಿ ಸೋಂಕಿತರಿಗೆ ರೇಷನ್ ಕಿಟ್ ವಿತರಣೆ ಹಾಗೂ ಇಂದು ವಿಶೇಷವಾಗಿ ಸಮಾಜದಲ್ಲಿ ದಮನಿತ ಶೋಷಿತ ಮಹಿಳೆಯರನ್ನು ಗುರುತಿಸಿ 200ಕ್ಕೂ ಹೆಚ್ಚು ಜನಕ್ಕೆ ರೇಷನ್ ಕಿಟ್ ನೀಡುತ್ತಿರುವುದು ಪುಣ್ಯದ ಕೆಲಸ. ರಾಜ್ಯದಲ್ಲೆ ಮೊದಲ ಕಾರ್ಯಕ್ರಮ ಇದಾಗಿದ್ದು ಯುವ ಕಾಂಗ್ರೆಸ್ ಕಾರ್ಯಕರ್ತರು ಮಾಡುತ್ತಿರುವ ಈ ಸಮಾಜಮುಖಿ ಕಾರ್ಯಗಳು ಆ ಭಗವಂತ ಮೆಚ್ಚುವಂತದ್ದು
ಇಂತಹ ಮಹತ್ತರ ಕೆಲಸ ಮಾಡುತ್ತಿರುವ ಹಾಗೂ ಪಕ್ಷದಲ್ಲಿ ಸೇನಾನಿಗಳಾಗಿ ಕೆಲಸ ಮಾಡುತ್ತಿರುವ ಯುವ ಕಾಂಗ್ರೆಸ್ ಕಾರ್ಯಕರ್ತರು ಮುಂದಿನ

ದಿನಮಾನಗಳಲ್ಲಿ ಉತ್ತಮ ನಾಯಕರಾಗಿ ಬೆಳೆಯಲಿ ಎಂದು ಆಶಿಸಿದರು

ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಎಚ್ಎಸ್ ಸುಂದರೇಶ್ , ಮಾಜಿ ಶಾಸಕರಾದ ಕೆಬಿ ಪ್ರಸನ್ನ ಕುಮಾರ್ ಪದವೀಧರ ಕ್ಷೇತ್ರದ ಅಭ್ಯರ್ಥಿ ಎಸ್.ಪಿ. ದಿನೇಶ್ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ ಪ್ರವೀಣ್ ಕುಮಾರ್ , ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಪಿ. ಗಿರೀಶ್ , ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಕೆ ರಂಗನಾಥ್ ,ಮಹಾನಗರ ಪಾಲಿಕೆ ಸದಸ್ಯರಾದ ಹೆಚ್ .ಸಿ. ಯೋಗೀಶ್ ,ರೇಖಾ ರಂಗನಾಥ್ , ಶಿಕಾರಿಪುರ ಪುರಸಭಾ ಸದಸ್ಯ ಮಯೂರ್ ದರ್ಶನ್ ಉಳ್ಳಿ , ಭದ್ರಾವತಿ ನಗರಸಭಾ ಸದಸ್ಯ ಶ್ರೇಯಸ್ (ಚಿಟ್ಟೆ), ಯುವ ಕಾಂಗ್ರೆಸ್ ನ ಉತ್ತರ ಬ್ಲಾಕ್ ಅಧ್ಯಕ್ಷ ಬಿ ಲೋಕೇಶ್ ದಕ್ಷಿಣ ಬ್ಲಾಕ್ ನ ಎಸ್ ಕುಮಾರೇಶ್ , ಗ್ರಾಮಾಂತರ ಅಧ್ಯಕ್ಷ ಇಟಿ ನಿತಿನ್ ಭದ್ರಾವತಿ ನಗರ ಅಧ್ಯಕ್ಷ ಜಿ ವಿನೋದ್ ಕುಮಾರ್, ಭದ್ರಾವತಿ ಗ್ರಾಮಾಂತರ ಅಧ್ಯಕ್ಷ ಅಫ್ತಾಬ್ ಅಹ್ಮದ್, ರಾಜ್ಯ ಕಾಂಗ್ರೆಸ್ನ ಕಾರ್ಯದರ್ಶಿಗಳಾದ ಆರ್ ಕಿರಣ್ ಟಿ.ವಿ. ರಂಜಿತ್ ಜಿಲ್ಲಾ ಯುವ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಉಮೇಶ್ ಬಾಳೆಗುಂಡಿ , ಎಂ ರಾಹುಲ್, ಪುಷ್ಪಕ್ ಕುಮಾರ್ , ಅರುಣ್ ನವುಲೆ , ಗಗನ್ ಗೌಡ, ವೆಂಕಟೇಶ್ ಕಲ್ಲೂರು, ವಿನಯ್ , ಇರ್ಫಾನ್, ಪವನ್ ರಾಕೇಶ್, ರಾಹುಲ್ ಸೀಗೆಹಟ್ಟಿ , ವರುಣ್, ಕೇಶವ ಭದ್ರಾವತಿ ಇತರರು ಇದ್ದರು.

Leave a Reply

Your email address will not be published. Required fields are marked *