ವಿವೇಕಾನಂದರು ಇಂದಿಗೂ
ನಮ್ಮ ಮಕ್ಕಳಿಗೆ ಅಚ್ಚು
ಮೆಚ್ಚು, ಅವರ ವೇಷ
ಭೋಷಣ ನಮ್ಮ ಮಕ್ಕಳಿಗೆ
ಪ್ರಭಾವ ಶಾಲಿ, ಅವರ ಸತ್ಯ,
ದಲಿತರ ಬಗ್ಗೆ ಇದ್ದ ಕಳಕಳಿ,
ನಮಗೆ ಪಾಠ. ಬಡವರ
ಉದ್ಧಾರಕ್ಕೆ ಅವರು
ಶ್ರಮಿಸಿದರು, ಅದು ಅವರ
ಧರ್ಮದ ಮೊದಲ
ತತ್ತ್ವವಾಗಿತ್ತು, ಮಹಾತ್ಮಾ
ಗಾಂಧೀಜಿಯವರಿಗೆ ಸಾವಿರ ಪಟ್ಟು
ದೇಶಪ್ರೇಮ ಹೆಚ್ಚಿಸಿದ ವ್ಯಕ್ತಿ.
ಅಂತವರ ಪುಣ್ಯ ಸ್ಮರಣೆ
ನಮ್ಮ ಭಾಗ್ಯವೆನ್ನಬೇಕು

ಎಂದು ಕರ್ನಾಟಕ ಜ್ಞಾನ ವಿಜ್ಞಾನ
ಸಮಿತಿ ಜಿಲ್ಲಾಧ್ಯಕ್ಷ ಡಾ. ಎಚ್. ಕೆ. ಎಸ್.
ಸ್ವಾಮಿ ತಿಳಿಸಿದರು.
ಅವರು ನಗರದ ತರಳಬಾಳು
ನಗರದ ಒಂದನೇ
ಮುಖ್ಯರಸ್ತೆಯಲ್ಲಿ ಕರ್ನಾಟಕ
ಜ್ಞಾನ ವಿಜ್ಞಾನ ಸಮಿತಿ ಮತ್ತು
ಮಲ್ಲನಕಟ್ಟೆ ಗ್ರಾಮದ
ಸಹಯೋಗದೊಂದಿಗೆ ಆಯೋಜಿಸಿದ್ದ
“ವಿವೇಕಾನಂದರ 119ನೇ
ಪುಣ್ಯಸ್ಮರಣೆ”
ಕಾರ್ಯಕ್ರಮದಲ್ಲಿ
ಮಾತನಾಡಿದರು.
ವಿವೇಕಾನಂದರೇ ಸಾಮಾಜಿಕ
ಸಂಕಟ, ಸಿಟ್ಟು, ಸ್ಫೋಟ,
ಸ್ಪಷ್ಟತೆಗಳ
ರೂಪಕವಾಗಿದ್ದರು. ಅವರ
ಆಲೋಚನೆಯಲ್ಲಿ
ಗೊಂದಲಗಳಿರಲಿಲ್ಲ,
ಕೆಲವೊಮ್ಮೆ

ವೈರುಧ್ಯಗಳಂತೆ
ಕಂಡರೂ, ಅದು ಸಾಂದರ್ಭಿಕ
ಪ್ರತಿಕ್ರಿಯೆಗಳ
ಫಲವಾಗಿತ್ತು. ಅವರು ಒಟ್ಟಿಗೆ
ನೋಡಿದ ಸ್ಪಷ್ಟ
ನೋಟವಾಗಿತ್ತು. ದೈಹಿಕ
ಹಸಿವನ್ನು ಹಿಂಗಿಸುವುದು ಅವರ
ಮೊದಲ ಆದ್ಯತೆಯಾಗಿತ್ತು,
ಅನಂತರ ಆತ್ಮದ ಹಸಿವು,
ವೇದಾಂತದ ಹಸಿವು. ಅವರು
ಜಾತಿವಾದ ಮತ್ತು
ಕೋಮುವಾದಕ್ಕೆ
ಪ್ರತಿರೋಧ ಒಡ್ಡಿದರು
ಎಂದರು.

ಅದ್ದರಿಂದ ಅವರು ಇಂದಿನ
ಸನ್ನಿವೇಶದಲ್ಲಿ ಹೆಚ್ಚು
ಪ್ರಸ್ತುತರೂ,
ವಿವೇಕಾನಂದರಿಗೆ ಬಡಜನರ

ಹೊಟ್ಟೆ ಹಸಿವನ್ನು
ಹಿಂಗಿಸುವುದು ಮೊದಲ
ಆದ್ಯತೆಯಾಗಿತ್ತು, ಅನಂತರ
ಹಿಂದುಳಿದ ಹಾಗೂ ದಲಿತ
ಜಾತಿಗಳ ಬಗ್ಗೆ ಅವರಿಗೆ ಸಾಮಾಜಿಕ
ಕಳಕಳಿ ಇತ್ತು.
ಕೋಮುವಾದದ ವಿಷಯಕ್ಕೆ
ಬಂದರೆ ವಿವೇಕಾನಂದರು,
ಏಕಸಂಸ್ಕೃತಿ ಮತ್ತು ಏಕ
ಧರ್ಮ ವಿಸ್ತರಣೆಗಳ
ಪರವಾಗಿರಲಿಲ್ಲ, ಅದು ಹಿಂದು
ಧರ್ಮ ಇರಲಿ, ಕ್ರೈಸ್ತ
ಧರ್ಮವಿರಲಿ, ಇಸ್ಲಾಂ
ಧರ್ಮವಿರಲಿ, ಏಕಧರ್ಮ
ಶ್ರೇಷ್ಠತೆ ಮತ್ತು
ವಿಸ್ತರಣೆಯು ಜೀವ
ಜೀವವಿರೋಧವೆಂದು ಅವರು
ಭಾವಿಸಿದ್ದರು ಎಂದರು.

ವಿವೇಕನಂದರು ಚಿಕಾಗೋದ
ಸರ್ವಧರ್ಮ ಸಮ್ಮೇಳನದಲ್ಲಿ
ಮಾತನಾಡುತ್ತಾ,
ಪ್ರತಿಯೊಬ್ಬರೂ ಒಂದೇ
ಮಾರ್ಗವನ್ನು ಅನುಸರಿಸುವ
ದುರ್ದಿನ ಪ್ರಪಂಚಕ್ಕೆ
ಬಾರದಿರಲಿ, ಈಗ ಧರ್ಮ ಮತ್ತು
ಆಧ್ಯಾತ್ಮಿಕ ಭಾವನೆ
ನಾಶವಾಗುವುದು ವೈವಿಧ್ಯವೇ
ಜೀವನದ ರಹಸ್ಯ, ಎಲ್ಲಾ
ಧರ್ಮಗಳಿಗೂ
ಗೌರವವನ್ನು ತೋರಬೇಕು
ಎಂದರು. ಅವರನ್ನ ನಾವು ದಿನ
ನಿತ್ಯ ನೆನಪಿಸಿಕೊಂಡು ನಮ್ಮ
ಜೀವನದ ಸಮಸ್ಯೆಗಳನ್ನ
ಬಗೆಹರಿಸಿಕೊಳ್ಳಬೇಕು
ಎಂದರು.
ಕಾರ್ಯಕ್ರಮದಲ್ಲಿ
ವಿವೇಕನಂದರ ಭಾವಚಿತ್ರವನ್ನ

ಬರೆದು ಪ್ರದರ್ಶಿಸಿ, ಅವರ
ವೇಷಭೂಷಣ ಧರಿಸಿ ಅವರನ್ನ
ಸ್ಮರಿಸಿಕೊಂಡರು.
ಕಾರ್ಯಕ್ರಮದಲ್ಲಿ
ವಿದ್ಯಾರ್ಥಿಗಳಾದ ಶ್ರೀನಿವಾಸ, ಅಜಯ್,
ಲಕ್ಷ್ಮಿ, ಹೆಚ್.ಎಸ್.ರಚನ, ಹೆಚ್.ಎಸ್.
ಪ್ರೇರಣ, ಪ್ರಕಾಶ್ ಹಾಜರಿದ್ದರು.

Leave a Reply

Your email address will not be published. Required fields are marked *