ತರಬೇತಿ
ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ
ಇಲಾಖೆಯ ವತಿಯಿಂದ 3 ದಿನಗಳ ಕಾಲ ಕುರಿ ಮತ್ತು ಮೇಕೆ
ಸಾಕಾಣಿಕೆ ತರಬೇತಿ ಕಾರ್ಯಕ್ರಮವನ್ನು ಆನ್ಲೈನ್
ಮೂಲಕ ಹಮ್ಮಿಕೊಳ್ಳಲಾಗಿದೆ.
ದಾವಣಗೆರೆಯ ಪಿ.ಬಿ ರಸ್ತೆಯ ಅರುಣ ಚಿತ್ರಮಂದಿರದ
ಎದುರಿನ ಪಶುಆಸ್ಪತ್ರೆ ಆವರಣದಲ್ಲಿರುವ ಪಶುವೈದ್ಯಕೀಯ
ಸಹಾಯಕರ ತರಬೇತಿ ಕೇಂದ್ರದಲ್ಲಿ ಜು.14 ರಿಂದ 16ರ
ವರೆಗೆ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 2 ಗಂಟೆವರೆಗೆ
ತರಬೇತಿಯನ್ನು ಆರಂಭಿಸಲಾಗಿದ್ದು, ಆಸಕ್ತಿಯುಳ್ಳ
ರೈತರು, ಮಹಿಳೆಯರು, ನಿರುದ್ಯೋಗಿ ಯುವಕ ಅಥವಾ
ಯುವತಿಯರು ಇದರ ಅನುಕೂಲ ಪಡೆಯಬಹುದಾಗಿದೆ. ಈ
ತರಬೇತಿ ಕಾರ್ಯಕ್ರಮಕ್ಕೆ ಯಾವುದೇ ಪ್ರೋತ್ಸಾಹಧನ
ಮತ್ತು ಭತ್ಯೆಗಳನ್ನು ನೀಡಲಾಗುವುದಿಲ್ಲ.
ತರಬೇತಿಗೆ ಹಾಜರಾಗುವ ರೈತರು ಆಧಾರ್ ಕಾರ್ಡ್
ಜೆರಾಕ್ಸ್, 2 ಪಾಸ್ ಪೋರ್ಟ್ ಸೈಜ್ ಪೋಟೋ ಮತ್ತು ವ್ಯಾಟ್ಸ್ಆಫ್
ಇರುವ ಮೊಬೈಲ್ ಸಂಖ್ಯೆ ಮತ್ತು ಪರಿಶಿಷ್ಟಜಾತಿ ಮತ್ತು
ಪರಿಶಷ್ಟ ಪಂಗಡದವರು ಜಾತಿ ಪ್ರಮಾಣಪತ್ರದ ಜೆರಾಕ್ಸ್
ಪ್ರತಿಯನ್ನು ಜು.9 ರ ಸಂಜೆ 5 ಗಂಟೆ ಒಳಗೆ ಕಛೇರಿಗೆ
ಸಲ್ಲಿಬೇಕು.
ಹೆಚ್ಚಿನ ವಿವರಕ್ಕಾಗಿ ಪಶುವೈದ್ಯಕೀಯ ಸಹಾಯಕರ
ತರಬೇತಿ ಕೇಂದ್ರ, ದಾವಣಗೆರೆ ಇವರ ದೂರವಾಣಿ ಸಂಖ್ಯೆ:
08192-233787 ಗೆ ಸಂಪರ್ಕಿಸಿ ಎಂದು ಪಶುವೈದ್ಯಕೀಯ
ಸಹಾಯಕರ ತರಬೇತಿ ಕೇಂದ್ರದ ಮುಖ್ಯ
ಪಶುವೈದ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.