ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯ್ತಿ ಚುನಾವಣೆಯನ್ನು ಸೋಲಿನ ಭೀತಿಯಿಂದ ಮುಂದೂಡುವ ಹುನ್ನಾರದಲ್ಲಿ ಮೀಸಲಾತಿಯನ್ನು ಬಹುತೇಕ ವ್ಯತ್ಯಾಸ ಮಾಡುವ ಮೂಲಕ 1995 ರಲ್ಲಿ ತಂದ ಕಾಯಿದೆಯನ್ನು ಉಲ್ಲಂಘನೆ ಮಾಡಲಾಗಿದೆ. ರೊಟೇಶನ್ ಸಿಸ್ಟಮ್ ಸಂಪೂರ್ಣವಾಗಿ ತಿರಸ್ಕರಿಸಲಾಗಿದೆ. ಜನಪ್ರತಿನಿಧಿಗಳು ಮೀಸಲಾತಿಯನ್ನು ಸರಿಪಡಿಸಿ ಬದಲಾವಣೆ ಮಾಡುವಂತೆ ಒತ್ತಾಯಿಸಿದಾಗ ಚುನಾವಣೆಯನ್ನು ಮುಂದೂಡಬಹುದೆಂದು ಸರ್ಕಾರ ನಿರ್ಧರಿಸಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಸರ್ಕಾರಕ್ಕೆ ನ್ಯಾಯಯುತವಾಗಿ ಚುನಾವಣೆ ನಡೆಸಲು ಇಷ್ಟವಿಲ್ಲದ ಕಾರಣ ಹಾಗೂ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಸರ್ಕಾರದ ಪರವಾಗಿ ಸೋಲು ಖಚಿತವೆಂದು ವರದಿ ಬಂದಿರುವ ಹಿನ್ನೆಲೆಯಲ್ಲಿ ಮೀಸಲಾತಿಯನ್ನು ಈ ರೀತಿ ವ್ಯತ್ಯಾಸ ಮಾಡಿ ಆದೇಶ ಹೊರಡಿಸಿದರೆ ಕೆಲವಾರು ತಿಂಗಳು ಚುನಾವಣೆ ಮುಂದೂಡ ಬಹುದೆಂದು ಸರ್ಕಾರದ ಲೆಕ್ಕಾಚಾರ ಇದೆ ಎಂದು ತಿಳಿದು ಬಂದಿದೆ. ಸರ್ಕಾರವು ಕೂಡಲೇ ರೊಟೇಶನ್ ಸಿಸ್ಟಮ್ ಅಳವಡಿಸಿಕೊಂಡು ಸರಿಪಡಿಸಿ ಚುನಾವಣೆ ಕೂಡಲೇ ನಡೆಸಬೇಕು. ಯಾವುದೇ ಕಾರಣದಿಂದಾಗಿ ಮುಂದೂಡ ಬಾರದೆಂದು ಜನತೆಯ ಪರವಾಗಿ ಮುಖ್ಯಮಂತ್ರಿಗಳಿಗೆ ಒತ್ತಾಯಿಸುವೆ.
ಎಂ.ಡಿ.ಲಕ್ಷ್ಮೀನಾರಾಯಣ (ಅಣ್ಣಯ್ಯ) ಮಾಜಿ ಶಾಸಕರು ತುರುವೇಕೆರೆ ಕ್ಷೇತ್ರ.
ಅಧ್ಯಕ್ಷರು- ಹಿಂದುಳಿದ ವರ್ಗಗಳ ವಿಭಾಗ ಪ್ರ.ಕಾ.ಸ. ಹಾಗೂ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟ.