ಈ ದಿನ ಮಾನ್ಯ ಜನಪ್ರಿಯ ಶಾಸಕರಾದ ಎಸ್ ರಾಮಪ್ಪ ಇವರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ (ರಿ ), ಹರಿಹರ ತಾಲೂಕು, ಹರಿಹರ ಯೋಜನಾ ಕಚೇರಿ ಯಲ್ಲಿ ಜರುಗಿದ ಲಾಭಾಂಶ ವಿತರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕಾರ್ಯಕ್ರಮದ ಉದ್ಘಾಟನೆ ಮಾಡಿ ಲಾಭಾಂಶದ ಚೆಕ್ ಗಳನ್ನು ಸಂಬಂಧಿಸಿದ ಸದಸ್ಯರುಗಳಿಗೆ ವಿತರಣೆ ಮಾಡಿದರು,
ನಂತರ ಸದರಿ ಸಂಘದ ಸದಸ್ಯರೆಲ್ಲರೂ ಸಹ ಹಣದ ಅವಶ್ಯಕತೆ ಇದ್ದಾಗ ಮಾತ್ರ ತೆಗೆದುಕೊಂಡು, ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳುವುದರ ಜೊತೆಗೆ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಿಸಲು ಸಲಹೆ ನೀಡಿದರು. ಹಾಗೂ ಲೋನ್ ತೆಗೆದುಕೊಂಡ ನಂತರ ಕಂತುಗಳನ್ನೂ ಸಹ ಸರಿಯಾದ ಸಮಯಕ್ಕೆ ಪಾವತಿಸಿ ಸಂಘದ ಬೆಳವಣಿಗೆಗೂ ಸಹ ಸಹಕರಿಸುವಂತೆ ಹಾಗೂ ಸಂಘದ ಪ್ರಧಾನ ರಾದ ಶ್ರೀ ವೀರೇಂದ್ರ ಹೆಗ್ಗಡೆ ಯವರ ಕೊಡುಗೆಯನ್ನು ಸಹ ಸ್ಮರಿಸಿದರು. ಈ ಸಮಯದಲ್ಲಿ ಸಂಘದ ಹರಿಹರ ತಾಲೂಕಿನ ಯೋಜನಾಧಿಕಾರಿ ಗಣಪತಿ ಮಾಳಂಜಿ, ತಾಲೂಕಿನ ದಂಡಧಿಕಾರಿಗಳಾದ ಶ್ರೀ ಕೆ. ಬಿ. ರಾಮಚಂದ್ರಪ್ಪ, ಹಾಗೂ ಸಂಘದ ಸದಸ್ಯರು ಹಾಜರಿದ್ದರು.