ಪ್ಯಾಕೇಜ್
ಕೋವಿಡ್-19ರ 2ನೇ ಅಲೆಯ ನಿಯಂತ್ರಣಕ್ಕಾಗಿ ಲಾಕ್‍ಡೌನ್ ಜಾರಿಗೊಳಿಸಿದ
ಪರಿಣಾಮವಾಗಿ ಆರ್ಥಿಕ ನಷ್ಟ ಅನುಭವಿಸಿದ ಅಸಂಘಟಿತ ಕಾರ್ಮಿಕ
ವರ್ಗದವರಿಗೆ 2 ಸಾವಿರ ರೂ. ಗಳ ಒಂದು ಬಾರಿಯ ನೆರವಿನ ಪ್ಯಾಕೇಜ್
ಘೋಷಿಸಿದ್ದು, ಅರ್ಜಿ ಸಲ್ಲಿಸಲು ಜು. 31 ರವರೆಗೆ ಅವಕಾಶ ಕಲ್ಪಿಸಲಾಗಿದೆ.
ಅಸಂಘಟಿತ ವಲಯದ ಕಾರ್ಮಿಕರಿಗೆ ಆರ್ಥಿಕವಾಗಿ
ನಷ್ಟವಾಗಿರುವುದನ್ನು ಗಮನಿಸಿ, 11 ವರ್ಗಗಳ ಅಸಂಘಟಿತ
ಕಾರ್ಮಿಕರಾದ ಅಗಸರು, ಕ್ಷೌರಿಕರು, ಗೃಹಕಾರ್ಮಿಕರು (ಮನೆಗೆಲಸ),
ಟೈಲರ್‍ಗಳು, ಮ್ಯೆಕ್ಯಾನಿಕ್, ಚಿಂದಿಆಯುವವರು, ಹಮಾಲರು,
ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು ಹಾಗೂ ಮಂಡಕ್ಕಿ ಭಟ್ಟಿ
ಕಾರ್ಮಿಕ ವೃತ್ತಿಯಲ್ಲಿ ತೊಡಗಿರುವ ಕಾರ್ಮಿಕರಿಗೆ ರೂ.2000/-ಗಳ
ಒಂದು ಬಾರಿಯ ನೆರವಿನ ವಿಶೇಷ ಪ್ಯಾಕೇಜ್ ಘೋಷಿಸಲಾಗಿರುತ್ತದೆ.
ನೆರವಿನ ಮೊತ್ತವನ್ನು ಪಡೆಯಲು ಅಗತ್ಯ
ದಾಖಲೆಗಳೊಂದಿಗೆ hಣಣಠಿ://sevಚಿsiಟಿಜhu.ಞಚಿಡಿಟಿಚಿಣಚಿಞಚಿ.gov.iಟಿ ಪೋರ್ಟಲ್‍ನಲ್ಲಿ
ಜು.31ರೊಳಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿರುತ್ತದೆ.
ಈ ಹಿಂದಿನ ಮಾರ್ಗಸೂಚಿಯಂತೆ ನೆರವಿನ ಮೊತ್ತವನ್ನು
ಪಡೆಯಲು ನಿಗದಿಪಡಿಸಿದ್ದ ಅಧಿಕಾರಿಗಳಿಂದ ಅಥವಾ ಪತ್ರಾಂಕಿತ
ಅಧಿಕಾರಿಗಳಿಂದ ಪಡೆದ ಉದ್ಯೋಗ ದೃಢಿಕರಣ ಪತ್ರವನ್ನು ಸಲ್ಲಿಸಲು
ತಿಳಿಸಲಾಗಿರುತ್ತದೆ. ಜು.01 ರಂದು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ
ನಡೆದ ನಡುವಳಿಯಲ್ಲಿ ಗೃಹಕಾರ್ಮಿಕರಿಗೆ (ಮನೆಗೆಲಸ)
ಸಂಬಂಧಿಸಿದಂತೆ ಅರ್ಜಿಯೊಂದಿಗೆ ಸಲ್ಲಿಸಬೇಕಾದ ಉದ್ಯೋಗ ದೃಢೀಕರಣ
ಪತ್ರದಲ್ಲಿ ಗೃಹಕಾರ್ಮಿಕರು (ಮನೆಗೆಲಸ) ವೃತ್ತಿ ನಿರ್ವಹಿಸುತ್ತಿರುವ
ಮಾಲೀಕರಿಂದ ಸಹಿ ಪಡೆಯಲು ಅವಕಾಶ ಕಲ್ಪಿಸುವಂತೆ ನಿರ್ದೇಶನ
ನೀಡಿರುತ್ತಾರೆ. ಅದರಂತೆ ಗೃಹಕಾರ್ಮಿಕರು (ಮನೆಗೆಲಸ)
ಸಂಬಂಧಿಸಿದಂತೆ ಮಾತ್ರ ನಿಗದಿಪಡಿಸಿದ ಅಧಿಕಾರಿಗಳಿಂದ ಅಥವಾ ಅವರು
ಕಾರ್ಯರ್ನಿಹಿಸುತ್ತಿರುವ ಮಾಲೀಕರಿಂದ ಸಹ ಸಹಿಮಾಡಿಸಿ ಅರ್ಜಿಯೊಂದಿಗೆ
ಅಪ್‍ಲೋಡ್ ಮಾಡಲು ಅವಕಾಶ ಕಲ್ಪಿಸಲಾಗಿರುತ್ತದೆ. ಇದಕ್ಕಾಗಿ ಪ್ರತ್ಯೇಕ
ನಮುನೆಯ ಉದ್ಯೋಗ ದೃಢೀಕರಣ ಪ್ರಮಾಣ ಪತ್ರವನ್ನು
ಹೊರಡಿಸಲಾಗಿರುತ್ತದೆ. ಅಲ್ಲದೆ ಮೊಬೈಲ್ ಸಂಖ್ಯೆ ನಮೂದಿಸುವುದನ್ನು
ಐಚ್ಛಿಕಗೊಳಿಸಿದೆ ಹೆಚ್ಚಿನ ಮಾಹಿತಿಗಾಗಿ ಕಾರ್ಮಿಕ ಸಹಾಯವಾಣಿ 155214 ಅನ್ನು
ಸಂಪರ್ಕಿಸಬಹುದೆಂದು ಕಾರ್ಮಿಕ ಅಧಿಕಾರಿ ಇಬ್ರಾಹಿಂ ಸಾಬ್ ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.
===