ಹುದ್ದೆ : ಅರ್ಜಿ ಆಹ್ವಾನ
ರಾಷ್ಟ್ರೀಯ ಆಯುಷ್ ಅಭಿಯಾನದಡಿಯಲ್ಲಿ ಜಿಲ್ಲಾ ಕಾರ್ಯಕ್ರಮ
ವ್ಯವಸ್ಥಾಪಕ ಹುದ್ದೆಯನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ
ಮಾಡಿಕೊಳ್ಳಲು ಉದ್ದೇಶಿಸಲಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ
ಆಹ್ವಾನಿಸಲಾಗಿದೆ.
ಕೇಂದ್ರ ಪುರಸ್ಕøತ ರಾಷ್ಟ್ರೀಯ ಆಯುಷ್ ಅಭಿಯಾನದಡಿಯಲ್ಲಿ
ಪ್ರತಿ ಜಿಲ್ಲೆಗೆ ತಲಾ 01 ರಂತೆ ಗುತ್ತಿಗೆ ಆಧಾರದಲ್ಲಿ ಜಿಲ್ಲಾ ಕಾರ್ಯಕ್ರಮ
ವ್ಯವಸ್ಥಾಪಕರ ಹುದ್ದೆಗೆ ನೇಮಕಾತಿ ಮಾಡಿಕೊಳ್ಳಲು ಉದ್ದೇಶಿಸಲಾಗಿದೆ.
ಈ ಹುದ್ದೆಯ ಅವಧಿ 2022 ರ ಮಾ. 31 ರವೆರೆಗೆ ಇದ್ದು, ಷರತ್ತು
ಮತ್ತು ನಿಬಂಧನೆಗಳಿಗೆ ಒಳಪಟ್ಟು ಗುತ್ತಿಗೆ ಆಧಾರದ
ನೇಮಕಾತಿಗಾಗಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗೆ ಎಐಸಿಟಿಇ
ಮಾನ್ಯತೆ ಪಡೆದ ಎಂಬಿಎ ಮತ್ತು ಸ್ನಾತ್ತಕೋತ್ತರ ಪದವಿ, ಎಐಸಿಟಿಇ
ಮಾನ್ಯತಾ ಸಂಸ್ಥೆಯಿಂದ ಡಿಪ್ಲೊಮೋ ಪಡೆದಿರಬೇಕು. ಕಂಪ್ಯೂಟರ್
ಜ್ಞಾನ, ಎಂ.ಎಸ್. ಆಫೀಸ್, ಎಂ.ಎಸ್.ವರ್ಡ್, ಎಂ.ಎಸ್. ಪವರ್ ಪಾಯಿಂಟ್, ಮತ್ತು ಎಂ.ಎಸ್
ಎಕ್ಸೆಲ್ನ ಜ್ಞಾನ ಹೊಂದಿರಬೇಕು. ಕನಿಷ್ಠ 03 ವರ್ಷ ಸಾರ್ವಜನಿಕ
ಆರೋಗ್ಯ ಕಾರ್ಯಕ್ರಮಗಳಲ್ಲಿ ಅನುಭವವಿರಬೇಕು. ಆಯುಷ್
ಸೇರಿದಂತೆ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡಿದ
ಅನುಭವವಿರಬೇಕು. ಈ ಹುದ್ದೆಗೆ ಮಾಸಿಕ ರೂ.30,000 ಸಂಭಾವನೆ
ನೀಡಲಾಗುವುದು.
ಅಭ್ಯರ್ಥಿಗಳು ಅರ್ಜಿಯನ್ನು ಜಿಲ್ಲಾ ಆಯುಷ್ ಕಚೇರಿ,
ಪಂಚಾಯತ್ರಾಜ್ ಕಾರ್ಯಪಾಲಕ ಇಂಜಿನಿಯರಿಂಗ್ ವಿಭಾಗೀಯ ಕಚೇರಿಯ
ಆವರಣ, ಪಿ.ಬಿ.ರಸ್ತೆ ದಾವಣಗೆರೆ -577001, ಇಲ್ಲಿಗೆ ಭರ್ತಿ ಮಾಡಿದ ಅರ್ಜಿಯ
ಜೊತೆಗೆ ಅಗತ್ಯ ದಾಖಲಾತಿಗಳೊಂದಿಗೆ ಜು.22 ರ ಸಂಜೆ 5.30 ರೊಳಗಾಗಿ
ಅಂಚೆಮೂಲಕ ಅಥವಾ ಖುದ್ದಾಗಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ಜಿಲ್ಲಾ ಆಯುಷ್ ಕಚೇರಿ ದೂರವಾಣಿ ಸಂಖ್ಯೆ 08192-
221129 ಕ್ಕೆ ಸಂಪರ್ಕಿಸಬಹುದು ಎಂದು ಜಿಲ್ಲಾ ಆಯುಷ್ ಅಧಿಕಾರಿಗಳು
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.