ಬೆಂಗಳೂರಿನ
ಹಿಂದೂಸ್ಥಾನ್ ಏರೋನಾಟಿಕ್ಸ್ ಲಿವಿಟೆಡ್ (ಹೆಚ್‍ಎಎಲ್) ವತಿಯಿಂದ ಒಂದು
ವರ್ಷದ ಅವಧಿಯ ಅಪ್ರೆಂಟೀಸ್‍ಷಿಪ್ ತರಬೇತಿಗಾಗಿ ಅರ್ಜಿ
ಆಹ್ವಾನಿಸಲಾಗಿದ್ದು, ಐಟಿಐ ತೇರ್ಗಡೆಯಾಗಿರುವ ಅಭ್ಯರ್ಥಿಗಳು
ಅರ್ಜಿಸಲ್ಲಿಸಬಹುದಾಗಿದೆ. ಫಿಟ್ಟರ್, ಟರ್ನರ್, ಮಾಕ್ಯಾನಿಸ್ಟ್, ಎಲೆಕ್ಟ್ರೀಷಿನ್,
ವೆಲ್ಡರ್, ಸಿಓಪಿಎ, ಫೌಂಡ್ರಿಮನ್, ಶೀಟ್ ಮೆಟಲ್ ವರ್ಕರ್ ತರಬೇತಿಗಾಗಿ
ಆಸಕ್ತಿ ಹೊಂದಿರುವವರು ನಿಗಧಿತ ನಮೂನೆ ಅರ್ಜಿಯನ್ನು ಜಿಲ್ಲಾ
ಉದ್ಯೋಗ ವಿನಿಮಯ ಕಛೇರಿಯಲ್ಲಿ ಪಡೆದು, ಭರ್ತಿ ಮಾಡಿದ
ಅರ್ಜಿಯೊಂದಿಗೆ ಎಸ್.ಎಸ್.ಎಲ್.ಸಿ. ಮತ್ತು ಐಟಿಐ ಅಂಕಪಟ್ಟಿ, ಜಾತಿ ಪ್ರಮಾಣ
ಪತ್ರ, ಆಧಾರ್ ಕಾರ್ಡ್, ಎನ್.ಸಿ.ವಿ.ಟಿ. ನೋಂದಣಿ ಸಂಖ್ಯೆ,

ಎಂಪ್ಲಾಯಿಮೆಂಟ್ ಕಾರ್ಡ್‍ಗಳ ಪ್ರತಿಗಳನ್ನು ಲಗತ್ತಿಸಿ ಜುಲೈ
26ರೊಳಗಾಗಿ ಸಲ್ಲಿಸುವಂತೆ ಉದ್ಯೋಗಾಧಿಕಾರಿಗಳು
ತಿಳಿಸಿರುತ್ತಾರೆ.
ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ದೂ.ಸಂ.:
08182-255293/ 8861890866 ಗಳನ್ನು ಸಂಪರ್ಕಿಸುವುದು

Leave a Reply

Your email address will not be published. Required fields are marked *