ನಗರದ ಹಿರೇಕಲ್ಮಠದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಟರಿ ಹ್ಯಾಪ್ ಲೋಕಾರ್ಪಣೆ ಮಾಡಿ ಮಾತನಾಡಿದ ಶಾಸಕರು ಬದಲಾಗುತ್ತಿರುವ ಜೀವನ ಶೈಲಿಯೊಂದಿಗೆ ನಾವೂ ಕೂಡ ಹೊಂದಾಣಿಕೆ ಮಾಡಿಕೊಂಡು ನಡೆದಾಗ ಮಾತ್ರ ಮನುಷ್ಯನ ಜೀವನ ಸುಲಲಿತವಾಗುತ್ತದೆ ಎಂದರು.
ಪ್ರಸ್ತುತ ದಿನಗಳಲ್ಲಿ ಆನ್‍ಲೈನ್ ಮಾರ್ಕೆಟ್ ಬೃಹದಾಕಾರವಾಗಿ ಬೆಳದಿದ್ದು, ಇದೀಗ ಕುಂಬಾರ ಸಮಾಜದವರೂ ಕೂಡ ಆನ್‍ಲೈನ್ ಮಾರ್ಕೆಟಿಂಗ್ ಮೂಲಕ ವ್ಯಾಪಾರ ಮಾಡಲು ಆರಂಭಿಸಿದ್ದು ನಿಜಕ್ಕೂ ಸಂತೋಷ ಮೂಡಿಸಿದೆ ಎಂದರು.

ಹಿಂದಿನ ಕಾಲದಲ್ಲಿ ಮಣ್ಣಿನಿಂದ ತಯಾರಿಸಿದ ಮಡಿಕೆಗಳಿಗೆ ಬಾರೀ ಡಿಮ್ಯಾಂಡ್ ಇತ್ತು. ಆದರೇ ಆಧುನೀಕತೆ ಬೆಳೆದಂತೆ ಮಣ್ಣಿನ ಮಡಿಕೆಗೆ ಬೇಡಿಕೆ ಕಡಿಮೆಯಾಗಿದ್ದರಿಂದ ಕುಂಬಾರ ಸಮಾಜದವರು ವಿವಿಧ ಅಲಂಕಾರಿಕ ವಸ್ತುಗಳನ್ನು ಮಾಡಲು ಆರಂಭಿಸಿದ್ದರು. ಆದರೇ ಅವರಿಗೆ ಸೂಕ್ತ ಮಾರುಕಟ್ಟೆ ಸಿಗದೇ ಅವರು ಸಂಕಷ್ಟ ಅನುಭವಿಸ ಬೇಕಾಗಿತ್ತು. ಆದರೇ ಇದೀಗ ಅವರೇ ಸ್ವತ ಹ್ಯಾಪ್ ಮೂಲಕ ವ್ಯಾಪರ ಆರಂಭಿಸಿದ್ದು, ತಾವೇ ಮಾರುಕಟ್ಟೆ ಕಂಡು ಕೊಂಡಿದ್ದಾರೆ ಎಂದರು.
ದಿವ್ಯ ಸಾನಿಧ್ಯವಹಿಸಿದ್ದ ಹಿರೇಕಲ್ಮಠದ ಡಾ|| ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಕುಂಬಾರ ಸಮಾಜದ ಕಾರ್ಯವನ್ನು ಶ್ಲಾಘಿಸಿದರು. ಅಷ್ಟೇ ಅಲ್ಲದೇ ಒಂದೊಂದು ಸಮಾಜದವರಲ್ಲೂ ಒಂದು ಕರೆ ಅಡಗಿದ್ದು ಪ್ರತಿಯೊಬ್ಬರೂ ಅದನ್ನು ಉಳಿಸಿ ಬೆಳೆಸಿಕೊಂಡು ಹೋಗುವಂತೆ ಕರೆ ನೀಡಿದರು.
ಸುಮಾ ರೇಣುಕಾಚಾರ್ಯ, ಕೆ.ಟಿ.ರಾಜಶೇಖರ್ ಕಂಬಾರ, ಎಂ.ಜೆ.ಉಮಾ ಓಂಕಾರಪ್ಪ,ಎಂ.ಜೆ.ಚನ್ನೇಶ್, ಯುವರಾಜ್,ಪ್ರವೀಣ್ ಕುಮಾರ್ ಕೆ ಸೇರಿದಂತೆ ಮತ್ತೀತರರಿದ್ದರು.
