ನಾಡಿನ ಉದ್ಯಮ ಕ್ಷೇತ್ರದಲ್ಲಿ ಮೀನುಗಾರರ ಕೊಡುಗೆ ಅಪಾರ. ಕೊರೋನಾ ಸಂಕಷ್ಟದಿಂದ ತೊಂದರೆಗೀಡಾದ ಬಡ ಮೀನುಗಾರರ ಕಷ್ಟವನ್ನು ಅರ್ಥೈಸಲು, ಅವರಿಗೆ ನೆರವಾಗಲು ಸರಕಾರ ವಿಫಲವಾಗಿದೆ.

ಕರಾವಳಿ ಪ್ರವಾಸದಲ್ಲಿರುವ ಕೆಪಿಸಿಸಿ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಡಿ.ಕೆ. ಶಿವಕುಮಾರ್ ಅವರು ನಿನ್ನೆ ದಕ್ಷಿಣ ಕನ್ನಡ ಜಿಲ್ಲೆಯ ಮೀನುಗಾರರೊಂದಿಗೆ ಮಂಗಳೂರು ನಗರದ ಬೋಳೂರು ಮೊಗವೀರ ಸಭಾಭವನದಲ್ಲಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರ ಸಮಸ್ಯೆಗಳ ಬಗ್ಗೆ ಚರ್ಚಿಸಿದರು. ಇಂದು ಉಡುಪಿ ಜಿಲ್ಲೆಯ ಮೀನುಗಾಗರೊಂದಿಗೆ ಮಲ್ಪೆಯಲ್ಲಿ ಸಂವಾದ ನಡೆಸಿದರು.
