ಅವಕಾಶ
ಶಿವಮೊಗ್ಗ,
ಶಿವಮೊಗ್ಗ,
ಪ್ರಸ್ತುತ ಮಳೆ ಪ್ರಮಾಣ ಕಡಿಮೆ ಇರುವುದರಿಂದ
ಸಾರ್ವಜನಿಕರ ಸುಗಮ ಸಂಚಾರದ ಹಿತದೃಷ್ಟಿಯಿಂದ
ರಾಷ್ಟ್ರೀಯ ಹೆದ್ದಾರಿ 169ಎ ಆಗುಂಬೆ ಘಾಟಿಯಲ್ಲಿ ವಾಹನಗಳ
ಸಂಚಾರಕ್ಕೆ ಅವಕಾಶ ನೀಡಿ ಜಿಲ್ಲಾಧಿಕಾರಿಗಳು ಆದೇಶಿಸಿರುತ್ತಾರೆ.
ಈ ಹಿಂದೆ ರಾಷ್ಟ್ರೀಯ ಹೆದ್ದಾರಿ 169ಎ ರ ತೀರ್ಥಹಳ್ಳಿ-ಉಡುಪಿ
ವ್ಯಾಪ್ತಿಯಲ್ಲಿ ಹೆಚ್ಚು ಮಳೆಯಾಗುತ್ತಿದ್ದು, ಆಗುಂಬೆ
ಘಾಟಿಯ ರಸ್ತೆಯು ಕಿರಿದಾಗಿದ್ದು, ರಸ್ತೆಯ ಇಕ್ಕೆಲಗಳಲ್ಲಿ
ಭಾರ ತಡೆಯುವ ಕ್ಷಮತೆ ಕ್ಷೀಣಿಸುತ್ತಿತ್ತು. ಭಾರೀ
ಸರಕು ಸಾಗಣೆ ವಾಹನಗಳು ಸಂಚರಿಸುವುದರಿಂದ
ರಸ್ತೆಯ ಬದಿಯ ಮಣ್ಣು ಕುಸಿತ ಉಂಟಾಗಿ ರಸ್ತೆ ಸಂಚಾರಕ್ಕೆ
ತೊಂದಯುಂಟಾಗಿ ಸಾಕಷ್ಟು ಅಪಘಾತಗಳಿಗೆ
ಕಾರಣವಾಗುವ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಅಧಿಕ ಭಾರದ
ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಿ ಅಕ್ಟೋಬರ್ 15
ರವರೆಗೆ ಕೆಳಕಂಡ ಪರ್ಯಾಯ ಮಾರ್ಗದಲ್ಲಿ ವಾಹನ
ಸಂಚಾರ ವ್ಯವಸ್ಥೆ ಮಾಡಲಾಗಿತ್ತು.
ಅಧಿಕ ಮಳೆ ಇದ್ದಾಗ ಭಾರೀ ವಾಹನ ನಿಷೇಧ: ಇದೀಗ ಮಳೆ
ಪ್ರಮಾಣ ಕಡಿಮೆ ಇರುವುದರಿಂದ ಸಾರ್ವಜನಿಕರ ಸುಮಗ
ಸಂಚಾರದ ಹಿತದೃಷ್ಟಿಯಿಂದ ಈ ಮಾರ್ಗದಲ್ಲಿ ಅಧಿಕ ಮಳೆ
ಪ್ರಮಾಣ ಇರುವ ದಿನಗಳಲ್ಲಿ ಭಾರೀ ವಾಹನಗಳ ಸಂಚಾರ
ನಿಷೇಧಿಸಿ, ಕೆಳಕಂಡ ಪರ್ಯಾಯ ಮಾರ್ಗದಲ್ಲಿ
ಸಂಚರಿಸುವುದು ಹಾಗೂ ಮಳೆ ಕಡಿಮೆ ಇರುವ ದಿನಗಳಲ್ಲಿ
ಎಲ್ಲಾ ವಾಹನಗಳ ಮುಕ್ತ ಸಂಚಾರಕ್ಕೆ ಅನುವು
ಮಾಡಿಕೊಡಬೇಕೆಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್
ಆದೇಶಿಸಿದ್ದಾರೆ.
ಭಾರೀ ವಾಹನ ಸಂಚಾರವನ್ನು
ನಿಷೇಧಿಸಿರುವ ರಸ್ತೆ
ಮಾರ್ಗದ ವಿವರ
ಪರ್ಯಾಯ ಮಾರ್ಗಗಳು
ಶಿವಮೊಗ್ಗ-ತೀರ್ಥಹಳ್ಳಿ-
ಆಗುಂಬೆ-ಉಡುಪಿ ಮಾರ್ಗ
- ಶಿವಮೊಗ್ಗ-ತೀರ್ಥಹಳ್ಳಿ-
ಉಂಟೂರುಕಟ್ಟೆ ಕೈಮರ-
ಮಾಸ್ತಿಕಟ್ಟೆ-ಹುಲಿಕಲ್-
ಕುಂದಾಪುರ - ಶಿವಮೊಗ್ಗ-ತೀರ್ಥಹಳ್ಳಿ-
ಕಮ್ಮರಡಿ-ಶೃಂಗೇರಿ-
ಕೆರೆಕಟ್ಟೆ-ಕಾರ್ಕಳ