ದಿನಾಂಕ 08-07-2021 ರಂದು ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ವತಿಯಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ನಡೆದ ತೈಲ ಬೆಲೆ ಏರಿಕೆ ಖಂಡಿಸಿ ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ಯಮಕನಮರಡಿ ಶಾಸಕರಾದ ಕಲ್ಯಾಣ ಕರ್ನಾಟಕ ಕನಸುಗಾರ ಸನ್ಮಾನ್ಯ ಶ್ರೀ ಸತೀಶ್ ಜಾರಕಿಹೊಳಿಯವರ ನೇತೃತ್ವದಲ್ಲಿ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಭವನದಿಂದ ಸನ್ಮಾನ್ಯ ಶ್ರೀ ಸತೀಶ ಜಾರಕಿಹೊಳಿಯವರು ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ಸೈಕಲ್ ರ್ಯಾಲಿ ನಡೆಸಿದರು. ಈ ಸೈಕಲ್ ರ್ಯಾಲಿಯಲ್ಲಿ ಬೆಳಗಾವಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಎಸ್ ಟಿ ಅಧ್ಯಕ್ಷರಾದ ಶ್ರೀ ಬಾಳೇಶ ದಾಸನಟ್ಟಿ ಯವರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಶಾಸಕರಾದ ಲಕ್ಷ್ಮಿ ಹೆಬ್ಬಾಳಕರ್, ಮಹಾಂತೇಶ ಕೌಜಲಗಿ, ಅಂಜಲಿ ನಿಂಬಾಳಕರ್ ಹಾಗೂ ರಾಜು ಶೇಠ್, ವಿನಯ ನಾವಲಗಟ್ಟಿ, ಸುನೀಲ್ ಹನ್ನಮ್ಮಣವರ, ಬಾಬಾಸಾಹೇಬ ಪಾಟೀಲ, ಜಯಶ್ರೀ ಮಾಳಗಿ, ಬೆಳಗಾವಿ ನಗರ ವಾಲ್ಮೀಕಿ ಮುಖಂಡರಾದ ಶ್ರೀ ಸಂಜು ನಾಯಕ, ಹಾಗೂ ನೂರಾರು ಕಾರ್ಯಕರ್ತರು ಸೈಕಲ್ ರ್ಯಾಲಿಯಲ್ಲಿ ಬಾಗಿಯಾಗಿದ್ದರು.