ನಿರ್ವಹಣೆ
ಜಿಲ್ಲೆಯಾದ್ಯಂತ ಮುಸುಕಿನಜೋಳದ ಬೆಳೆಯು ಬೆಳವಣಿಗೆ
ಹಂತದಲ್ಲಿದ್ದು ಸುಮಾರು ದಿನಗಳಿಂದ ಮಳೆಯಾಗದಿರುವ ಕಾರಣ
ತೇವಾಂಶದ ಕೊರತೆ ಕಾಣಿಸುತ್ತಿದೆ. ಜಿಲ್ಲೆಯಾದ್ಯಂತ ಚದುರಿದಂತೆ
ಮಳೆಯಾಗುತ್ತಿದ್ದು, ಈ ಹಂತದಲ್ಲಿ ಪೋಷಕಾಂಶಗಳ ನಿರ್ವಹಣೆ
ಪ್ರಮುಖ ಪಾತ್ರ ವಹಿಸುತ್ತದೆ. ಈ ನಿಟ್ಟಿನಲ್ಲಿ ಕೃಷಿ ಇಲಾಖೆಯು ರೈತರಿಗೆ
ಸಲಹೆಗಳನ್ನು ನೀಡಿದೆ.
ಕೃಷಿಯಲ್ಲಿ ಪರಿಕರಗಳೆಂದು ನೀರನ್ನು ಪರಿಗಣಿಸಿದರೆ, ಈಗ
ಬಂದಿರುವ ಮಳೆಯ ತೇವಾಂಶ ಬಳಸಿಕೊಂಡು ಈ ಕೆಳಗಿನಂತೆ
ಪೋಷಕಾಂಶ ನಿರ್ವಹಣೆ ಮಾಡುವ ಅವಶ್ಯಕತೆಯಿದೆ.
ಪ್ರತಿ ಲೀಟರ್ ನೀರಿಗೆ 3 ಗ್ರಾಂ. 19 ಆಲ್ ಹಾಗೂ 3 ಗ್ರಾಂ 13:0:45 ನೀರಿನಲ್ಲಿ
ಕರಗುವ ರಾಸಾಯನಿಕ ಗೊಬ್ಬರ ಜೊತೆ ಪ್ರತಿ ಲೀಟರ್ ನೀರಿಗೆ 5 ಮಿ.ಲೀ.
ಲಘುಪೋಷಕಾಂಶಗಳ ಮಿಶ್ರಣವನ್ನು ಬೆರೆಸಿ ಸಿಂಪರಣೆ
ಮಾಡಬೇಕು.
ಯೂರಿಯಾ ರಾಸಾಯನಿಕ ಗೊಬ್ಬರ ಬಳಸುವುದಾದರೆ ಎಳೆಶೆಡ್ಡಿ
ಮೂಲಕ ಎಕರೆಗೆ 25 ಕೆಜಿ ಯೂರಿಯಾ ಒದಗಿಸಬೇಕು. ತೇವಾಂಶ
ಹದವಿರುವಾಗ ದಿಂಡು ಏರುವಂತೆ ಎಡೆ ಹೊಡೆಯಬೇಕು.
ಸೈನಿಕ ಹುಳುವಿನ ಬಾಧೆ ನಿರ್ವಹಣೆ ಮಾಡಲು ಪ್ರತಿ ಲೀಟರ್ ನೀರಿಗೆ 0.4
ಗ್ರಾಂ ಇಮಾಮೆಕ್ಟಿನ್ ಬೆನ್ಜೋಯೇಟ್ 5% ಎಸ್.ಜಿ. ಅಥವಾ 0.3 ಗ್ರಾಂ.
ಸ್ಪ್ಯೆನೋಸಾಡ್ ಬೆರೆಸಿ ಒಂದೊಂದೇ ಸಾಲು ಹಿಡಿದು ಪ್ರತಿ ಸುಳಿ ತುಂಬುವಂತೆ
ಸಿಂಪರಣೆ ಮಾಡಬೇಕು ಎಂದು ಜಂಟಿಕೃಷಿ ನಿರ್ದೇಶಕರು
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.