ಕೋವಿಡ್ ಲಾಕ್‍ಡೌನ್ ಪರಿಣಾಮವಾಗಿ ಆರ್ಥಿಕವಾಗಿ ನಷ್ಟ ಅನುಭವಿಸಿದ
ಅಸಂಘಟಿತ ವಲಯದ ಕಾರ್ಮಿಕರಿಗೆ ಸರ್ಕಾರವು ಅವರ ಖಾತೆಗೆ
ನೇರವಾಗಿ ರೂ.2 ಸಾವಿರ ಹಣವನ್ನು ಜಮಾ ಮಾಡಲಾಗುತ್ತಿದ್ದು, ಇದಕ್ಕಾಗಿ
ಕಾರ್ಮಿಕರು ಜು.31ರ ಒಳಗಾಗಿ ಆನ್‍ಲೈನ್‍ನಲ್ಲಿ ಸೇವಾಸಿಂಧು ಪೋರ್ಟಲ್‍ನಲ್ಲಿ
ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದವರಿಗೆ ಮಾತ್ರ ಅವರ ಖಾತೆಗೆ
ಹಣವನ್ನು  ಜಮಾ ಮಾಡಲಾಗುವುದು ಎಂದು ಸಂಸದ ಜಿ.ಎಂ ಸಿದ್ದೇಶ್ವರ
ಹೇಳಿದರು.
ಜಿಲ್ಲಾಡಳಿತ ಭವನದ ತುಂಗಾಭದ್ರಾ ಸಭಾಂಗಣದಲ್ಲಿ ಕರ್ನಾಟಕ
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಅಡಿಯಲ್ಲಿ
ನೋಂದಾಯಿಸಿರುವ ಕಟ್ಟಡ ಕಾರ್ಮಿಕರಿಗೆ ಮಂಡಳಿಯಿಂದ ಆಯೋಜಿಸಲಾದ
ಫುಡ್‍ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕೋವಿಡ್ ಲಾಕ್‍ಡೌನ್ ಪರಿಣಾಮವಾಗಿ ಆರ್ಥಿಕವಾಗಿ ನಷ್ಟ ಅನುಭವಿಸಿದ
ಕಟ್ಟಡ ಕಾರ್ಮಿಕರಿಗೆ ಸರ್ಕಾರ ನೆರವು ನೀಡುತ್ತಿದೆ. ಅದೇ ರೀತಿ
ಅಸಂಘಟಿತ ವಲಯದ ಕಾರ್ಮಿಕರಿಗೆ ಸರ್ಕಾರವು ಅವರ ಖಾತೆಗೆ
ನೇರವಾಗಿ ರೂ.2 ಸಾವಿರ ಹಣವನ್ನು ಜಮಾ ಮಾಡಲಾಗುತ್ತಿದೆ. ಅಸಂಘಟಿತ
ವಲಯದ 11 ವೃತ್ತಿ ಕಾರ್ಮಿಕರಿಗೆ ಪರಿಹಾರ ನೀಡಲಾಗುತ್ತಿದ್ದು, ಜು. 31
ರೊಳಗಾಗಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಎಂದರು. ಇದೇ ವೇಳೆ
ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಮಾಯಕೊಂಡ ಕ್ಷೇತ್ರ ಶಾಸಕ
ಪ್ರೊ.ಲಿಂಗಣ್ಣ ಹಾಗೂ ಸಂಸದ ಜಿ.ಎಂ ಸಿದ್ದೇಶ್ವರ ಫುಡ್‍ಕಿಟ್ ವಿತರಣೆ
ಮಾಡಿದರು.
ಜಿಲ್ಲೆಯಲ್ಲಿ 1 ಲಕ್ಷ ಕಾರ್ಮಿಕರಿದ್ದು, ಇದುವರೆಗೆ 67,538 ಜನರಿಗೆ ಅವರ
ಖಾತೆಗೆ ನೇರವಾಗಿ ರೂ.2 ಸಾವಿರ ಜಮಾ ಮಾಡಲಾಗಿದ್ದು, ಉಳಿದವರಿಗೆ ಇನ್ನು
10 ದಿನದ ಒಳಗಾಗಿ ಹಣ ಜಮಾ ಮಾಡಲಾಗುವುದು. ಕಷ್ಟದಲ್ಲಿರುವ
ಕಾರ್ಮಿಕರಿಗೆ ನೆರವಾಗುವ ಹಿತದೃಷ್ಟಿಯಿಂದ ರೂ.900 ಮೊತ್ತದ ಆಹಾರ
ಪದಾರ್ಥಗಳನ್ನು ಕಾರ್ಮಿಕ ಕಾರ್ಡ್ ಇದ್ದವರಿಗೆ ಮಾತ್ರ ವಿತರಣೆ
ಮಾಡಲಾಗುತ್ತಿದೆ ಎಂದರು.
ಮಾಯಕೊಂಡ ಶಾಸಕ ಪ್ರೊ.ಲಿಂಗಣ್ಣ ಮಾತನಾಡಿ, ಇಂದು
ಸಾಂಕೇತಿಕವಾಗಿ 100 ಜನ ಕಾರ್ಮಿಕರಿಗೆ ಫುಡ್‍ಕಿಟ್ ವಿತರಣೆ
ಮಾಡಲಾಗುತ್ತಿದ್ದು, ಕೋವಿಡ್ ಸಂಕಷ್ಟ ಸಮಯದಲ್ಲಿ ಕಾರ್ಮಿಕರು
ಯಾರೂ ಕೂಡ ಹಸಿವಿನಿಂದ ಬಳಲಬಾರದು ಎಂದು ಸರ್ಕಾರವು ಆಹಾರ
ಧಾನ್ಯ ಪದಾರ್ಥ ಕಿಟ್‍ಗಳನ್ನು ಕಟ್ಟಡ ಕಾರ್ಮಿಕರಿಗೆ ವಿತರಣೆ

ಮಾಡಲಾಗುತ್ತಿದೆ. ಈಗಾಗಲೇ ಲಾಕ್‍ಡೌನ್ ತೆರವು ಪ್ರಕ್ರಿಯೆ
ಜಾರಿಯಲ್ಲಿದ್ದು, ಜನರು ಯಾವುದೇ ರೀತಿಯ ಗೊಂದಲವಿಲ್ಲದೆ ನಿಮ್ಮ
ನಿಮ್ಮ ಕೆಲಸವನ್ನು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ
ಮುಂದುವರಿಸಿಕೊಂಡು ಹೋಗಬಹುದು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ  ಇಬ್ರಾಹಿಂ, ಕಾರ್ಮಿಕ ಕಲ್ಯಾಣ
ಮಂಡಳಿಯ ಅಧ್ಯಕ್ಷ ಸಾಂಗ್ಲಿ ದೇವೆಂದ್ರಪ್ಪ ಹಾಗೂ ಕಾರ್ಮಿಕರು
ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *