ಶಿಕಾರಿಪುರ: ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ‌ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರಿಂದ ಸೈಕಲ್‌‌ ಜಾಥ ಮಾಡುವ ಮೂಲಕ ಪ್ರತಿಭಟನೆ..!
ಶಿಕಾರಿಪುರ ಪಟ್ಟಣದಲ್ಲಿ ಮಂಗಳವಾರ ತಾಲೂಕು ಬ್ಲಾಕ್ ಕಾಂಗ್ರೆಸ್ ವತಿಯಿಂದ ದೇಶಾದ್ಯಂತ ಏರುತ್ತಿರುವ ಪೆಟ್ರೋಲ್ ಡೀಸೆಲ್ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಯನ್ನು ಕೂಗುತ್ತಾ ಕಾಂಗ್ರೆಸ್ ಕಾರ್ಯಕರ್ತರು ಸೈಕಲ್ ಜಾಥವನ್ನು ನಡೆಸಿದರು.

ನಂತರ ತಾಲೂಕು ಕಚೇರಿ ಎದುರು ಪ್ರತಿಭಟನೆಯನ್ನು ಉದ್ದೇಶಿಸಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗೋಣಿ ಮಾಲತೇಶ ಮಾತನಾಡಿ ಕೇಂದ್ರ ರಾಜ್ಯ ಬಿಜೆಪಿ ಸರ್ಕಾರ ಹಂತಹಂತವಾಗಿ ಬೆಲೆಯೇರಿಕೆಯನ್ನು ಮಾಡುತ್ತಿದ್ದು ರಾಜಾ ಹುಲಿ ಎಂದು ಅವರನ್ನೇ ಅವರು ಹೋಲಿಕೆ ಮಾಡಿಕೊಂಡಿದ್ದು ಅದೇ ರಾಜ ಹುಲಿ ಈಗ ರಾಜ್ಯವನ್ನೇ ಕೊಳ್ಳೆ ಹೊಡೆಯುವ ದರ ಜೊತೆಗೆ ಜನರ ಆರ್ಥಿಕ ದುಸ್ಥಿತಿಗೆ ಕಾರಣ ವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪೆಟ್ರೋಲ್ ಬೆಲೆ ನೂರರ ಗಡಿ ದಾಟಿದೆ ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಗಗನಕ್ಕೇರಿದೆ. ಎರಡು ವರ್ಷಗಳಿಂದ ಗ್ಯಾಸ್ ಸಬ್ ಸಿಡಿ ಇಲ್ಲ ಅದರ ಬಗ್ಗೆ ಮಾತನಾಡುವುದೇ ಇಲ್ಲ ಇಂಥ ಕೆಟ್ಟ ಜನ ವಿರೋಧಿ ಸರ್ಕಾರ ಬೇರೊಂದಿಲ್ಲ ಅದಕ್ಕೆ ಮುಂದಿನ ದಿನಗಳಲ್ಲಿ ಮತದಾರ ಪ್ರಬುಗಳೆ ಸರಿಯಾದ ಬುದ್ದಿ ಕಲಿಸುತ್ತಾ ರೆ.

ಇದರಿಂದ ಬಡ ಕೂಲಿಕಾರ್ಮಿಕ ಜೀವನವನ್ನು ನಡೆಸುವುದೇ ಕಷ್ಟಕರವಾಗಿದೆ ಇದರಿಂದ ಇಡೀ ದೇಶದ ಜನತೆ ಬಿಜೆಪಿ ಸರ್ಕಾರಕ್ಕೆ ಹಿಡಿ ಶಾಪ ವನ್ನು ಹಾಕುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಶಿಕಾರಿಪುರ ಕಾಂಗ್ರೆಸ್ ವೀಕ್ಷಕರಾದ ಮರಿಯೋಜೀ ರಾವ್, ಮಾಜಿ ಕಾಡ ಅಧ್ಯಕ್ಷ ನಗರದ ಮಾದೇವಪ್ಪ, ಕಾಂಗ್ರೆಸ್ ಮುಖಂಡರಾದ ಅರುಣ್ ಕುಮಾರ್, ಸುರೇಶ್, ಭಂಡಾರಿ ಮಾಲತೇಶ್, ರಘು ನಾಯ್ಕ, ಮಾರವಳ್ಳಿ ಉಮೇಶ್, ಸಂತೋಷ್, ಪುರಸಭಾ ಸದಸ್ಯರಾದ ಗೋಣಿ ಪ್ರಕಾಶ್, ಉಳಿ ದರ್ಶನ್, ರೋಷನ್ ಯುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕ ನಾಯ್ಕ, ಎನ್ಎಸ್ ಯುಐಅಧ್ಯಕ್ಷ ಶಿವುಹುಲ್ಮ ರ್. ಸೇರಿದಂತೆ ಕಾಂಗ್ರೆಸ್‌ ಕಾರ್ಯಕರ್ತರು ಇದ್ದರು.

Leave a Reply

Your email address will not be published. Required fields are marked *