ನರೇಂದ್ರ ಮೋದಿ ನೇತೃತ್ವದ ಸರಕಾರದಲ್ಲಿ ರಫೇಲ್ ವಿಮಾನ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಕುರಿತು ಜಂಟಿ ಸದನ ಸಮಿತಿಯಿಂದ ತನಿಖೆಗೆ ವಹಿಸಬೇಕೆಂದು ಆಗ್ರಹಿಸುತ್ತಿದ್ದರೂ ತನಿಖೆಗೆ ಮುಂದಾಗಿಲ್ಲ ಆದರೆ ಫ್ರಾನ್ಸ್ ಸರ್ಕಾರ ರಫೇಲ್ ಹಗರಣದ ಬಗ್ಗೆ ನ್ಯಾಯಾಂಗ ತನಿಖೆಗೆ ವಹಿಸಿದೆ ನರೇಂದ್ರ ಮೋದಿ ಸರ್ಕಾರ ಮಾತ್ರ ತನಿಖೆಗೆ ವಹಿಸದೆ ಮೀನಾಮೇಷ ಎಣಿಸುತ್ತಿದೆ ಇದರಿಂದ ಅವ್ಯವಹಾರದ ಬಗ್ಗೆ ಅನೇಕ ಅನುಮಾನಗಳು ಮೂಡುತ್ತಿವೆ,
ಭ್ರಷ್ಟಾಚಾರದ ಬಗ್ಗೆ ರಾಜಿ ಇಲ್ಲ ಎಂಬುವ ನರೇಂದ್ರ ಮೋದಿ ರವರ ಹೇಳಿಕೆ ಸದನ ಸಮಿತಿಗೆ ವಹಿಸಲು ತಡವೇಕೆ ಎಂಬುದು ದೇಶದ ಜನತೆಗೆ ಈಗ ಅನುಮಾನ ಮೂಡಿಸುತ್ತಿದೆ, ಮೋದಿ ಸರ್ಕಾರ ಜಂಟಿ ಸದನ ಸಮಿತಿಗೆ ರೆಫೇಲ್ ಹಗರಣವನ್ನು ಒಪ್ಪಿಸಲು ವಿಳಂಬವೇಕೆ ಎಂಬುದನ್ನು ಜನತೆಗೆ ತಿಳಿಸಬೇಕು, ಫ್ರಾನ್ಸ್ ಸರ್ಕಾರದಲ್ಲಿ ರಫೇಲ್ ವ್ಯಾಪಾರದಲ್ಲಿ ಒಳ ಒಪ್ಪಂದವಾಗಿದೆ ಭ್ರಷ್ಟಾಚಾರ ನಡೆದಿರುವ ಬಗ್ಗೆ ಅನುಮಾನವಿದೆ ಆದಕ್ಕಾಗಿ ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ ಎಂದು ತಿಳಿಸಿದೆ.
ರಫೆಲ್ ವಿಮಾನ ಖರೀದಿ ಅವ್ಯವಹಾರದಲ್ಲಿ ಪ್ರತಿ ವಿಮಾನಕ್ಕೂ ಹೆಚ್ಚುವರಿ ಹಣವನ್ನು ನೀಡಿ ಭಾರತ ಫ್ರಾನ್ಸ್ ನಿಂದ ಖರೀದಿಸಲಾಗಿದೆ ಎಂಬ ಅನುಮಾನ ಪ್ರಾರಂಭದಿಂದಲೂ ಕೇಳಿಬಂದಿದೆ.
ಆದರೂ ಇದನ್ನು ತನಿಖೆಗೆ ವಹಿಸಲು ಕೇಂದ್ರ ಬಿಜೆಪಿ ಸರ್ಕಾರ ಮೀನಾಮೇಷ ಎಣಿಸುತ್ತಿದೆ,
ಬಿಜೆಪಿಯ ವಕ್ತಾರ ಸಂಬಿತ್ ಪಾತ್ರಾ ಕಾಂಗ್ರೆಸ್ ಪಕ್ಷದ ಬಗ್ಗೆ ಆಧಾರ ರಹಿತ ಟೀಕೆ ನಡೆಸಿದ್ದಾರೆ ರಫೇಲ್ ಹಗರಣದ ಕಮಿಷನ್ ಪಡೆದಿರುವ ಕೇಂದ್ರ ಸರ್ಕಾರ ಶೇಕಡವಾರು ಎಷ್ಟು ಎಂಬುದನ್ನು ಸಂಬಿತ್ ಪಾತ್ರ ಬಹಿರಂಗ ಪಡಿಸಬೇಕು,
ರಫೇಲ್ ಅವ್ಯವಹಾರದ ಬಗ್ಗೆ ಸತ್ಯಾಂಶ ತಿಳಿಸಲು ಕೂಡಲೇ ಪ್ರಧಾನಿ ಮೋದಿ ಹಗರಣದ ತನಿಖೆಯನ್ನು ಜಂಟಿ ಸದನ ಸಮಿತಿಗೆ (ಜೆಪಿಸಿ) ಒಪ್ಪಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿಯಿಂದ ನಡೆದ ಈ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಎಸ್.ಮನೋಹರ್ ಜಿ.ಜನಾರ್ದನ್ ಎ.ಆನಂದ್.ಈ ಶೇಖರ್. ಉಮೇಶ್. ಪುಟ್ಟರಾಜ.ಮಹೇಶ್, ಭಾಗವಹಿಸಿದ್ದರು.