ದಾವಣಗೆರೆ: ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆಯಿಂದ
ಕಟ್ಟಡ ಕಾರ್ಮಿಕರಿಗೆ ಪುಡ್ಕಿಟ್ಗಳನ್ನು ನೀಡಲಾಗಿದ್ದು,
ಶನಿವಾರ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ
ಡಾ|| ಶಾಮನೂರು ಶಿವಶಂಕರಪ್ಪನವರು ದಾವಣಗೆರೆ ದಕ್ಷಿಣ
ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕಟ್ಟಡ ಕಾರ್ಮಿಕರಿಗೆ
ಪುಡ್ಕಿಟ್ಗಳನ್ನು ವಿತರಿಸಿದರು.
ನಂತರ ಕಟ್ಟಡ ಕಾರ್ಮಿಕರನ್ನುದ್ದೇಶಿಸಿ ಮಾತನಾಡಿದ
ಶಾಸಕರು ಕಟ್ಟಡ ಕಾರ್ಮಿಕರು ದೇಶ ನಿರ್ಮಾಣದಲ್ಲಿ ಪ್ರಮುಖ
ಪಾತ್ರ ವಹಿಸುವಂತಹವರು ಅಂತಹವರ ಸಂಕಷ್ಟಕ್ಕೆ
ಸರ್ಕಾರಗಳು ಶೀಘ್ರ ಸ್ಪಂದಿಸುವಂತಾಗಬೇಕು ಎಂದು
ಒತ್ತಾಯಿಸಿದರು.
ಕರೋನಾ ಒಂದು ಮತ್ತು ಎರಡನೇ ಅಲೆ ವೇಳೆ ಕಟ್ಟಡ
ಕಾರ್ಮಿಕರು ಸೇರಿದಂತೆ ಅನೇಕ ವೃತ್ತಿಪರ ಜನರಿಗೆ ಸಾಕಷ್ಟು
ತೊಂದರೆ ಆಯಿತು. ಇದಕ್ಕೆ ಸರ್ಕಾರ ತಕ್ಷಣ
ಸ್ಪಂದಿಸಬೇಕು.ಆದರೆ ಸರ್ಕಾರ ಬಹುದಿನಗಳ ನಂತರ
ಸ್ಪಂದಿಸಿದೆ. ಇಷ್ಟಕ್ಕೆ ಸಮಾಧಾನ ಪಡೆದುಕೊಳ್ಳಬೇಕೆಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ
ತರುತ್ತಿರುವ ಕಾಯ್ದೆ ಕಾನೂನುಗಳು ಜನವಿರೋಧಿ
ಕಾನೂನುಗಳಾಗಿವೆ. ಕೇಂದ್ರ ಸರ್ಕಾರದ ನೀತಿಗಳು ಬಡವರ
ಪರವಾಗಿ ಇರಬೇಕು. ಆದರೆ ಇಂದಿನ ಕೇಂದ್ರ ಸರ್ಕಾರಗಳ
ನೀತಿ ಬಡವರ ವಿರುದ್ಧವಾಗಿವೆ ಎಂದು ಅಸಮಾಧಾನ
ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ
ಸದಸ್ಯರುಗಳಾದ ಎ.ಬಿ.ರಹೀಂ, ಕೆ.ಚಮನ್ ಸಾಬ್, ಜಾಕೀರ್ ಅಲಿ,
ಕಾರ್ಮಿಕ ನಿರಿಕ್ಷಕರುಗಳಾದ ಇಬ್ರಾಹಿಂ ಸಾಬ್, ರಾಜಶೇಖರ್
ಹಿರೇಮಠ್, ಟಿ. ರಾಜಪ್ಪ, ಮಂಜು, ಮಧು, ಮುಖಂಡರುಗಳಾದ
ಸಾಗರ್ ಎಲ್ಎಂಹೆಚ್, ದುಗ್ಗೇಶ್, ಹಾಲಸ್ವಾಮಿ, ಕರಿಬಸಪ್ಪ
ಮತ್ತಿತರರು ಉಪಸ್ಥಿತರಿದ್ದರು.