ದಾವಣಗೆರೆ: ಶಾಸಕರಾದ ಡಾ|| ಶಾಮನೂರು
ಶಿವಶಂಕರಪ್ಪ ಮತ್ತು ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್
ಅವರುಗಳು ದಾವಣಗೆರೆ ನಾಗರೀಕರಿಗಾಗಿ
ಹಮ್ಮಿಕೊಂಡಿರುವ ಉಚಿತ ಲಸಿಕಾ ಶಿಬಿರ ಕಾರ್ಯಕ್ರಮವೂ
ಇಂದು ಸಹ ಮುಂದುವರೆದಿದ್ದು, ನಾಗರೀಕರು ಉಚಿತ
ಲಸಿಕೆಯನ್ನು ಪಡೆದರು.
ಇಂದು ದಾವಣಗೆರೆಯ ಕೆ.ಆರ್.ರಸ್ತೆಯ ಡಾ||
ಶಾಮನೂರು ಶಿವಶಂಕರಪ್ಪ ಸಾರ್ವಜನಿಕ ಆಸ್ಪತ್ರೆಯಲ್ಲಿ
2ನೇ ವಾರ್ಡ್ನ ನಾಗರೀಕರಿಗೆ ಅನುಕೂಲವಾಗುವಂತೆ ಲಸಿಕೆ
ನೀಡಲಾಯಿತು.
ಸ್ವತಹ ಶಾಸಕರಾದ ಡಾ|| ಶಾಮನೂರು
ಶಿವಶಂಕರಪ್ಪನವರು ಲಸಿಕೆ ನೀಡುವ ಸ್ಥಳಗಳಿಗೆ ಭೇಟಿ
ನೀಡಿ ಪರಿಶೀಲಿಸಿದರು.ನಂತರ ಲಸಿಕೆ ಪಡೆದ ನಾಗರೀಕರ
ಯೋಗಕ್ಷೇಮವನ್ನು ವಿಚಾರಿಸಿ ಕೇಂದ್ರ ಮತ್ತು ರಾಜ್ಯ
ಸರ್ಕಾರಗಳು ಸಮರ್ಪಕವಾಗಿ ಲಸಿಕೆ ನೀಡುವಂತೆ
ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್
ಪೈಲ್ವಾನ್, ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತರ ವಿಭಾಗದ
ದಕ್ಷಿಣ ವಲಯ ಅಧ್ಯಕ್ಷ ಕೊಡಪಾನ ದಾದಾಪೀರ್,
ಮಹಾನಗರ ಪಾಲಿಕೆ ಸದಸ್ಯರುಗಳಾದ ಎ.ಬಿ.ರಹೀಂ,
ಕೆ.ಚಮನ್ ಸಾಬ್, ಜಾಕೀರ್ ಅಲಿ, ಉದಯ್ ಕುಮಾರ್,
ಮುಖಂಡರುಗಳಾದ ಮಹ್ಮದ್ ಫಾರೂಕ್, ರಹಜಾನ್
ದಾದಾಪೀರ್, ದಿಲ್ಷಾದ್, ಮೂಸಾ ಕಲೀಮುಲ್ಲಾ, ಸಿಮೇಎಣ್ಣೆ
ಪರಮೇಶ್, ಎಂ.ಸೈಪುಲ್ಲಾ, ಅಪ್ರೋಝ್, ಮಹಬೂಬ್ ಪಾಷಾ
ಮತ್ತಿತರರಿದ್ದರು.