ಇಂದು Sunday 11 ರಂದು ಪಿಕ್ಸಾಗಿದ್ದ ಬಡ ಹಿಂದೂ ಹೆಣ್ಣೊಬ್ಬಳ ಮದುವೆ ಕಾರ್ಯ ಯೊ0ದು ಹಣಕಾಸಿನ ಅಡಚಣೆ ಯಿಂದ ನಿಂತು ಹೋಗ ಬಹುದಾದ ಸಂದರ್ಭ ದಲ್ಲಿ ಮಂಚಿಲದ ಮುಸ್ಲಿಂ ಕುಟುಂಬಯೊ0ದು ಮುಂದೆ ಬಂದು ಖರ್ಚು ವೆಚ್ಚನ್ನೆಲ್ಲಾ ವಹಿಸಿ ಕೊಂಡು ಈ ಮದುವೆ ನಡೆಸಿ ಕೊಟ್ಟ ಘಟನೆ ವರದಿಯಾಗಿದೆ ..
ರಝಾಕ್ ಎಂಬ MK ಮನೆತನದ ಸದಸ್ಯ ಸುರೇಶಣ್ಣ ಎಂಬವರ ಜೊತೆ ಹಲವಾರು ವರ್ಷ ದಿಂದ ಪರಿಚಯ ಇದ್ದು ಈಗಲೂ ಇವರಿಬ್ಬರ
ಬಾಂಧವ್ಯ till now
just like brothers . .
ಹಿಂದೆ ಮಂಗಳೂರಿನ ಶಕ್ತಿ ನಗರ ದಲ್ಲಿ ವಾಸವಿದ್ದ 65 ವರ್ಷದ ಸೀನಿಯರ್ ಸಿಟಿಝನ್ ಸುರೇಶಣ್ಣ ಮತ್ತು ಗಂಡ ತೀರಿ ಹೋದ ಅವರ ತಂಗಿ -ತಂಗಿಯ ಮಗಳು ಕವನ -ಹಾಗೂ ಗಂಡ ತೀರಿ ಹೋದ ಒಂದು ಹೆಂಗಸು ಮತ್ತು ಒಂದು ಚಿಕ್ಕ ಹುಡುಗಿ ಇವರೆಲ್ಲರೂ ಇತ್ತೀಚೆಗೆ ಮಂಚಿಲ SP ಕಾಂಪೌಂಡ್ ನ ಬಾಡಿಗೆ ಮನೆಯೊ0ದರಲ್ಲಿ ವಾಸ ಮಾಡುತ್ತಿದ್ದಾರೆ ..
MK ರಝಾಕ್ ತಮ್ಮ ದೋಸ್ತಿ ಸುರೇಶಣ್ಣ ರನ್ನು ಮೀಟ್ ಮಾಡಲು ಅವರ ಮನೆ ಬಾಗಿಲಿಗೆ ಬರುತ್ತಾರೆ. ಸುರೇಶಣ್ಣ ಮತ್ತು ಅವರ ಕುಟುಂಬದ ಮುಖದಲ್ಲಿ ಏನೋ ಗಾಢ ಚಿಂತೆ -ಭಯ- ಆತಂಕ -ನಿರಾಶೆ ಜಿಗುಪ್ಸೆ ಎಲ್ಲಾ ಎದ್ದು ಕಾಣುತ್ತಿತ್ತು ರಝಾಕ್. ಈ ಬಗ್ಗೆ ಸುರೇಶಣ್ಣ ರಲ್ಲಿ ಸ್ವಲ್ಪ ಒತ್ತಾಯ ಮಾಡಿ ವಿಚಾರಿಸಿದಾಗ ಮನೆಯ ಕಿಚನ್ ಒಳಗಿನ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಜೊತೆಗೆ ಇದೇ ತಿಂಗಳು 10 ಕ್ಕೆ ಕುಟುಂಬದ ಹುಡುಗಿ ಕವನಳ ಮದುವೆ ಪಿಕ್ಸ್ ಕೂಡ ಆಗಿದೆ.. ಇದರಿಂದ ದಿಕ್ಕು ಕಾಣದದೇ ಬಾರಿ ದುಃಖ – ಚಿಂತೆ ಎನ್ನುತ್ತಾರೆ ಸುರೇಶಣ್ಣ. .
ಇದನ್ನು ಕೇಳಿ ರಝಾಕ್ ರ ಮನ ಕರಗಿ ಕೂಡಲೇ cousin ಪಂಚ ಭಾಷಾ ಕ್ರಿಕೆಟ್ ಕಾಂಮೆಟ್ರಿ ಖ್ಯಾತಿಯ MK ರಿಯಾಜ್ ರನ್ನು ಸ್ಪಾಟ್ ಗೆ ಕರೆಸಿ ಕೊಳ್ಳುತ್ತಾರೆ.
ರಿಯಾಜ್ ಕೂಡಲೇ ಸುರೇಶಣ್ಣ ಕುಟುಂಬಕ್ಕೆ ಗ್ಯಾಸ್ – ರೇಶನ್ ವ್ಯವಸ್ಥೆ ಮಾಡುತ್ತಾರೆ…
ಪರಿಸ್ಥಿತಿ ಯ ಗಂಭೀರತೆ ಯನ್ನು ಚೆನ್ನಾಗಿ ಅರ್ಥ ಮಾಡಿದ MK ರಝಾಕ್ ಮತ್ತು MK ರಿಯಾಜ್ ಈ ವಿಷಯವನ್ನು ತಮ್ಮ MK ಮನೆತನದ MK- MBM ಮ್ಯಾರೇಜ್ ಪ0ಡ್ ಅಧ್ಯಕ್ಷ UH ಅಬ್ದುಲ್ ರಹ್ಮಾನ್ ಮತ್ತು ಚಯರ್ ಮೇನ್ MK ಹಂಝ ರ ಗಮನಕ್ಕೆ ತರುತ್ತಾರೆ.
ಈ ಬಡ ಸುರೇಶಣ್ಣರ ಕುಟುಂಬದ ಕಷ್ಟ ಅರಿತು MK ಮನೆತನದ ಮಾನವೀಯತೆ ಹೃದಯ ಈ ಬಡ ಹಿಂದೂ. ಹುಡುಗಿ ಗಾಗಿ ಮಿಡಿಯುತ್ತದೆ …
_ತಮ್ಮ MK ಮನೆತನದ ಸದಸ್ಯರ ಅವಶ್ಯಕತೆಗಾಗಿ ಇರುವ – MB-MBM ಮ್ಯಾರೇಜ್ ಪ0ಡ್ ಬಳಸಿ ಕೊಂಡು ಈ ಹಿಂದೂ ಬಡ ಸಹೋದರಿಯ ಮದುವೆಯ ಖರ್ಚು ವೆಚ್ಚದ ಜವಾಬ್ದಾರಿ ವಹಿಸಿ ಕೊಳ್ಳಲು MK ಮನೆತನ ನಿರ್ಧಾರ ಮಾಡುತ್ತದೆ ..
ಅದರ0ತೆ ನಿನ್ನೆ ಸುರೇಶಣ್ಣರ ತಮ್ಮ ಬಾಡಿಗೆ ಮನೆಯಲ್ಲಿ ಮದುಮಗಳು ಕವನಳ. ಮೆಹಂದಿ ಕಾರ್ಯ ಕ್ರಮ ಬಾರಿ ಗೌಜಿ ಸಂತೋಷ ದಿಂದ ನಡೆದಿದೆ ..
ಬಂಗಾರದ ಕಾಲು- ಕೈ ಉಂಗುರ – ಬೆಂಡೋಲೆ – ಇತರ ಬೆಳ್ಳಿ ಐಟೆಮ್ ಮತ್ತು ಮದುವೆಯ ಇತರ ವಸ್ತು ಗಳನ್ನು ಕವನಳಿಗಾಗಿ MK ಕುಟುಂಬ ಖರೀದಿ ಮಾಡಿ ಕೊಟ್ಟಿದ್ದಾರೆ…
ಶಾಸಕ UT ಖಾದರ್ ಸಾಬ್ ಕೂಡ ಈ ಮದುವೆಗೆ ಒಂದು _ಆಕರ್ಷಕ ಮೊತ್ತದ ಧನ ಸಹಾಯ ವನ್ನು ಕೊಟ್ಟು ಕಳುಹಿಸಿದ್ದಾರೆ…. *ಇತರ ದಾನಿ ಗಳೂ
ಕೂಡ ಸಹಾಯ ಮಾಡಿದ್ದಾರೆ
*ಇಂದು ತಲಪಾಡಿಯ ದುರ್ಗಾ ಪರಮೇಶ್ವರಿ ದೇವಸ್ಥಾನ ದಲ್ಲಿ ಮದುಮಗಳು ಕವನಳ
*ಕುತ್ತಿಗೆಗೆ ಮಧುಮಗ ತಾಳಿ ಬಿಗಿಯುದರೊಂದಿಗೆ ಮದುವೆ ಕಾರ್ಯ ಬಾರಿ – ಸಂತೋಷ – ಆನಂದಮಯ ಹಾಗೂ ಸಡಗರ ದಿಂದ ನೆರವೇರಿದೆ.
MK ಮನೆತನದ ಕಡೆಯಿಂದ MK ರಿಯಾಜ್ MK ಹಾಗೂ MK ರಝಾಕ್ ಹಾಗೂ MK-MBM ಮ್ಯಾರೇಜ್ ಪ0ಡ್ ಅಧ್ಯಕ್ಷ UH ಅಬ್ದುಲ್ ರಹ್ಮಾನ್ ಈ ಮದುವೆ ಸಮಾರಂಭ ದಲ್ಲಿ ಭಾಗವಹಿಸಿದ್ದರು
_
ಈ ಸಹಾಯ ದೊಂದಿಗೆ ತಮ್ಮನ್ನು ತಾವು ಹೋಗಲು ನಿರ್ಧಾರ_ ಮಾಡಿದ್ದ ಮಸಣ ದಿಂದ ವಾಪಸ್ ಕರೆಸಿ ಕೊಂಡ.. _ಹಾಗೂ ಕವನಳನ್ನು ಹಸೆ ಮನೆಗೆ ಕಳಿಸಿ ಕೊಟ್ಟ MK ಮನೆತನದ ಕುಟುಂಬದ ಔದಾರ್ಯಕ್ಕೆ ಸುರೇಶಣ್ಣ ಹಾಗೂ ಕುಟುಂಬ ಹೃದಯ ತುಂಬಿ – ಎರಡೂ ಕೈ ಜೋಡಿಸಿ ಅವರಿಗೆ ನಮಸ್ಕಾರ ಮಾಡುತ್ತಿದೆ ….
ಕವನಳ ದಾಂಪತ್ಯ ಜೀವನ ಹಾಲು – ಜೇನಿನಂತೆ ಸುಮಧುರ ವಾಗಿರಲೀ. ಎಂದು ಶುಭ ಹಾರೈಕೆ… ಹಾಗೆಯೆ MK ಮನೆತನಕ್ಕೆ ಮುಂದೆಯೂ ಬಡವರಿಗೆ ಸಹಾಯ ಮಾಡಲು ಅಲ್ಲಾಹನು *ಇನ್ನೂ ಹೆಚ್ಚಿನ ಸಂಪತ್ತು ದಯಪಾಲಿಸಲೀ ಅಮೀನ್. ಯಾ ರಬ್ಬಲ್ ಆಲ್ ಅಮೀನ್ .