ಜನಪರ ಕೆಲಸಗಳು: ಡಾ||
ಶಾಮನೂರು ಶಿವಶಂಕರಪ್ಪ
ದಾವಣಗೆರೆ: ದಾವಣಗೆರೆ ಸ್ಮಾರ್ಟ್‍ಸಿಟಿ ಯೋಜನೆಯಡಿ
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ
ಮಂಗಳವಾರದಂದು ಎಸ್.ಎಸ್.ಎಂ.ನಗರ ‘ಬಿ’ ಬ್ಲಾಕ್‍ನಲ್ಲಿ
ಕ್ರೀಡಾಂಗಣ, ಸರ್ಕಾರಿ ಶಾಲೆಯ ಸುಧಾರಣೆಯ ಅಭಿವೃದ್ಧಿ
ಕಾಮಗಾರಿ ಹಾಗೂ ಮಾಗಾನಹಳ್ಳಿ ರಸ್ತೆಯವರೆಗೆ
ಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಾಣದ ಕಾಮಗಾರಿಗಳಿಗೆ
ಭೂಮಿಪೂಜೆ ನೆರವೇರಿಸಿದ ಜಿಲ್ಲಾ ಉಸ್ತುವಾರಿ ಸಚಿವ
ಬಿ.ಎ.ಬಸವರಾಜ್ ಅವರು ಬಾಷಾನಗರದಲ್ಲಿ ನಿರ್ಮಿಸಲಾಗಿರುವ
ಪ್ರಸೂತಿ ಕೇಂದ್ರ (ಹೆರಿಗೆ ಆಸ್ಪತ್ರೆ) ಕಟ್ಟಡ ಮತ್ತು ವೀರ
ಮದಕರಿ ನಾಯಕ ವೃತ್ತದ ಬಳಿ ದುರ್ಗಾಂಬಿಕಾ
ಸಮುದಾಯ ಭವನವನ್ನು ಶಾಸಕರಾದ ಡಾ||
ಶಾಮನೂರು ಶಿವಶಂಕರಪ್ಪನವರ ಅಧ್ಯಕ್ಷತೆಯಲ್ಲಿ
ಲೋಕಾರ್ಪಣೆಗೊಳಿಸಿದರು.
ಈ ಎಲ್ಲಾ ಸಮಾರಂಭಗಳ ಅಧ್ಯಕ್ಷತೆಯನ್ನು ವಹಿಸಿ
ಮಾತನಾಡಿದ ಶಾಸಕರಾದ
ಡಾ|| ಶಾಮನೂರು ಶಿವಶಂಕರಪ್ಪನವರು ನಾವು
ಸಚಿವರಾಗಿದ್ದ ವೇಳೆ ದಾವಣಗೆರೆ ನಗರವು ಸ್ಮಾರ್ಟ್‍ಸಿಟಿಗೆ
ಮೊದಲ ಹಂತದಲ್ಲೇ ಆಯಿತು. ಇದಕ್ಕೆ ಅಂದಿನ ಶಾಸಕರಾದ
ಎಸ್.ಎಸ್.ಮಲ್ಲಿಕಾರ್ಜುನ್ ಮತ್ತು ಅಂದಿನ ಮಹಾನಗರ ಪಾಲಿಕೆ
ಆಡಳಿತವೇ ಕಾರಣವಾಗಿದೆ ಎಂದರು.
ನಂತರ ಮಲ್ಲಿಕಾರ್ಜುನ್ ಅವರ ಅಧ್ಯಕ್ಷತೆಯಲ್ಲಿ
ಅವರ ದೂರದೃಷ್ಟಿಯ ಫಲವಾಗಿ ಅನೇಕ ಜನಪರ
ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಲಾಯಿತು.
ಇದರ ಯಶಸ್ಸು, ಕೀರ್ತಿ ಎಸ್.ಎಸ್.ಮಲ್ಲಿಕಾರ್ಜುನ್ ಮತ್ತು
ಹಿಂದಿನ ಮಹಾನಗರ ಪಾಲಿಕೆ ಹಾಗೂ ಸ್ಮಾರ್ಟ್‍ಸಿಟಿ ಸದಸ್ಯರಿಗೆ
ಸಲ್ಲುತ್ತದೆ ಎಂದು ಪ್ರಶಂಶಿಸಿದರು.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ
ಕ್ರೀಡಾಂಗಣ ನಿರ್ಮಾಣವಾಗಬೇಕೆಂಬ ಈ ಭಾಗದ
ಕ್ರೀಡಾಪಟುಗಳ ಬೇಡಿಕೆ ಇಂದು ಈಡೇರಿದಂತಾಗಿದ್ದು,
ಸುಮಾರು 6 ಎಕರೆ ಪ್ರದೇಶದಲ್ಲಿ 8 ಕೋಟಿ ವೆಚ್ಚದಲ್ಲಿ
ಕ್ರೀಡಾಂಗಣ ನಿರ್ಮಾಣವಾಗಲಿದೆ. ಜೊತೆಗೆ ಕ್ರೀಡಾಂಗಣಕ್ಕೆ
ಸಂಪರ್ಕ ಕಲ್ಪಿಸುವ ರಸ್ತೆಯನ್ನು ಒಂದೂವರೆ ಕೋಟಿ
ವೆಚ್ಚದಲ್ಲಿ ಅಭಿವೃದ್ದಿ ಮಾಡಲಾಗುತ್ತಿದೆ ಎಂದರು.
ಈ ಭಾಗದಲ್ಲಿ ಹಳೇ ಹೆರಿಗೆ ಆಸ್ಪತ್ರೆ ಇದ್ದರೂ ಸಹ
ಹೆರಿಗೆ ಆಸ್ಪತ್ರೆ ನಿರ್ಮಾಣಕ್ಕೆ ಒತ್ತು ನೀಡಿ 1.35 ಕೋಟಿ ರೂ
ವೆಚ್ಚದಲ್ಲಿ 18 ಹಾಸಿಗೆವುಳ್ಳ ನೆಲಮಹಡಿ ಮತ್ತು ಮೊದಲ
ಮಹಡಿ ಕಟ್ಟಡವನ್ನು ಇಂದು ಜಿಲ್ಲಾ ಸಚಿವರು ಸಾರ್ವಜನಿಕರಿಗೆ
ಸಮರ್ಪಿಸಿದರು ಎಂದು ತಿಳಿಸಿದರು.
ಈ ಹಿಂದೆ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಕ್ರೀಡಾ
ಮಂತ್ರಿಗಳಾಗಿದ್ದ ವೇಳೆ ದೇವರಾಜ್ ಅರಸ್ ಬಡಾವಣೆಯಲ್ಲಿ
ಅಂತರಾಷ್ಟ್ರೀಯ ಮಟ್ಟದ ಈಜುಕೊಳವನ್ನು
ನಿರ್ಮಿಸಲಾಗಿತ್ತು. ಕಾರಣಾಂತರಗಳಿಂದ ಕೆಲವು
ವರ್ಷಗಳಿಂದ ಈಜುಕೊಳ ಸಾರ್ವಜನಿಕರ ಬಳಕೆಗೆ ಬಾರದ
ಕಾರಣದಿಂದ 5 ಕೋಟಿ ವೆಚ್ಚದಲ್ಲಿ ನವೀಕೃತಗೊಳಿಸಲು
ಸಿದ್ದತೆ ಮಾಡಲಾಗಿತ್ತು. ಇಂದು ಆಧುನಿಕ
ತಂತ್ರಜ್ಞಾನವನ್ನು ಅಳವಡಿಸಿಕೊಂಡು ಸುಮಾರು
ಎರಡೂಕಾಲು ಕೋಟಿ ವೆಚ್ಚದಲ್ಲಿ ಈಜುಕೊಳ
ನವೀಕೃತಗೊಂಡು ಶೀಘ್ರ ಸಾರ್ವಜನಿಕರ ಬಳಕೆ
ಲಭಿಸಲಿದೆ ಎಂದರು.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ
ಸರ್ಕಾರಿ ಶಾಲೆಯ ಸುಧಾರಣೆಗಾಗಿ ಸುಮಾರು 3 ಕೋಟಿ
ವೆಚ್ಚದಲ್ಲಿ ಚಾಮರಾಜಪೇಟೆ ಮೇನ್, ಭಾರತ್ ಕಾಲೋನಿ,
ಬಸಾಪುರ, ಗಡಿಯಾರ ಕಂಬ ಮತ್ತು ಕರೂರು ಸರ್ಕಾರಿ
ಶಾಲೆಗಳಲ್ಲಿ 20 ಕೊಠಡಿಗಳು ಮತ್ತು
ಶೌಚಾಲಯಗಳನ್ನುನಿರ್ಮಿಸಲಾಗುತ್ತಿದ್ದು, ಸರ್ಕಾರಿ ಶಾಲಾ
ಮಕ್ಕಳು ಖಾಸಗಿ ಶಾಲೆಗಳಲ್ಲಿರುವಂತೆ ವಾತಾವರಣ
ಕಲ್ಪಿಸಲಾಗುವುದು ಎಂದರು.
ಇನ್ನು ದಾವಣಗೆರೆ ನಗರದ ಪ್ರತಿಷ್ಠಿತ
ವೃತ್ತವಾಗಿರುವ ವೀರ ಮದಕರಿ ನಾಯಕ ವೃತ್ತದ ಬಳಿ
ದುರ್ಗಾಂಬಿಕಾ ಸಮುದಾಯ ಭವನವನ್ನು 3.28 ಕೋಟಿ
ರೂ ವೆಚ್ಚದಲ್ಲಿ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಸಲಹೆಯಂತೆ
ಆಧುನಿಕ ಸ್ಪರ್ಶದೊಂದಿಗೆ ನಿರ್ಮಿಸಿದ್ದು, ಇಂದು ಜಿಲ್ಲಾ
ಸಚಿವರಿಂದ ಉದ್ಘಾಟನೆಗೊಳಿಸುತ್ತಿರುವುದಕ್ಕೆ ಸಂತಸ
ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಂಸದ ಜಿ.ಎಂ.ಸಿದ್ದೇಶ್, ಜಿಲ್ಲಾಧಿಕಾರಿ
ಮಹಾಂತೇಶ್ ಬೀಳಗಿ, ಎಸ್ಪಿ ರಿಷ್ಯಂತ್, ಮೇಯರ್ ವಿರೇಶ್,
ಮಹಾನಗರ ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್,
ಸದಸ್ಯರುಗಳಾದ ಎ.ಬಿ.ರಹೀಂಸಾಬ್, ಕೆ.ಚಮನ್‍ಸಾಬ್,
ವಿನಾಯಕ ಪೈಲ್ವಾನ್, ಕಬೀರ್, ಜಾಕೀರ್‍ಅಲಿ, ಶ್ರೀಮತಿ
ಹುರ್‍ಬಾನು(ಪಂಡಿತ್) ಉದಯ್‍ಕುಮಾರ್, ಡೂಡಾ ಅಧ್ಯಕ್ಷ
ಶಿವಕುಮಾರ್, ಮಾಜಿ ಅಧ್ಯಕ್ಷ ಅಯೂಬ್ ಪೈಲ್ವಾನ್, ಕಾಂಗ್ರೆಸ್
ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕೊಡಪಾನ ದಾದಾಪೀರ್,
ಮಹಾನಗರ ಪಾಲಿಕೆ ಹಾಗೂ ಸ್ಮಾರ್ಟ್‍ಸಿಟಿ ಅಧಿಕಾರಿಗಳು
ಭಾಗವಹಿಸಿದ್ದರು.