ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್. ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಬಸವಕಲ್ಯಾಣದ ಆಧುನಿಕ ಅನುಭವ ಮಂಟಪ ಮತ್ತು ಸುತ್ತಮುತ್ತಲ ಶರಣ ಸ್ಮಾರಕಗಳ ಅಭಿವೃದ್ಧಿ ಕುರಿತಂತೆ ಸಭೆಯಲ್ಲಿ ನೀಡಿದ ಸಲಹೆಗಳು:-

ನೂತನ ಆಧುನಿಕ ಅನುಭವ ಮಂಟಪ ನಿರ್ಮಾಣಕ್ಕೆ 100 ಎಕರೆ ಜಮೀನಿನ ಅಗತ್ಯವಿದೆ. ಸರ್ಕಾರದ ಬಳಿ ಇರುವ 20 ಎಕರೆ ಮತ್ತು ದಾನವಾಗಿ ಬಂದಿರುವುದು 11 ಎಕರೆ ಸೇರಿ, ಇನ್ನೂ ಅಗತ್ಯವಿರುವ 69 ಎಕರೆ ಭೂಮಿಗಾಗಿ ಸರ್ಕಾರದ ನೂತನ ಕಾಯಿದೆಯ ರೀತ್ಯ “ಕನ್ಸೆಂಟ್ ಅವಾರ್ಡ್’ನಂತೆ ಭೂ ಮಾಲೀಕರನ್ನೂ ಕರೆದು ಸಭೆ ನಡೆಸಿ, ಮಾರುಕಟ್ಟೆ ಮೌಲ್ಯಕ್ಕೆ ಭೂಮಿಯನ್ನು ತ್ವರಿತವಾಗಿ ಖರೀದಿಸಬೇಕು.

ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ, ತಕ್ಷಣವೇ ಡಿಪಿಆರ್ ಅನುಮೋದನೆಗೆ ತಜ್ಞರ/ಪರಿಣತರ ಸಮಿತಿಯನ್ನು ರಚಿಸಬೇಕು.

ಬಸವಕಲ್ಯಾಣದ ಜೊತೆಗೆ ಬೀದರ್ ಜಿಲ್ಲೆಯಲ್ಲಿರುವ ಬಸವಣ್ಣನರು ಮತ್ತು ಹಲವು ಶಿವಶರಣರ ಪವಿತ್ರ ತಾಣಗಳ ಅಭಿವೃದ್ಧಿಗಾಗಿ ಜಿಲ್ಲೆಯ ಎಲ್ಲ ಶಾಸಕರನ್ನೂ ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯ ಸದಸ್ಯರನ್ನಾಗಿ ನಾಮಾಂಕನ ಮಾಡಿ ಎಲ್ಲ ಸಭೆಗೂ ಆಹ್ವಾನಿಸುವಂತೆ ಮನವಿ.

ಬಸವಕಲ್ಯಾಣವನ್ನು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಧಾರ್ಮಿಕ, ಆಧ್ಯಾತ್ಮಿಕ ಮತ್ತು ಪ್ರವಾಸಿತಾಣದಂತೆ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಜಿಲ್ಲೆಯ ಪವಿತ್ರ ಶರಣ ತಾಣಗಳ ಅಭಿವೃದ್ಧಿ ಮಾಡಬೇಕು.

ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಶ್ರೀ ಶರಣ ಹಿರೇಮಠ್ ಮತ್ತು ಶ್ರೀ ಶಿವಕುಮಾರ್ ಇವರಿಬ್ಬರೂ ಕೋವಿಡ್ ನಿಂದ ಮೃತಪಟ್ಟಿದ್ದು, ಇವರಿಗೆ 5 ಲಕ್ಷ ರೂಪಾಯಿ ಪರಿಹಾರ ನೀಡಬೇಕು.

Leave a Reply

Your email address will not be published. Required fields are marked *